🖋 ಉಬೈದ್,ಗುಂಡಿಕೆರೆ
ಎಂಬುವುದು ಗರ್ವದ ಪ್ರತಿಷ್ಠೆಯಾಗಿ ಮಾರ್ಪಟ್ಟ ಪ್ರಚಲಿತ ಪರಿಸ್ಥಿತಿಯಲ್ಲಿ ಬಡವರನ್ನು, ನೊಂದವರನ್ನು, ನಿರ್ಗತಿಕರನ್ನು ನೋಡಿದರೆ ಮಾತನಾಡಿಸುವುದಕ್ಕೂ ಮುಜುಗರ ಪಡುತ್ತಿರುವ ಹಾಗೂ ಮಾನವೀಯತೆ ಮಾಯವಾಗಿರುವ ಇಂದಿನ ಕಾಲದಲ್ಲಿ ಈ ನ್ಯೂನತೆಗಳಿಂದ ಸಂಪೂರ್ಣ ಮುಕ್ತರಾದ ವ್ಯಕ್ತಿತ್ವದ ಓರ್ವರನ್ನು ನಮಗೆ ದರ್ಶಿಸಬಹುದು.
ಸಮಾಜದಲ್ಲಿ ಹಿಂದುಳಿದವರ ಬಾಳು ಬೆಳಗಿಸಲು ಪಣತೊಟ್ಟು ಅಹರ್ನಿಶಿಕ್ರಿಯಾಶೀಲರಾದ ಅರ್ಹತೆಗೆ ಮಾನದಂಡ ನೀಡಿ ಯಾವುದೇ ತಾರತಮ್ಯ ಮಾಡದೆ ಹಿಂದೂ-ಮುಸ್ಲಿಂ ಒಳಗೊಂಡ ಸರ್ವರ ಪಾಲಿನ ಆಸರೆಯ ದಾತ್ತರಾಗಿ ಅದೆಷ್ಟೋ ಬಡ ಹೆಣ್ಣುಮಕ್ಕಳ ಕಣ್ಣೀರೊರೆಸಲು ಮುನ್ನೆಲೆಯಲ್ಲಿ ಸಕ್ರಿಯರಾದ ಬಡರೋಗಿಗಳಿಗೆ ಅಪಘಾತದಲ್ಲಿ ಗಾಯಗೊಂಡವರಿಗೆ, ಮಸೀದಿ ಮದರಸಾ, ಸುನ್ನತ್ ಜಮಾಅತಿನ ಸಂಘ-ಸಂಸ್ಥೆಗಳ ಸಮಾಜಸೇವೆಯ ಹಾದಿಯಲ್ಲಿ ಆರ್ಥಿಕತೆಯ ಬೆನ್ನೆಲುಬಾಗಿ ಗುರುತಿಸಿಕೊಂಡ ತೀರಾ ಅಪರೂಪದ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡ ಸಾಧಕರಾಗಿದ್ದಾರೆ ನಮ್ಮ ಗುಂಡಿಕೆರೆಯ ಹೆಮ್ಮೆಯ A.H Aboobakar(H.M Royal).
ಕೊಡಗಿನ ಗಡಿಯಾಚೆ ರಾಜಧಾನಿಯಲ್ಲಿ ಉದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾಜದ ನೊಂದವರ ಪಾಲಿನ ಆಶಾಕಿರಣವಾಗಿ,ಬಡವರ ಬಂಧು ವಾಗಿ, ಕೊಡುಗೈ ದಾನಿಯಾಗಿ, ತೆರೆಮರೆಯಲ್ಲಿ ಸಕ್ರಿಯರಾಗಿ ಮಾನ್ಯ ಅಬೂಬಕ್ಕರ್ ಅವರು Corona(Covid-19) ಮಹಾಮಾರಿ ಯಿಂದ ಜನತೆ ತಪ್ಪಿಸಲು ಲಾಕ್ ಡೌನ್ ನಲ್ಲಿ ಹೊರಬರಲಾರದೆ ಪರರ ಸಹಾಯವಿಲ್ಲದೆ ಕಷ್ಟಕಾರ್ಪಣ್ಯಗಳನ್ನು ನುಂಗಿ ಹಸಿವಿನಿಂದ ಬಳಲುತ್ತಿದ್ದರು.
ಇದನ್ನರಿತ ಅಬೂಬಕ್ಕರ್ 200ಕ್ಕೂ ಮಿಕ್ಕ ಕುಟುಂಬಗಳನ್ನು ಗುರುತಿಸಿ ಆ ಬಡವರಿಗೆ ಅಗತ್ಯ ನಿತ್ಯಬಳಕೆಯ ವಸ್ತುಗಳನ್ನು ಉಚಿತವಾಗಿ ನೀಡಿರುತ್ತಾರೆ ನೊಂದವರ ಪಾಲಿನ ಸರ್ವಸ್ವ ವಾದ A.H Aboobakar(H.M Royal) ರವರ ವಹಿವಾಟಿನಲ್ಲಿ ಅಲ್ಲಾಹು ಬರ್ಕತ್ ನೀಡಿ ಅನುಗ್ರಹಿಸಲಿ. ಶ್ರೀಯುತರಿಗೂ ಅವರ ಕೌಟುಂಬಿಕ ವರ್ಗಕ್ಕೂ ನಮಗೆಲ್ಲರಿಗೂ ಅಲ್ಲಾಹನ ಸತ್ಪಥದಲ್ಲಿ ಧರ್ಮ ಸೇವೆಯ ಹಾದಿಯಲ್ಲಿ ನಿಷ್ಕಾರ್ಮ ಕರ್ಮಯೋಗಿಗಳಾಗಿ ಸೇವಾನಿರತರಾಗಲು ಅಲ್ಲಾಹು ಅದೃಷ್ಟ ನೀಡಲೆಂದು ಪ್ರಾರ್ಥಿಸುತ್ತೇನೆ.
ಈ ಲೇಖನದಲ್ಲಿ ನಾನು ದಾಖಲಿಸಿದ್ದು ಮಾನ್ಯರಿಗೆ ಇಷ್ಟವಾಗದಿರುವುದು ಸಹಜ ಪ್ರಕ್ರಿಯೆ. ಸಮಾಜದಲ್ಲಿ ತೆರೆಮರೆಯಲ್ಲಿ ನಿಷ್ಕಳಂಕವಾಗಿ ಸಾಧನೆಗೆಯ್ಯುವ ಸಾಧಕರ ಸಾಧನೆಯನ್ನು ಕಣ್ಣಿದ್ದವರಿಗೆ ಗುರುತಿಸದಿರಲು ಸಾಧ್ಯವಿಲ್ಲ ತಾನೆ.
No comments
Post a Comment