ನಾಳೆಯಿಂದ ಜೂನ್ 30 ರವರೆಗೆ ಕ್ಷೌರಿಕರ ಅಂಗಡಿ ಸ್ವಯಂ ಪ್ರೇರಿತ ಬಂದ್
ಸಿದ್ಧಾಪುರ (Times Of Coorg ) : ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ಸಂಬಂಧ ವಿರಾಜಪೇಟೆ ತಾಲೋಕಿನ ಎಲ್ಲಾ ಹೇರ್ ಕಟ್ಟಿಂಗ್ ಷಾಪ್ ಗಳನ್ನು 30ರವರವರೆಗೆ ಸ್ವಯಂ ಪ್ರೇರಿತ ಮುಚ್ಚಲು ತೀರ್ಮಾನಿಸಲಾಗಿದೆ.
ವರ್ತಕರ ಹಾಗೂ ಗ್ರಾಹಕರ ಆರೋಗ್ಯದ ಧೃಷ್ಠಿಯಿಂದ ಸ್ವಯಂ ಪ್ರೇರಿತವಾಗಿ ಅಂಗಡಿ ಬಂದ್ ಮಾಡುವಂತೆ ಸವಿತಾ ಸಮಾಜ ವಿರಾಜಪೇಟೆ ತಾಲೂಕು ಅಧ್ಯಕ್ಷ ಕೆ.ಟಿ.ವೆಂಕಟೇಶ್ ರವರು ಮನವಿ ಮಾಡಿರುವುದಾಗಿ ಸಿದ್ದಾಪುರದ ನ್ಯೂ ಕೂರ್ಗ ಹೇರ್ ಡ್ರೇಸ್ಸಸ್ ನ ಮಾಲಿಕರಾದ ದಿನೇಶ್ ರವರು ಮಾಹಿತಿ ನೀಡಿದರು.

No comments
Post a Comment