ವರದಿ : ರಂಜಿತ್ ಕವಲಪಾರ
ಮಡಿಕೇರಿ (Times Of Coorg) :. ಕೊಡಗು ಜಿಲ್ಲೆ ಕೊವಿಡ್ ೧೯ ಮುಕ್ತ ಜಿಲ್ಲೆಯಾಗಿರುವ ಹಿನ್ನೆಲೆ ಕೊಡಗನ್ನು ಹಸಿರು ವಲಯ ಪ್ರದೇಶ ಎಂದು ಘೋಷಿಸಿ ಇಂದು ಜಿಲ್ಲೆಯಲ್ಲಿ ಲಾಕ್‌ಡೌನ್ ಸಡಿಲಿಸಿ ಮುಂದೆ ತೆಗೆದುಕೊಳ್ಳಬೇಕಾದ ಮಹತ್ತರ ನಿರ್ಣಯಗಳ ಕುರಿತು ಮಡಿಕೇರಿ ನಗರದಲ್ಲಿರುವ ನೂತನ ಜಿ.ಪಂ ಕಟ್ಟಡದಲ್ಲಿ ವಸತಿ ಹಾಗು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ವಿ ಸೋಮಣ್ಣನವರ ನೇತೃತ್ವದಲ್ಲಿ ಮಹತ್ತರ ಸುದ್ದಿಗೋಷ್ಠಿ ನಡೆಯಿತು.
ಸುದ್ದಿಗೋಷ್ಠಿಗೂ ಮುನ್ನ ಕೊಡಗಿನ ಶಾಸಕದ್ವಯರಿಬ್ಬರು ಹಾಗು ಕೊಡಗಿನ ಲೋಕಸಭಾ ಸದಸ್ಯರಿಬ್ಬರು ಉಸ್ತುವಾರಿ ಸಚಿವರೊಂದಿಗೆ ವಿವಿಧ ಬೇಡಿಕೆಗಳನ್ನು ಇಟ್ಟು ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.
ಅಪ್ಪಚ್ಚು ರಂಜನ್ ಅವರ ಬೇಡಿಕೆಗಳು >>>>
ಕಳೆದೆರೆಡು ವರ್ಷಗಳಿಂದ ಭಾರಿ ಮಳೆಯಿಂದ ಹಾನಿಗೀಡಾಗಿರುವ ಕೊಡಗಿನ ರಸ್ತೆ ನಿರ್ಮಾಣ ಕಾರ್ಯ ತುರ್ತಾಗಿ ಆಗಬೇಕು.
ಕೊಡಗಿನ ರೈತರಿಗೆ ಕೂಡಲೆ ಮರಳನ್ನು ನದಿಯಿಂದ ತೆಗೆದು ಮಾರಾಟಮಾಡಲು ಪರವಾನಿಗೆ ನೀಡಬೇಕು
ಕಾವೇರಿ ನದಿ ಹೂಳೆತ್ತುವ ಕಾರ್ಯವನ್ನು ಈ ಕೂಡಲೆ ಮಾಡಬೇಕು.
ವೀಣಾ ಅಚ್ಚಯ್ಯನವರ ಬೇಡಿಕೆಗಳು >>>>>>
ವಿರಾಜಪೇಟೆ ಕೇರಳ ಸಂಪರ್ಕ ರಸ್ತೆಯಾದ ಮಾಕುಟ್ಟ ರಸ್ತೆಯನ್ನು ಕೂಡಲೇ ದುರಸ್ಥಿಗೊಳಿಸಬೇಕು
ರಸ್ತೆ ಕಾಮಗಾರಿಯ ಬಹುತೇಕ ಗುತ್ತಿಗೆದಾರರು ಮೈಸೂರು ಮೂಲದವರಾಗಿದ್ದು ಸ್ಥಳೀಯ ಕಾರ್ಮಿಕರನ್ನು ಬಳಸಿಕೊಂಡು ಮಳೆಗಾಲಕ್ಕೂ ಮುನ್ನ ಕಾಮಗಾರಿ ಪೂರ್ಣಗೊಳಿಸಬೇಕು
ಸಹಕಾರ ಸಂಘದಿಂದ ಗ್ರಾಹಕರಿಗೆ ದೊರಕಬೇಕಿದ್ದ ಸಾಲದ ಮೊತ್ತವನ್ನು ಕೂಡಲೇ ಗ್ರಾಹಕರಿಗೆ ದೊರಕಿಸಿಕೊಡಬೇಕು.
