ಸುರಕ್ಷಾ ಕ್ರಮಗಳೊಂದಿಗೆ ಕೊಡ್ಲಿಪೇಟೆ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದ 190 ವಿಧ್ಯಾರ್ಥಿಗಳು

No comments

ಕೊಡ್ಲಿಪೇಟೆ (Times Of Coorg) : ಕೊಡ್ಲಿಪೇಟೆ ಪದವಿ ಪೂರ್ವ ಕಾಲೇಜಿನಲ್ಲಿ ಇವತ್ತು 10 ನೇ ತರಗತಿಯ  ವಿದ್ಯಾರ್ಥಿಗಳಿಗೆ ಪ್ರಥಮ ಪರೀಕ್ಷೆ ನಡೆಯಿತು . ಒಟ್ಟು 190 ವಿದ್ಯಾರ್ಥಿಗಳು ಪರೀಕ್ಷೆ ಬರೆದರು.

ಪರೀಕ್ಷೆಯ ಪ್ರಥಮ ದಿನ ಕೊಡ್ಲಿಪೇಟೆ ವಿದ್ಯಾ ಸಂಸ್ಥೆ ಯ ಪ್ರೌಡ ಶಾಲೆ. ಸಂತ ಅನ್ನಮ್ಮ ಶಾಲೆ. ಕೊಡ್ಲಿಪೇಟೆ ನಗರ ಸರಕಾರಿ ಪ್ರೌಡ ಶಾಲೆ. ಬೆಸೂರು ಸರಕಾರಿ ಪ್ರೌಡ ಶಾಲೆ. ಕಿರಿಕೊಡ್ಲಿ ಮಠ ಶಾಲೆ . ಕಲ್ಲು ಮಠ ಶಾಲೆ .ಮೊರಾರ್ಜಿ ದೇಸಾಯಿ ವಸತಿ ಶಾಲೆ .ಒಟ್ಟು 7 ಶಾಲೆಗಳ 190 ವಿದ್ಯಾರ್ಥಿಗಳು ಬಾಗವಹಿಸಿದರು.ಎರಡು ವಿದ್ಯಾರ್ಥಿಗಳು ಗ್ಯೆರು ಹಾಜರಾಗಿದ್ದಾರೆಂದು ಶಾಲೆಯ ಮುಖ್ಯ ಶಿಕ್ಷಕರಾದ ಅಬ್ದುಲ್ ರಬ್ಬ್ ರವರು ತಿಳಿಸಿದರು.

ಪರೀಕ್ಷೆ ಬರೆಯಲು ಆಗಮಿಸಿದ ವಿದ್ಯಾರ್ಥಿಗಳು ಮಾಸ್ಕ್ ಧರಿಸಿ ಸಮಾಜಿಕ ಅಂತರ ಕಾಪಾಡಿಕೊಂಡು ತರಗತಿಗಳಿಗೆ ತೆರಳಿದರು.

ಆರೋಗ್ಯಾದಿಕಾರಿಗಳು ಹಾಗೂ ಆಶಾ ಕಾರ್ಯಕರ್ತರೆಯರು ಪರೀಕ್ಷಾ ಕೇಂದ್ರದ ಮುಖ್ಯ ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕಿನಿಂಗ್ ನಡೆಸಿ ಕ್ಯೆಗಳಿಗೆ ಸ್ಯಾನಿಟ್ಯೆಸ್ ಮಾಡಿಸಿದರು.

ಕೊಡ್ಲಿಪೇಟೆ ಉಪ ಠಾಣೆಯ ಪೊಲೀಸರು ಪರೀಕ್ಷಾ ಕೇಂದ್ರದ ಸುತ್ತಲೂ ಸೂಕ್ತ ಭದ್ರತೆ ಯನ್ನು
ಮಾಡಿದ್ದರು.

No comments

Post a Comment