ಕೊಡಗು ಜಿಲ್ಲೆಯಲ್ಲಿ 2 ಹೊಸ ಕೋವಿಡ್ ಪ್ರಕರಣಗಳು : ಸೋಂಕಿತರ ಸಂಖ್ಯೆ 30ಕ್ಕೆ ಏರಿಕೆ
ಮಡಿಕೇರಿ (Times Of Coorg) : ಕೊಡಗು ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು, ಕೊರೋನಾ ಸೋಂಕಿತರ ಸಂಖ್ಯೆ 30 ತಲುಪಿದೆ. ಶಿರಂಗಾಲದ ಹಣ್ಣಿನ ವ್ಯಾಪಾರಿ ಸಂದರ್ಶಿಸಿದ್ದ ಸೋಮವಾರಪೇಟೆ ಪಟ್ಟಣ ಸಮೀಪದ ಕರ್ಕಳ್ಳಿ ಬಾಣೆಯ 14 ವರ್ಷದ ಬಾಲಕಿ, ಖತಾರ್ ನಿಂದ ಆಗಮಿಸಿದ್ದ ಮಡಿಕೇರಿ ತಾಲೂಕಿನ ಕೊಳಗ ದಾಳುವಿನ 26 ವರ್ಷದ ಯುವಕನಲ್ಲಿ ಸೋಂಕು ಧೃಡಪಟ್ಟಿದೆ.
>>> ಜಿಲ್ಲಾಡಳಿತದ ಮಾಹಿತಿ
ಕೋವಿಡ್-19 ರ ಸಂಬಂಧ ಪತ್ರಿಕಾ ಪ್ರಕಟಣೆ
ಕೊಡಗು ಜಿಲ್ಲೆಯಲ್ಲಿ ಕೋವಿಡ್-19 ರ ಸಂಬಂಧ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಇತರೆ ದೇಶ/ರಾಜ್ಯಗಳಿಂದ ಪಾಸ್ ಗಳನ್ನು ಪಡೆದು ಜಿಲ್ಲೆಗೆ ಪ್ರವೇಶಿಸಿರುವ ಜನರನ್ನು ಕಡ್ಡಾಯವಾಗಿ ನಿಯಮಾನುಸಾರ ಸಂಪರ್ಕ ತಡೆಯಲ್ಲಿಡಲಾಗುತ್ತಿದೆ.
ಇತರೆ ದೇಶ/ರಾಜ್ಯ/ಜಿಲ್ಲೆಗಳಿಂದ ಕಳೆದ 14 ದಿನಗಳಲ್ಲಿ ಪಾಸ್ ಗಳನ್ನು ಪಡೆದು ಜಿಲ್ಲೆಗೆ ಪ್ರವೇಶಿಸಿರುವ ಜನರ ಪೈಕಿ ಸಂಪರ್ಕ ತಡೆಯಲ್ಲಿರುವ ಜನರ ವಿವರ ಕೆಳಕಂಡಂತಿದೆ.
1. ಇತರೆ ದೇಶದ ಜನರು- 06
2. ಇತರೆ ರಾಜ್ಯದ ಜನರು-519
3. ಒಟ್ಟು ಜನರು-525
ಪ್ರಯೋಗಾಲಯ ಪರೀಕ್ಷಾ ವರದಿ ವಿವರ:
ಇಲ್ಲಿಯವರೆಗೆ ಒಟ್ಟು 6807 ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿದೆ.
• ಪಾಸಿಟಿವ್ ಪ್ರಕರಣಗಳು- 30 (ಮೂವರು ಗುಣಮುಖರಾಗಿದ್ದಾರೆ)
• ನೆಗೆಟಿವ್ ವರದಿ ಬಂದ ಪ್ರಕರಣಗಳು-5394
• ವರದಿ ನಿರೀಕ್ಷಿತ ಪ್ರಕರಣಗಳು-847
ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿರುವ ಪ್ರಕರಣಗಳು:
ಪ್ರಸ್ತುತ ಕೋವಿಡ್ ಆಸ್ಪತ್ರೆಯಲ್ಲಿ 121 ಜನರು ದಾಖಲಿರುತ್ತಾರೆ.
ಇತರೆ ವಿಷಯಗಳು:
ಕೋವಿಡ್-19 ರ ಸಂಬಂಧ ಜಿಲ್ಲೆಯಲ್ಲಿ ಒಟ್ಟು 15 ನಿಯಂತ್ರಿತ ವಲಯಗಳನ್ನು (Containment Zone) ಮಾಡಲಾಗಿದೆ. ತಾಲ್ಲೂಕುವಾರು ವಿವರ ಕೆಳಕಂಡಂತಿದೆ.
1. ಮಡಿಕೇರಿ ತಾಲ್ಲೂಕು ಒಟ್ಟು -07 (ಓಂಕಾರೇಶ್ವರ ದೇವಸ್ಥಾನ ರಸ್ತೆ, ಡೈರಿ ಫಾರಂ, ಕೋಟೆ ಮಾರಿಯಮ್ಮ ದೇವಸ್ಥಾನ ರಸ್ತೆ, ಪುಟಾಣಿ ನಗರ, ತಾಳತ್ ಮನೆ ಹತ್ತಿರ, ಕಗ್ಗೋಡ್ಲು, ಕೊಳಗದಾಳು)
2. ಸೋಮವಾರಪೇಟೆ ಒಟ್ಟು -06 (ಕೊಡ್ಲಿಪೇಟೆ ಬಳಿಯ ಶಿರಂಗಾಲ, ದೊಡ್ಡಳ್ಳಿ, ಮುಳ್ಳೂರು, ಬಳಗುಂದ, ಮತ್ತು ಕುಶಾಲನಗರ ಪೇಟೆಯ ರಥಬೀದಿ, ಕರ್ಕಳ್ಳಿ ಬಾಣೆ)
3. ವಿರಾಜಪೇಟೆ ಒಟ್ಟು -02 ( ಬಿಟ್ಟಂಗಾಲ ಮತ್ತು ಪಾಲಿಬೆಟ್ಟ)
ನಿಯಂತ್ರಿತ ಪ್ರದೇಶದಲ್ಲಿರುವ ಮನೆಗಳಿಗೆ ಜಿಲ್ಲಾಡಳಿತದವತಿಯಿಂದ ದಿನನಿತ್ಯದ ಬಳಕೆಯ ಸಾಮಾಗ್ರಿಗಳನ್ನು ಪೂರೈಸಲಾಗುವುದು.


No comments
Post a Comment