ಶ್ರೀ ಪರಮ ಜ್ಯೋತಿ ಸೇವಾ ಸಮಿತಿ ಮತ್ತು ಶ್ರೀ ಅಮ್ಮ ಭಗವಾನ್ ಫೌಂಡೇಶನ್ ವತಿಯಿಂದ ಆಟೋ ಚಾಲಕರಿಗೆ ಕಿಟ್ ವಿತರಣೆ

No comments
ಸತೀಶ್ ಸಿಂಗಿ
ಗೋಣಿಕೊಪ್ಪ (Times Of Coorg): ಶ್ರೀ ಪರಮ ಜ್ಯೋತಿ ಸೇವಾ ಸಮಿತಿ ಮತ್ತು ಶ್ರೀ ಅಮ್ಮ ಭಗವಾನ್ ಫೌಂಡೇಶನ್ ಗೋಣಿಕೊಪ್ಪ ಶಾಖೆ ಇವರ ವತಿಯಿಂದ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಆಟೋ ಚಾಲಕರಿಗೆ ಉಚಿತ ದಿನಸಿ ಪದಾರ್ಥಗಳನ್ನು ವಿತರಿಸಲಾಯಿತು.

ಗೋಣಿಕೊಪ್ಪ ಈರಣ್ಣ ಕಾಲೋನಿಯಲ್ಲಿರುವ ಅಮ್ಮ ಭಗವಾನ್ ಪ್ರಾರ್ಥನಾ ಮಂದಿರದಲ್ಲಿ ಆಟೋ ಚಾಲಕರಿಗೆ ದಿನಸಿ ಪದಾರ್ಥಗಳನ್ನು ಜಿಪಂ ಸದಸ್ಯ ಸಿ.ಕೆ ಬೋಪಣ್ಣ ಮತ್ತು ಗೋಣಿಕೊಪ್ಪ ಠಾಣಾ ಧಿಕಾರಿ ಸುರೇಶ್ ಬೋಪಣ್ಣ ಅವರ ನೇತೃತ್ವದಲ್ಲಿ ಕೊರೋನ ಲಾಕ್ಡೌನ್ ಹಿನ್ನೆಲೆ ಆರ್ಥಿಕವಾಗಿ ಕಂಗೆಟ್ಟಿರುವ ಆಟೋ ಚಾಲಕರನ್ನು ಗುರುತಿಸಿ ದಿನಸಿ ಪದಾರ್ಥಗಳನ್ನು ನೀಡಲಾಯಿತು.ಸುಮಾರು 70ಕ್ಕೂ ಹೆಚ್ಚು ಫಲಾನುಭವಿಗಳು ಕಿಟ್ ಪಡೆದುಕೊಂಡರು.

ಜಾಂಬವ ಯುವ ಸೇನೆಯ ಜಿಲ್ಲಾಧ್ಯಕ್ಷ ಸತೀಶ ಸಿಂಗಿ, ಅಮ್ಮ ಭಗವಾನ್ ಮತ್ತು ಶ್ರೀ ಪರಮ ಜ್ಯೋತಿ ಸೇವಾಮಂಡಲಿಯ ಪದಾಧಿಕಾರಿಗಳಾದ ಲತಾಜಿ, ರಾಣಿಜಿ,ನವೀನ್ ಜಿ, ಇಂದಿರಾಜಿ, ಕಾವ್ಯ ಜಿ, ಪೂಣಚ್ಚ ಜಿ, ಇವರುಗಳು ಆಟೋಚಾಲಕರ ಪರಿಸ್ಥಿತಿಯನ್ನು ಮನಗಂಡು ಆಹಾರ ಸಾಮಗ್ರಿಗಳ ವಿತರಣೆಗೆ ಕ್ರಮ ಕೈಗೊಂಡರು ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಜಿಮ್ಮ ಸುಬ್ಬಯ್ಯ ಹಾಜರಿದ್ದರು.

No comments

Post a Comment