ಸಿದ್ದಾಪುರ : ಅನಗತ್ಯವಾಗಿ ವಾಹನಗಳಲ್ಲಿ ಓಡಾಡಿದರೆ ವಾಹನ ಮುಟ್ಟುಗೋಲು

No comments

ಸಿದ್ದಾಪುರ (Times Of Coorg): ಅನಗತ್ಯವಾಗಿ ಸಿದ್ದಾಪುರ ಪಟ್ಟಣಕ್ಕೆ ವಾಹನಗಳಲ್ಲಿ ಓಡಾಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.ಈಗಾಗಲೇ ಪಟ್ಟಣಕ್ಕೆ ಆಗಮಿಸುತ್ತಿರುವ ವಾಹನಗಳನ್ನು ಪೊಲೀಸರು
ತಪಾಸಣೆ ಮಾಡುತ್ತಿದ್ದಾರೆ.

ಮೊದಲ ಹಂತದಲ್ಲಿ ಚಾಲಕರ ಹಾಗೂ ವಾಹನಗಳ ಮಾಹಿತಿಯನ್ನು ಕಲೆಹಾಕುತ್ತಿದ್ದು, ಎರಡನೇ ಬಾರಿಗೆ ಅನಗತ್ಯವಾಗಿ ಪಟ್ಟಣಕ್ಕೆ ಬಂದರೆ ವಾಹನಗಳನ್ನು ಮುಟ್ಟುಗೋಲು ಹಾಕುವ ಎಚ್ಚರಿಕೆ ನೀಡುತ್ತಿದ್ದಾರೆ. 

ಮುಖ್ಯ ರಸದತೆಗಳಲ್ಲಿ ಸಿದ್ದಾಪುರ ಠಾಣಾಧಿಕಾರಿ ಬೋಜಪ್ಪ ನೇತೃತ್ವದಲ್ಲಿ ಉಪ ಠಾಣಾಧಿಕಾರಿ ಪೆರೇರ ಹಾಗೂ ತಮ್ಮಯ್ಯ ಮತ್ತು ಸಿಬ್ಬಂದಿಗಳಿಂದ ವಾಹನಗಳ ತಪಾಸಣೆ ಹಾಗೂ ಚಾಲಕರಿಗೆ ಎಚ್ಚರಿಕೆ ನೀಡಿದ್ದಾರೆ.

No comments

Post a Comment