ಕೆ.ಎಂ ಇಸ್ಮಾಯಿಲ್ ಕಂಡಕರೆ
(TOC ನ್ಯೂಸ್ ವಿಶೇಷ ವರದಿ)
ಕೊಡಗು ಜಿಲ್ಲೆ ಹಾಕಿಯಲ್ಲಿ ಕರ್ನಾಟಕದ ಪಂಜಾಬ್ , ಫುಟ್ಬಾಲ್ ನಲ್ಲಿ ಕರ್ನಾಟಕದ ಕೊಲ್ಕತ್ತಾ ಎಂಬ ಹೆಗ್ಗಳಿಕೆ ಪಾತ್ರವಾದ ಜಿಲ್ಲೆಯಾಗಿದೆ ಕಾವೇರಿ ತವರು ಕೊಡಗು.
ಜಿಲ್ಲೆಯೂ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟಕ್ಕೆ ಕ್ರೀಡಾ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದೆ, ಹಾಗೂ ನೀಡುತ್ತಾ ಬರುತ್ತಿದೆ.
ಜಿಲ್ಲೆಯಲ್ಲಿ ಹಾಕಿ ಕ್ರೀಡೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದೆ.
ಆದರೆ ಕೊಡಗಿನಲ್ಲಿ ಫುಟ್ಬಾಲ್ ಆಟಗಾರರ ಬಗ್ಗೆ ಒಂದು ಸಮೀಕ್ಷೆ ನಡೆಸಿದರೆ, ? ಗೊತ್ತಾಗುತ್ತೆ ಜಿಲ್ಲೆಯಲ್ಲಿನ ಫುಟ್ಬಾಲ್ ಆಟಗಾರರಲ್ಲಿ ಅಡಗಿರುವ ಪ್ರತಿಭೆ.
ಭಾರತ ತಂಡವನ್ನು ಪ್ರತಿನಿಧಿಸಿ ಬಲ್ಲ, ಆಟಗಾರರು ನಮ್ಮ ಜಿಲ್ಲೆಯಲ್ಲಿದ್ದಾರೆ.
ಆದರೆ ಆರ್ಥಿಕ ಸಮಸ್ಯೆ, ಒಂದೆಡೆಯಾದರೆ, ಮತ್ತೊಂದೆಡೆ ಸರಿಯಾದ ಮಾರ್ಗದರ್ಶನ, ಹಾಗೂ ತರಬೇತಿಯಿಲ್ಲದ ಕೊಡಗು ಜಿಲ್ಲೆಗೆ ಸೀಮಿತವಾದ ಅದೆಷ್ಟೋ ಆಟಗಾರರು ನಮ್ಮಲ್ಲಿದ್ದಾರೆ.
ಕಳೆದ ಮೂರು ವರ್ಷಗಳಿಂದ ಕುಶಾಲನಗರ ಸಮೀಪದ ಐಚ್ಚೆಟ್ಟೀರ ನರೇನ್ ಸುಬ್ಬಯ್ಯ(ಐಎನ್ಎಸ್) ಸ್ಪೋರ್ಟ್ಸ್ ಸೆಂಟರ್ ನಲ್ಲಿ ಜಿಲ್ಲೆಯ ಫುಟ್ಬಾಲ್ ಕ್ರೀಡಾಪಟುಗಳಿಗೆ ಅಂತಾರಾಷ್ಟ್ರೀಯ ಮಾದರಿಯಲ್ಲಿನ ಫುಟ್ಬಾಲ್ ಮಾರ್ಗದರ್ಶನ ಹಾಗೂ ತರಬೇತಿಯನ್ನು ಐಚ್ಚೆಟ್ಟೀರ ಪೊನ್ನಪ್ಪ ಅವರ ನೇತೃತ್ವದಲ್ಲಿ ನಡೆಯುತ್ತಿದೆ, ಅಲ್ಲದೇ ಫುಟ್ಬಾಲ್ ನೊಂದಿಗೆ ಷಟಲ್, ಹಾಗೂ ಕ್ರಿಕೆಟ್ ತರಬೇತಿ ಕೂಡ ನಡೆಯುತ್ತಿದೆ.
