ಸಿದ್ದಾಪುರ (Times Of COORG): ಕೊರೋನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದ ಸಾಮಾಜಿಕ ಕಾರ್ಯಕರ್ತನ ವಿರುದ್ದ ಪ್ರಕರಣ ದಾಖಲಿಸಿರುವುದನ್ನು ಖಂಡಿಸುವುದಾಗಿ ಸಿಟಿ ಬಾಯ್ಸ್ ಯುವಕ ಸಂಘದ ಪ್ರಮುಖರಾದ ರತೀಶ್ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು, ಸಿದ್ದಾಪುರದಲ್ಲಿ ಏ.1 ರಂದು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಹಾಗೂ ಕೊರೋನಾ ಬಗ್ಗೆ ಅಜೀಜ್ ಅವರು ವಾಹನದಲ್ಲಿ ಮೈಕ್ ಬಳಸಿ ಜಾಗೃತಿ ಮೂಡಿಸುತ್ತಿದ್ದರು. ಗ್ರಾ.ಪಂ ಮಾಡಬೇಕಾದ ಕೆಲಸವನ್ನು ಅಜೀಜ್ ಮಾಡಿದ್ದು, ಇದನ್ನು ಪ್ರಶಂಶಿಸಿ, ಮತ್ತಷ್ಟು ಉತ್ತೇಜನ ನೀಡಬೇಕಾದ ಗ್ರಾ.ಪಂ ಅಧ್ಯಕ್ಷರು ಹಾಗೂ ವಲಯ ಕಾಂಗ್ರೆಸ್ ಅಧ್ಯಕ್ಷರು ವೈಯುಕ್ತಿಕ ದ್ವೇಶದಿಂದ ದೂರು ನೀಡಿ ಪ್ರಕರಣ ದಾಖಲಿಸಿದ್ದಾರೆ. ಟಾಸ್ಕ್ ಫೋರ್ಸ್ ನಲ್ಲಿ ಗ್ರಾ.ಪಂ ಅಧ್ಯಕ್ಷರು ಇರುವುದು ಮತ್ತು ಪ್ರಶ್ನಿಸುವುದು ಸಹಜ. ಆದರೇ ವಲಯ ಕಾಂಗ್ರೆಸ್ ಅಧ್ಯಕ್ಷರು ಇದನ್ನು ಪ್ರಶ್ನಿಸಲು ಯಾವ ಅಧಿಕಾತವಿದೆ ಎಂದು ಪ್ರಶ್ನಿಸಿದರು. ಈ ಹಿಂದೆ ಗ್ರಾ.ಪಂ ಜನರಲ್ಲಿ ಜಾಗೃತಿ ಮೂಡಿಸಲು ವಿಫಲವಾದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಜನರು ಗುಂಪು ಸೇರಿದ್ದರು. ಪೊಲೀಸರು ಕೂಡ ಜನರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು. ಇದೇ ಕಾರಣದಿಂದ ಸಾಮಾಜಿಕ ಕಳಕಳಿಯಿಂದ ಅಜೀಜ್ ಅವರು ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದರು. ಆದರೇ ಇದನ್ನು ಸಹಿಸದ ಅಧ್ಯಕ್ಷ ಹಾಗೂ ವಲಯ ಕಾಂಗ್ರೆಸ್ ಅಧ್ಯಕ್ಷ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭ ಸಂಘದ ಪ್ರಮುಖರಾದ ಅನೀಶ್, ಅಫ್ಸಲ್, ಪ್ರವೀಣ್, ಮಂಜು ಇದ್ದರು.
No comments
Post a Comment