೨೦೧೮ ಹಾಗು ೨೦೧೯ರಲ್ಲಿ ಸುರಿದ ಭಾರಿ ಮಳೆ ಹಾಗು ಗುಡ್ಡ ಕುಸಿತದಿಂದ ಸೂರು ಕಳೆದುಕೊಂಡ ನಿರಾಶ್ರಿತರಿಗೆ ಮಳೆಗಾಲಕ್ಕೂ ಮುನ್ನ ಸೂರನ್ನು ಒದಗಿಸಬೇಕು.
ಕೊಡಗಿನ ಬಾಳೆಹಣ್ಣು ಕೃಷಿಕರಿಗೆ ಕೇರಳ ರಾಜ್ಯಕ್ಕೆ ಬಾಳೆ ಹಣ್ಣಿನ ಲೋಡನ್ನು ಸಾಗಿಸಲು ಪರವಾನಿಗೆ ನೀಡಬೇಕು.
ಕೆ ಜಿ ಬೋಪಯ್ಯನವರ ಬೇಡಿಕೆಗಳು >>>>
ಮರಳು ಹಾಗು ಎಂ ಸ್ಯಾಂಡ್‌ಗೆ ಗಣಿಗಾರಿಕೆಗೆ ಹಾಗು ಸಾಗಣೆಗೆ ಅವಕಾಶ ಕೊಡಬೇಕು.
೪ಜೀ ಕಾಮಗಾರಿಗಳು ವಿಳಂಬವಾಗುತ್ತಿದ್ದು ಕೂಡಲೇ ವಿಳಂಬವಾಗಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು . ಚೆಕ್ ಪೋಸ್ಟ್‌ಗಳನ್ನು ಇನ್ನಷ್ಟು ಬಿಗಿ ಮಾಡಿ, ಸಾಕಷ್ಟು ಮಂದಿ ಸಂಪಾಜೆ ಚೆಕ್ ಪೋಸ್ಟ್‌ನಿಂದ ಒಳನುಸುಳುತ್ತಿರುವ ಕುರಿತು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು .
ಹೊರ ಜಿಲ್ಲೆ ಹಾಗು ಹೊರ ರಾಜ್ಯಗಳಿಂದ ಅಕ್ರಮವಾಗಿ ಕೊಡಗಿಗೆ ಬರುತ್ತಿರುವ ಮೀನನ್ನು ಕೂಡಲೆ ತಡೆಗಟ್ಟುವಂತೆ ಕ್ರಮ ಜರುಗಿಸಬೇಕು ಹಾಗು ಹೊರ ಜಿಲ್ಲೆಗಳಿಂದ ಕೊಡಗಿಗೆ ಬರುತ್ತಿರುವ ಸಾಕು ಹಂದಿಗಳ ಸಾಗಾಣಿಕೆಯನ್ನು ತಡೆಗಟ್ಟಬೇಕು .
ಸುನಿಲ್ ಸುಬ್ರಮಣಿಯವರ ಬೇಡಿಕೆಗಳು >>>>>
ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟ ಹಣವನ್ನು ಬ್ಯಾಂಕಿನವರು ಸಾಲ ಮರುಪಾವತಿ ಮಾಡದ ಗ್ರಾಹಕರ ಖಾತೆಯಿಂದ ತೆಗೆದುಕೊಂಡ ಬಗ್ಗೆ ಅಸಮಾಧಾನ ಹಾಗು ಕೂಡಲೇ ಠೇವಣಿ ಹಣವನ್ನು ಗ್ರಾಹಕರಿಗೆ ಹಿಂತಿರುಗಿಸುವಂತೆ ಆಗ್ರಹ.
ಕೃಷಿ ಚಟುವಟಿಕೆಗಳಿಗೆ ಕೊಡಗಿನ ಒಳಗಡೆ ಮುಕ್ತ ಸರಕು ಸಾಮಾಗ್ರಿಗಳ ಸಾಗಾಟಕ್ಕೆ ಅವಕಾಶಮಾಡಿಕೊಡುವಂತೆ ಒತ್ತಾಯ.