ಐಚೆಟ್ಟೀರ ಪೊನ್ನಪ್ಪ ಅವರು ಕಳೆದ ಮೂರು ವರ್ಷಗಳಿಂದ ಕೊಡಗಿನ ಫುಟ್ಬಾಲ್ ಪಟುಗಳಿಗೆ ಅಂತಾರಾಷ್ಟ್ರೀಯ ಆಟಗಾರನೊಬ್ಬರಿಂದ ಮಾರ್ಗದರ್ಶನ, ಹಾಗೂ ತರಬೇತಿಯನ್ನು ನೀಡಬೇಕೆಂದು ನಿರಂತರವಾಗಿ ಪ್ರಯತ್ನಿಸುತ್ತಿದ್ದರು.
ಇದೀಗ ಪೊನ್ನಪ್ಪನವರ ಪ್ರಯತ್ನಕ್ಕೆ ಜಯವಾಗಿದೆ ಎನ್ನಬಹುದು, ಕೊಡಗು ಜಿಲ್ಲೆಯಲ್ಲಿ ಇಂದಿನಿಂದ ಆರು ದಿನಗಳ ಕಾಲ "ಲೆಟ್ಸ್ ಫುಟ್ಬಾಲ್ ವಿತ್ ಇಯಾನ್ ಸೆಲ್ಲಿ" ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರ ಮೂಲ ಜಿಲ್ಲೆಯಲ್ಲಿ ಫುಟ್ಬಾಲ್ ಕ್ರೀಡೆಯಲ್ಲಿ ಎಲೆಮರೆ ಕಾಯಿಯಂತಿರುವ ಯುವ ಪ್ರತಿಭೆಗಳಿಗೆ ಒಂದು ಉತ್ತಮ ಅವಕಾಶವನ್ನು ಐಎನ್ಎಸ್ ಕ್ರೀಡಾ ಸೆಂಟರ್ ಒದಗಿಸಿಕೊಟ್ಟಿದೆ.
ಕೊಡಗು ಜಿಲ್ಲೆಯಲ್ಲಿ ಫುಟ್ಬಾಲ್ ಕ್ರೀಡಾಪಟುಗಳಿಗೆ ಕೊರತೆಯಿಲ್ಲ, ರಾಷ್ಟ್ರವನ್ನು ಪ್ರತಿನಿಧಿಸ ಬಲ್ಲ ಫುಟ್ಬಾಲ್ ಆಟಗಾರರು ಕೊಡಗಿನಲ್ಲಿದ್ದಾರೆ. ಆದರೆ ಅವರಿಗೆ ಉತ್ತಮ ತರಬೇತಿ, ಮಾರ್ಗದರ್ಶನ ಹಾಗೂ ಫುಟ್ಬಾಲ್ ನಲ್ಲಿ ಮುಂದೆ ಯಾವ ರೀತಿ ಸಾಗಬೇಕಾದ ವಿಷಯ ಬಗ್ಗೆ ಅರಿವಿಲ್ಲ,ಇದನ್ನು ಅರಿತು ಕೊಡಗು ಜಿಲ್ಲೆಗೆ ಅಂತಾರಾಷ್ಟ್ರೀಯ ಫುಟ್ಬಾಲ್ ಆಟಗಾರ ಇಯಾನ್ ಸೆಲ್ಲಿ ಅವರಿಂದ ಮಾರ್ಗದರ್ಶನ ನೀಡಲಾಗುತ್ತಿದೆ ಇದರ ಸದುಪಯೋಗವನ್ನು ಜಿಲ್ಲೆಯ ಯುವ ಕ್ರೀಡಾಪಟುಗಳು ಪಡೆದುಕೊಳ್ಳಬೇಕು ಎನ್ನುತ್ತಾರೆ ಐಚ್ಚೆಟ್ಟೀರ ಪೊನ್ನಪ್ಪ ಅವರು.
