ಹಸಿದ ಹೊಟ್ಟೆಗೆ - ತಣಿವು ಪೆಟ್ಟಿಗೆಗೆ ಟಾಟಾ ಕಾಫಿ ಲಿಮಿಟೆಡ್ ವತಿಯಿಂದ 1.50 ಲಕ್ಷ ಮೌಲ್ಯದ ಪಡಿತರ

No comments
ಮಡಿಕೇರಿ (Times Of Coorg) : ಪೊಲೀಸ್ ಇಲಾಖೆ ಸಹಭಾಗಿತ್ವದಲ್ಲಿ ಕೊಡಗು ಜಿಲ್ಲಾಡಳಿತ ವತಿಯಿಂದ ತೆರೆದಿರುವ "ಹಸಿದ ಹೊಟ್ಟೆಗೆ - ತಣಿವು ಪೆಟ್ಟಿಗೆ" ಗೆ ಟಾಟಾ ಕಾಫಿ ಲಿಮಿಟೆಡ್ ವತಿಯಿಂದ 1.50 ಲಕ್ಷ ಮೌಲ್ಯದ 2 ಸಾವಿರ ಕೆ ಜಿ ಅಕ್ಕಿ, 1 ಸಾವಿರ ಕೆ ಜಿ ತೊಗರಿ ಬೇಳೆಯನ್ನು ನೀಡಲಾಯಿತು. ಪಡಿತರವನ್ನು ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಡಾ ಸುಮನ್ ಡಿ ಪನ್ನೇಕರ್ ಸ್ವೀಕರಿಸಿದರು. ಈ ಸಂದರ್ಭ ಮಡಿಕೇರಿ ತಹಶಿಲ್ದಾರ್ ಮಹೇಶ್, ಇಓ ಲಕ್ಷ್ಮಿ, ಡಿವೈಎಸ್ಪಿ ದಿನೇಶ್, ಸಿಪಿಐ ಅನೂಪ್ ಮಾದಪ್ಪ, ಟಾಟಾ ಕಾಫಿ ಲಿಮಿಟೆಡ್‌ನ ಸೀನಿಯರ್ ಜನರಲ್ ಮ್ಯಾನೇಜರ್ ಎಂ ಬಿ ಗಣಪತಿ, ಲೀಗಲ್ ಮ್ಯಾಜೇಜರ್ ವಿಜಯ್ ಕಾರ್ನಾಡ್ ಮತ್ತಿತರರು ಉಪಸ್ಥಿತರಿದ್ದರು.

No comments

Post a Comment