ನಗರಸಭೆ ಅಂಗಡಿಮುಂಗಟ್ಟುಗಳ ಪರವಾನಿಗೆ ನವೀಕರಣಕ್ಕೆ ೧ ತಿಂಗಳ ಹೆಚ್ಚಿನ ಸಮಯವಕಾಶ ನೀಡುವಂತೆ ಸೂಚನೆ.
ಸಿಮೆಂಟ್ ಹಾಗು ಕ್ರಿಮಿನಾಶಕಗಳನ್ನು ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿರುವವರ ಮೇಲೆ ಕ್ರಮಕೈಗೊಳ್ಳುವಂತೆ ಆಗ್ರಹ.
ಅಹವಾಲನ್ನು ಹಾಗು ಬೇಡಿಕೆಗಳನ್ನು ಆಲಿಸಿದ ಸಚಿವರ ಸೂಚನೆಗಳು >>>>>
ಕೂಡಲೇ ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಹಾಗು ಮರಳು ತೆಗೆಯಲು, ಮಾರಾಟಮಾಡಲು ಅವಕಾಶ ನೀಡುವಂತೆ ಹಾಗು ಕಾವೇರಿ ನದಿಯ ಹೂಳೆತ್ತುವ ಕಾರ್ಯವನ್ನು ಕೂಡಲೆ ಪ್ರಾರಂಭಿಸುವಂತೆ ಸೂಚನೆ.
ಚೆಕ್‌ಪೋಸ್ಟ್‌ಗಳನ್ನು ಇನ್ನಷ್ಟು ಭದ್ರಪಡಿಸಿ ಯಾರೂ ಒಳನುಸುಳಲು ಅವಕಾಶ ನೀಡದಂತೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಚಿವರಿಂದ ಸೂಚನೆ.
ಮೀನು ಹಾಗು ಇನ್ನಿತರ ಮಾಂಸ ಪದಾರ್ಥಗಳು ಅಕ್ರಮವಾಗಿ ಒಳನುಸುಳದಂತೆ ಕ್ರಮಕೈಗೊಳ್ಳಲು ಸೂಚಿಸಿದರು.
೪ಜೀ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಆಯಾ ಗುತ್ತಿಗೆದಾರರಿಗೆ ತಿಳಿಸುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ.
ಅಗತ್ಯ ಮುಂಜಾಗ್ರತಾ ಕ್ರಮದೊಂದಿಗೆ ಕೇರಳಕ್ಕೆ ಬಾಳೆಹಣ್ಣುಗಳನ್ನು ಕಳುಹಿಸಿಕೊಡಲು ಪರವಾನಿಗೆ ನೀಡುವಂತೆ ಸಲಹೆ.
ಗ್ರೀನ್‌ಝೊನ್ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾಡಳಿತ ಕೈಗೊಂಡಿರುವ ನೂತನ ಲಾಕ್‌ಡೌನ್ ಕ್ರಮಗಳು >>>>
ವಾರದ ನಾಲ್ಕು ದಿನ ಭಾನುವಾರ, ಸೋಮವಾರ, ಬುಧವಾರ ಹಾಗು ಶುಕ್ರವಾರ ಕೊಡಗಿನ ಎಲ್ಲಾ ಅಂಗಡಿಮುಂಗಟ್ಟುಗಳನ್ನು(ನಿರ್ಬಂಧಿತ ಅಂಗಡಿ ಮುಂಗಟ್ಟುಗಳನ್ನು ಹೊರತುಪಡಿಸಿ) ಬೆಳಗ್ಗೆ ೬ರಿಂದ ಸಂಜೆ ೪ರವರೆಗೆ ತೆರೆಯುವಂತೆ ಅದೇಶ.
ಹಾಗಾದರೆ ನಿರ್ಬಂಧ ಯಾವುದಕ್ಕೆಲ್ಲಾ?