ಫುಟ್ಬಾಲ್ ಆಟವನ್ನು ಎಲ್ಲರಿಗೂ ಆಡಬಹುದು. ಆದರೆ ಉತ್ತಮ ಫುಟ್ಬಾಲ್ ಪಟು ಆಗಲು ಚಿಕ್ಕ ವಯಸ್ಸಿನಲ್ಲೇ ಫುಟ್ಬಾಲ್ ಬಗ್ಗೆ ಆಸಕ್ತಿ, ಏಕಾಗ್ರತೆ, ಹಾಗೂ ಶ್ರದ್ದೆ ವಹಿಸಿದವರು ಮಾತ್ರ ಫುಟ್ಬಾಲ್ ಕ್ರೀಡೆಯಲ್ಲಿ ಸಾಧನೆ ಮಾಡಿದ್ದು ಎಂದು ನಮಗೆ ಇತಿಹಾಸ ಹೇಳುತ್ತಿದೆ.
ಲಾಜಿಕಲ್ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ಮತ್ತು ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಸಹಯೋಗದಲ್ಲಿ ನಡೆಯುವ "ಲೆಟ್ಸ್ ಫುಟ್ಬಾಲ್ ವಿತ್ ಇಯಾನ್ ಸೆಲ್ಲಿ" ವಿನೂತನ ಕಾರ್ಯಕ್ರಮದಲ್ಲಿ ೧೦ ರಿಂದ ೧೪ ವರ್ಷ ವಯೋಮಿತಿಯೊಳಗಿನ ೪೦ಕ್ಕೂ ಹೆಚ್ಚು ಫುಟ್ಬಾಲ್ ಪ್ರತಿಭೆಗಳಿಗೆ "ಇಯಾನ್ ಸಿಲ್ಲಿ ಅವರು ತರಬೇತಿ ನೀಡುವರು.
ತರಬೇತಿಯಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ಐಎನ್ಎಸ್ ಸ್ಪೋರ್ಟ್ಸ್ ಸೆಂಟರ್ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
*ಅಂತಾರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸಿದ ಮಿಡ್ ಫೀಲ್ಡರ್ " ಇಯಾನ್ ಸೆಲ್ಲಿ*
ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವರು ಫುಟ್ಬಾಲ್ ಕ್ರೀಡೆಯಲ್ಲಿ ತಮ್ಮ ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸಿದೆ.
ಅತ್ಯುತ್ತಮ "ಮಿಡ್ ಫೀಲ್ಡರ್ " ಆಗಿ ಇಯಾನ್ ಸೆಲ್ಲಿ ಅವರು ಫುಟ್ಬಾಲ್ ನಲ್ಲಿ ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ವಿಶ್ವದಲ್ಲೇ ಅತ್ಯಂತ ಹೆಚ್ಚು ಹೆಗ್ಗಳಿಕೆ ಹಾಗೂ ಅಭಿಮಾನಿಗಳನ್ನೊಂದಿರುವ "ಆರ್ಸೆನಲ್ ಫುಟ್ಬಾಲ್ ಕ್ಲಬ್ ನಲ್ಲಿ ಆಡಿ ಅನುಭವಿರುವ ಆಟಗಾರನಾಗಿದ್ದಾನೆ " ಇಯಾನ್ ಸೆಲ್ಲಿ".
1994 ರಲ್ಲಿ ಯೂರೋಪಿಯನ್ ಕಪ್ ತನ್ನದಾಗಿಸಿಕೊಂಡಿದ್ದ "ಆರ್ಸೆನಲ್ " ತಂಡದಲ್ಲಿ ಯುವ ಮಿಲ್ಡ್ ಫೀಲ್ಡರ್ ಆಗಿ ಛಾಪು ಮೂಡಿಸಿ ಆಟಗಾರ ಇಯಾನ್ ಸೆಲ್ಲಿ.
ಇವರು ಪ್ರಸ್ತುತ ದುಬೈನ್ ಆರ್ಸೆನಲ್ ಸಾಕರ್ ಸ್ಕೂಲ್ ನ ಮುಖ್ಯ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇಯಾನ್ ಸೆಲ್ಲಿ ಕೊಡಗು ಜಿಲ್ಲೆಗೆ ಆಗಮಿಸುತ್ತಿರುವುದು ಫುಟ್ಬಾಲ್ ಪಟುಗಳಿಗೆ ಇದೊಂದು ಸುವರ್ಣವಕಾಶವಾಗಿದೆ.ಇದರ ಸದುಪಯೋಗವನನ್ನು ಕೊಡಗಿನ ಯುವ ಫುಟ್ಬಾಲ್ ಪಟುಗಳು ಪಡೆಯಬೇಕಾಗಿದೆ.
