ಸೋಮವಾರಪೇಟೆ (TIMES OF COORG):-ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಕೊಡಗು ಜಿಲ್ಲಾ ಘಟಕ ಜಿಲ್ಲಾಡಳಿತ ಸಹಕಾರದೊಂದಿಗೆ ಸಾರ್ವಜನಿಕರಿಗೆ ಕೊರೋನಾ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೇಂದ್ರ ಎನ್.ಎಸ್.ಎಸ್ ಘಟಕ ಪ್ರಾದೇಶಿಕ ನಿರ್ದೇಶಕರಾದ ಖಾದ್ರಿ ನರಸಿಂಹರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕೊರೋನಾ ತಡೆಗಟ್ಟಲು ಪ್ರತಿಯೊಬ್ಬ ಪ್ರಜೆಯು ಪ್ರಯತ್ನ ಪಡಬೇಕು.ಇದರ ಬಗ್ಗೆ ಅರಿವು ಪ್ರತಿಯೊಬ್ಬರಿಗೂ ಅವಶ್ಯ ಎಂದು ತಿಳಸಿದರು. ರಾಜ್ಯ ಎನ್.ಎಸ್.ಎಸ್ ಅಧಿಕಾರಿ ಡಾ.ಗಣನಾಥ ಎಕ್ಕಾರ್ ಮಾತನಾಡಿ ಕೊಡಗು ಕೊರೋನಾ ಮುಕ್ತ ಜಿಲ್ಲೆಯಾಗಿದೆ ಹಾಗೆಯೇ ಕೊರೋನಾ ಮುಕ್ತ ರಾಷ್ಟ್ರವಾಗಬೇಕು ಇದಕ್ಕಾಗಿ ನಾವೆಲ್ಲರೂ ಜಾಗೃತಿ ಪಡೆದುಕೊಳ್ಳಬೇಕಾಗಿದೆ ಎಂದರು. ಕೊಡಗು ವೈದ್ಯಕೀಯ ವಿದ್ಯಾಲಯದ ಡಾ.ನರಸಿಂಹ ರವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ ಕೊರೋನಾ ಬರುವ ವಿಧಾನ,ಮುನ್ನೆಚ್ಚರಿಕೆ ಕ್ರಮಗಳು, ತಡೆಗಟ್ಟುವ ವಿಧಾನ, ಕೊರೋನಾದ ಗುಣಲಕ್ಷಣಗಳನ್ನು ಪಿ.ಪಿ.ಟಿ ಮತ್ತು ವಿಡಿಯೋ ಗಳನ್ನು ತೊರಿಸುವ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಿದರು. ರಾಜ್ಯ ಎನ್.ಎಸ್.ಎಸ್ ಅನುಷ್ಠಾನ ಅಧಿಕಾರಿ ಡಾ.ಪೂರ್ಣಿಮ ಜೊಗಿ,ಮಂಗಳೂರು ವಿಶ್ವವಿದ್ಯಾಲಯ ಎನ್.ಎಸ್.ಎಸ್ ಸಂಯೋಜನಾಧಿಕಾರಿ ಡಾ.ನಾಗರತ್ನ, ಕೊಡಗು ಎನ್.ಎಸ್.ಎಸ್ ನೋಡಲ್ ಅಧಿಕಾರಿ ಎಂ.ಎನ್ ವನಿತ್ ಕುಮಾರ್ ಮುಂತಾದವರ ನಾಯಕತ್ವದಲ್ಲಿ ನಡೆದ ಜಾಗೃತಿ ಕಾರ್ಯಕ್ರಮ ಅನೇಕ ಸಾರ್ವಜನಿಕರು ಭಾಗವಹಿಸಿದ್ದರು.
No comments
Post a Comment