ಮದುವೆ ಹಾಲ್‌ಗಳು
ಸಿನಿಮಾ ಮಂದಿರ
ಸಾರ್ವಜನಿಕ ಜಿಮ್
ಶಾಪಿಂಗ್ ಮಾಲ್‌ಗಳು
ಸಂತೆ, ಜಾತ್ರೆ
ಹೋಟೆಲ್, ರೆಸ್ಟೋರೆಂಟ್, *ಬಾರ್, ರೆಸಾರ್ಟ್‌ಗಳು
ಬೇಕರಿ ಹಾಗು ಕ್ಯಾಂಟಿನ್‌ಗಳಲ್ಲಿ ಪಾರ್ಸಲ್‌ಗೆ ಮಾತ್ರ ಅವಕಾಶ
ಬ್ಯೂಟಿಪಾರ್ಲರ್, ಸಲೂನ್‌ಗಳು
ಫಾಸ್ಟ್‌ಫುಡ್ ಕಾರ್ನರ್‌ಗಳು
ತಂಬಾಕು, ಸಿಗರೇಟು, ಗುಟ್ಕಾ ಉತ್ಪಾದನೆ ಹಾಗು ಮಾರಾಟ
ಯಾವುದೇ ರೀತಿಯ ಟೆಂಪೋ ಟ್ರಾವೆಲರ್‌ಗಳು ಹಾಗು ಖಾಸಗಿ ಆಟೋ ಹಾಗು ಟ್ಯಾಕ್ಸಿವಾಹನಗಳಿಗೆ ಅವಕಾಶವಿಲ್ಲ.
ಸಭೆಯಲ್ಲಿ ವೀಣಾ ಅಚ್ಚಯ್ಯನವರ ನಿರಾಶ್ರಿತರ ಕುರಿತ ಪ್ರಶ್ನೆಗೆ ಜಿಲ್ಲಾಡಳಿತದಿಂದ ಹಾಗು ಸಚಿವರಿಂದ ನಿರುತ್ತರ. >>>>
ಸಭೆಯಲ್ಲಿ ೨೦೧೮ರಲ್ಲಿ ಭಾರಿ ಮಳೆ ಹಾಗು ಗುಡ್ಡಕುಸಿತದಿಂದ ಸೂರು ಕಳೆದು ಕೊಂಡವರಿಗೆ ಮಾದಪುರ ಸಮೀಪ ಜಂಬೂರುಬಾಣೆ ಹಾಗು ಮಡಿಕೇರಿಯ ಗಾಳಿಬೀಡು, ಹೆಬ್ಬೆಟ್ಟಗೇರಿ, ಕಾಟಕೇರಿಯಲ್ಲಿ ನಿರ್ಮಾಣವಾಗುತ್ತಿರುವ ಪುನರ್‌ವಸತಿ ಮನೆಗಳ ಕುರಿತು ಹಾಗು ೨೦೧೯ರಲ್ಲಿ ದಕ್ಷಿಣ ಕೊಡಗಿನಲ್ಲಿ ಮನೆಕಳೆದುಕೊಂಡಿರುವ ನಿರಾಶ್ರಿತರಿಗೆ ಇನ್ನೂ ಮನೆ ನಿರ್ಮಾಣಕ್ಕೆ ಸ್ಥಳವನ್ನೇ ಗುರುತಿಸದ ಕುರಿತು ಪ್ರಶ್ನೆ ಎತ್ತಿ ದಕ್ಷಿಣ ಕೊಡಗಿನ ನಿರಾಶ್ರಿತರ ಪುನರ್ವಸತಿ ಕಾರ್ಯ ಕೂಡಲೇ ಪ್ರಾರಂಭಿಸಬೇಕೆಂದು ಹಾಗು ಮಳೆಗಾಲಕ್ಕೂ ಮುನ್ನ ೨೦೧೮ರ ನಿರಾಶ್ರಿತರರಿಗೆ ಮನೆ ನೀಡಬೇಕೆಂದು ಸಚಿವರಲ್ಲಿ ಬೇಡಿಕೆ ಇಟ್ಟ ವೀಣಾ ಅಚ್ಚಯ್ಯನವರಿಗೆ ಸಚಿವರು ಹಾಗು ಜಿಲ್ಲಾಡಳಿತವು ಉತ್ತರಿಸದೆ ನಿರಾಶೆ ಮೂಡಿಸಿದರಲ್ಲದೆ. ಮಳೆಗಾಲಕ್ಕೂ ಮುನ್ನ ಮನೆ ಸಿಗುತ್ತದೆ ಎನ್ನುವ ಆಕಾಂಕ್ಷೆಯಲ್ಲಿದ್ದ ನಿರಾಶ್ರಿತರಿಗೆ ಈ ಮಳೆಗಾಲವೂ ಬಾಡಿಗೆ ಮನೆಯಲ್ಲಿಯೇ ಉಳಿಯುವ ಸ್ಥಿತಿ ಬಹುತೇಕ ಖಚಿತ ಎನ್ನುವ ಸೂಚನೆಯನ್ನು ಲೋಕಸಭಾ ಸದಸ್ಯೆ ವೀಣಾ ಅಚ್ಚಯ್ಯುನವರ ಪ್ರಶ್ನೆಗೆ ಮೌನವಾಗುವ ಮೂಲಕ ಸಚಿವರಿಂದ ಹಾಗು ಜಿಲ್ಲಾಡಳಿತದಿಂದ ಉತ್ತರ.