ಇಯಾನ್ ಸೆಲ್ಲಿ ಅವರಿಗೆ ಇರುವ ಅನುಭವವನ್ನು ಬಳಸಿಕೊಳ್ಳಬೇಕಾಗಿದೆ, ಅಲ್ಲದೇ ಫುಟ್ಬಾಲ್ ನಲ್ಲಿ ಮುಂದೆ ಯಾವ ರೀತಿ ಸಾಗಿದರೆ ಯಶಸ್ಸು ಕಾಣಬಹುದು ಎಂಬುದರ ಬಗ್ಗೆ ಪೋಷಕರು ಹಾಗೂ ಕ್ರೀಡಾಪಟುಗಳು ಮಾಹಿತಿ ಪಡೆಯಬೇಕಾಗಿದೆ .
ಅಂತಾರಾಷ್ಟ್ರೀಯ ಮಟ್ಟದ ಖ್ಯಾತ ಫುಟ್ಬಾಲ್ ಪಟು "ಇಯಾನ್ ಸೆಲ್ಲಿ" ಅವರ ತರಬೇತಿಗೆ ಜಿಲ್ಲೆಯಲ್ಲಿನ ಫುಟ್ಬಾಲ್ ಕ್ಲಬ್‌ಗಳು, ಶಾಲೆಗಳ ಪ್ರತಿಭಾವಂತ ಫುಟ್ಬಾಲ್ ಪಟುಗಳು ಇದರ ಸದುಪಯೋಗ ಪಡೆಯಬೇಕಾಗಿದೆ.
"ಇಯಾನ್ ಸೆಲ್ಲಿ" ಅವರು ಅಕ್ಟೋಬರ್ ೦೬ ರಂದು ಪಾಲಿಪೆಟ್ಟ, ೭ ರಂದು ರಂಗಸಮುದ್ರ, ೮ರಂದು ಸುಂಟಿಕೊಪ್ಪ , ೦೯ ರಂದು ಮರಗೋಡಿಗೆ ಭೇಟಿ ನೀಡಲಿದ್ದಾರೆ.
ಹಾಗೂ ಅವರಿಗೆ ಪುಟ್ಟ ಜಿಲ್ಲೆ ಕೊಡಗಿನಲ್ಲಿ ಯಾವ ರೀತಿಯಲ್ಲಿ ಫುಟ್ಬಾಲ್ ಬೆಳವಣಿಗೆಯಿದೆ ಎಂಬುದರ ಬಗ್ಗೆ ಮಾಹಿತಿ ನೀಡಲಾಗುವುದೆಂದು ಐಚೆಟ್ಟೀರ ಪೊನ್ನಪ್ಪ ತಿಳಿಸಿದ್ದಾರೆ.
"ಇಯಾನ್ ಸೆಲ್ಲಿ" ಅವರ ಆಗಮನ ಕೊಡಗು ಜಿಲ್ಲೆಯ ಫುಟ್ಬಾಲ್ ಕ್ರೀಡೆಯೂ ಬೆಳವಣಿಗೆ ಸಹಾಯಕಾರಿಯಾಗಲಿದೆ.ಇದರ ಸದುಪಯೋಗವನ್ನು ಎಲ್ಲರೂ ಪಡೆಯಬೇಕಾಗಿದೆ.
"ಐಚೆಟ್ಟೀರ ಪೊನ್ನಪ್ಪ ಅವರ ಶ್ರಮಕ್ಕೆ ಬಿಗ್ ಸೆಲ್ಯೂಟ್" ಇವರ ಪ್ರಯತ್ನಕ್ಕೆ ಶುಭವಾಗಲಿ ಎಂದು ಹಾರೈಸುವ...
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:9900785141, 9845002737.....
GET NEWS UPDATES ON YOUTUBE
GET NEWS UPDATES ON YOUTUBE




No comments
Post a Comment