ಕೊರೊನಾ ವಿರುದ್ಧ ಅಮೆರಿಕಾ-ಭಾರತ ಒಗ್ಗಟ್ಟಿನ ಹೋರಾಟ: ಟ್ರಂಪ್‌-ಮೋದಿ ನಿರ್ಧಾರ


ದೆಹಲಿ ( Times Of Coorg ): ಜಾಗತಿಕ ತಲ್ಲಣ ಸೃಷ್ಟಿಸಿರುವ ಮಹಾಮಾರಿ ಕೊರೊನಾ ವೈರಸ್‌ ವಿರುದ್ಧ ಒಗ್ಗೂಡಿ ಹೋರಾಡಲು ಭಾರತ ಮತ್ತು ಅಮೆರಿಕಾನಿರ್ಧರಿಸಿವೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಜೊತೆ ಶನಿವಾರ ಪ್ರಧಾನಿ ನರೇಂದ್ರ ಮೋದಿಸುದೀರ್ಘ ಮಾತುಕತೆ ನಡೆಸಿದರು. ಈ ವೇಳೆ ಕೋವಿಡ್‌-19 ವಿರುದ್ಧ ಎರಡೂ ರಾಷ್ಟ್ರಗಳು ತಮ್ಮ ಸಹಭಾಗಿತ್ವವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವ ನಿರ್ಧಾರಕ್ಕೆ ಬಂದಿವೆ.

“ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರೊಂದಿಗೆ ಸುದೀರ್ಘ ದೂರವಾಣಿ ಸಂಭಾಷಣೆ ನಡೆಸಿದೆ. ನಾವು ಉತ್ತಮ ಚರ್ಚೆ ನಡೆಸಿದೆವು ಮತ್ತು ಕೋವಿಡ್‌-19 ವಿರುದ್ಧ ಹೋರಾಡಲು ಭಾರತ - ಅಮೆರಿಕಾ ಸಹಭಾಗಿತ್ವದ ಸಂಪೂರ್ಣ ಶಕ್ತಿಯನ್ನು ಬಳಸಿಕೊಳ್ಳಲು ಒಪ್ಪಿದೆವು,” ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಟ್ಟೀಟ್‌ ಮಾಡಿದ್ದಾರೆ.

ಚೀನಾದ ಬಳಿಕ ಇದೀಗ ಅಮೆರಿಕಾ ಕೊರೊನಾ ವೈರಸ್‌ನ ಕೇಂದ್ರವಾಗಿ ಮಾರ್ಪಟ್ಟಿದೆ. ದೇಶದಲ್ಲಿ ಬರೋಬ್ಬರಿ 2,78,568 ಜನರು ಕೊರೊನಾ ಸೋಂಕಿನಿಂದ ಬಳಲುತ್ತಿದ್ದು, ರೋಗಕ್ಕೆ 7,163 ಜನರು ಸಾವನ್ನಪ್ಪಿದ್ದಾರೆ.