ಹೊರ ಜಿಲ್ಲೆ ಹಾಗು ರಾಜ್ಯಗಳಿಂದ ಕೊಡಗಿಗೆ ಅಕ್ರಮ ಮೀನು ಸಾಗಾಣೆಯ ವಿರುದ್ಧ ಗುಡುಗಿದ ಕೆ. ಜಿ ಬೋಪಯ್ಯನವರು : ಇದು ಮಾಧ್ಯಮ ವರದಿಗಾರರೊಬ್ಬರ ವರದಿಯ ಫಲಶೃತಿ.
ಕಳೆದ ವಾರದಲ್ಲಿ ಕೊಡಗು ಜಿಲ್ಲೆಗೆ ಹೊರ ಜಿಲ್ಲೆ ಹಾಗು ಹೊರ ರಾಜ್ಯಗಳಿಂದ ಅಕ್ರಮವಾಗಿ ಮೀನು ಸಾಗಾಟವಾಗುತ್ತಿರುವ ಹಾಗು ಮಾರಾಟ ಜಾಲದ ಕುರಿತು ಸವಿಸ್ತಾರವಾಗಿ *ಪತ್ರಕರ್ತ ರಂಜಿತ್ ಕವಲಪಾರ* ರವರು ವಿಶೇಷ ವರದಿಯನ್ನು ಮಾಡಿದ್ದರು. ಅದರ ಹಿನ್ನೆಲೆ ಇಂದು ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಕೊಡಗು ಜಿಲ್ಲಾ ಪಂಚಾಯತ್ ಕಟ್ಟಡದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಿರಾಜಪೇಟೆ ಶಾಸಕರಾದ ಕೆ ಜಿ ಬೋಪಯ್ಯನವರು ಗಡಿಕಾವಲು ಪಡೆಯನ್ನು ವಂಚಿಸಿ ಅದ್ಹೇಗೆ ಕೊಡಗಿನೊಳಕ್ಕೆ ಅಕ್ರಮವಾಗಿ ಮೀನು ಬರಲು ಸಾಧ್ಯ? ಎಂದು ಪ್ರಶ್ನೆ ಎತ್ತಿ, ಗುಡುಗಿ. ಕೂಡಲೆ ಗಡಿಯಲ್ಲಿ ಇನ್ನು ಮುಂದೆ ಇಂತಹ ನಿರ್ಲಕ್ಷ್ಯಗಳು ಆಗದಂತೆ ಕ್ರಮಕೈಗೊಳ್ಳುವಂತೆ ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದರು. ಇದೇ ಸಂದರ್ಭ ಮೈಸೂರು ಹಾಸನ ಜಿಲ್ಲೆಗಳಿಂದ ಕೊಡಗಿಗೆ ಅಕ್ರಮವಾಗಿ ಮಾಂಸಕ್ಕಾಗಿ ಸಾಗಿಸಲ್ಪಡುತ್ತಿರುವ ಸಾಕು ಹಂದಿಗಳ ಕುರಿತು ಗಂಭೀರವಾಗಿ ವಿಷಯ ಪ್ರಸ್ತಾಪಿಸಿ ಕ್ರಮಕೈಗೊಳ್ಳುವಂತೆ ಸೂಚಿಸಿದರು.
No comments
Post a Comment