ಮಡಿಕೇರಿ ( Times Of Coorg ) : ದೇಶ ಹಾಗೂ ರಾಜ್ಯದಲ್ಲಿ ಸಾಂಕ್ರಾಮಿಕವಾಗಿ ಹರಡುತ್ತಿರುವ COVID-19 ಗೆ ಸಂಬಂಧಿಸಿದಂತೆ, ಕೊರೋನಾ ವೈರಸ್ಸನ್ನು ನಿಯಂತ್ರಣಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದ್ದು ಕೊರೋನಾ ವೈರಸ್ ಸಂಬಂಧ ಯಾವುದೇ ತಪ್ಪು ಮಾಹಿತಿ ಅಥವಾ ಯಾವುದೇ ಒಂದು ಕೋಮಿನ ಬಗ್ಗೆ ಪರ-ವಿರೋಧವಾಗಿ ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಮೂಲಕವಾಗಲಿ ಅಥವಾ ಧ್ವನಿ ಸುರುಳಿಯ ಮೂಲಕವಾಗಲಿ ಮಾಹಿತಿಗಳನ್ನು ಹರಿಯಬಿಡುವುದು, ಶಿಕ್ಷಾರ್ಹ ಅಪರಾಧವಾಗಿದೆ ಆದುದರಿಂದ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ವಾಟ್ಸಪ್ ಮತ್ತು ಇತರೆ ಯಾವುದೇ ರೀತಿಯ ಮಾಧ್ಯಮಗಳಲ್ಲಿ ಯಾವುದೇ ಕೋಮಿನ ಬಗ್ಗೆ ಇಲ್ಲ ಸಲ್ಲದ ವಿಚಾರಗಳನ್ನು ಹರಡಲು ಪ್ರಯತ್ನಿಸಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಗೆ ಧಕ್ಕೆ ಉಂಟುಮಾಡಿದರೆ ಅಂತಹವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿ ಹಾಗೂ ಸ್ಥಳೀಯ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಜರುಗಿಸಲಾಗುವುದು. ಆದ್ದರಿಂದ ಜಿಲ್ಲೆಯ ನಾಗರಿಕರು ಯಾವುದೇ ರೀತಿಯ ವಿದ್ಯುನ್ಮಾನ ಅಥವಾ ಇನ್ನಿತರೆ ಯಾವುದೇ ರೀತಿಯ ಮಾಧ್ಯಮಗಳಲ್ಲಿ ಕೋರೋನಾ ವೈರಸ್ ಸಂಬಂಧಿಸಿದಂತೆ ಯಾವುದೇ ರೀತಿಯ ತಪ್ಪು ಮಾಹಿತಿಗಳನ್ನು ಹರಡುವುದಾಗಲೀ, ಯಾವುದೇ ಕೋಮು, ಜಾತಿ, ಧರ್ಮಗಳ ವಿರುದ್ದ ಅವಹೇಳನಕಾರಿ ಸಂದೇಶಗಳನ್ನು ವಿಡಿಯೋ / ಆಡಿಯೋ ಮೂಲಕ ಪ್ರಸರಿಸದಂತೆ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಕೋರಲಾಗಿದೆ.
No comments
Post a Comment