• ನೌಶಾದ್ ಜನ್ನತ್
ಮಡಿಕೇರಿ (Times Of Coorg) : ಕೋವಿಡ್ -19 ಎಂಬ ಮಹಾಮಾರಿಯಿಂದ ದೇಶಕ್ಕೆ ದೇಶವೇ ತತ್ತರಿಸಿ, ದೇಶದ ಆರ್ಥಿಕ ವ್ಯವಸ್ಥೆಗಳೇ ಬುಡಮೇಲಾಗಿ ಜನ ಸಂಕಷ್ಟದ ಸ್ಥಿತಿಯಲ್ಲಿರುವಾಗ ಸುಮಾರು 325 ಆರ್ಹ ಕುಟುಂಬಗಳನ್ನು ಗುರುತಿಸಿ ಅವರಿಗೆ ಅವಶ್ಯವಿರುವ, ಒಂದು ತಿಂಗಳ ಮಟ್ಟಿಗೆ ಸಾಕಾಗುವಷ್ಟು ಆಹಾರ ಸಾಮಗ್ರಿಗಳನ್ನು ಮಲ್ನಾಡ್ ಗಲ್ಫ್ ಅಸೋಸಿಯೇಷನ್ ಎಂಬ ಸಂಘಟನೆ ಒದಗಿಸಿದೆ.
ಮಾರ್ಚ್ 28, 2014 ರ ಇಸವಿಯಲ್ಲಿ ಮಲೆನಾಡು ಭಾಗದ ಅನಿವಾಸಿ ಭಾರತೀಯರು ಕಟ್ಟಿದ ಈ ಸಂಸ್ಥೆ,ಇಂದು ದೇಶ ವಿದೇಶಗಳಲ್ಲಿ ಸುಮಾರು 10 ಕ್ಕೂ ಹೆಚ್ಚು ಘಟಕಗಳನ್ನು ಹೊಂದಿದ್ದು, ಕರ್ನಾಟಕದಲ್ಲಿ ಕೊಡಗು ಸೇರಿದಂತೆ ಹಾಸನ, ಚಿಕ್ಕಮಂಗಳೂರು ಮತ್ತು ಶಿವಮೊಗ್ಗ ಎಂಬ ನಾಲ್ಕು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಸಂಸ್ಥೆಯ ವತಿಯಿಂದ ಕಳೆದ 6 ವರ್ಷಗಳಲ್ಲಿ ಲಕ್ಷಾಂತರ ನಿರುದ್ಯೋಗಿಗಳು, ಬಡವರು, ನೊಂದವರ ಕಣ್ಣೀರು ಒರೆಸಲಾಗಿದೆ ಎಂದು ತಿಳಿಸಲು ಹೆಮ್ಮೆ ಅನಿಸುತ್ತಿದೆ. ಸದ್ಯ ನಮ್ಮ ಕೊಡಗಿನಲ್ಲಿ ಅಲ್ಪ ಸಂಖ್ಯಾತ ಸಮುದಾಯದಲ್ಲಿ ಯಾರಾದರೂ ಅನಾರೋಗ್ಯ ಪೀಡಿತರಾಗಿ ಅಥವಾ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದಾರೆ ಎಂದಾಗ ಅವರುಗಳಿಗೆ ಮೊದಲು ಗೋಚರಿಸುವುದು ಮಲ್ನಾಡ್ ಗಲ್ಫ್ ಅಸೋಸಿಯೇಷನ್ ಎಂಬ ಸಂಸ್ಥೆ. ಕಾರಣ ಅಷ್ಟರ ಮಟ್ಟಿಗೆ ಕೊಡಗಿನ ಮೂಲೆ ಮೂಲೆಯಲ್ಲಿ ಈ ಸಂಸ್ಥೆಯ ವಕ್ತಾರರು ನೊಂದವರ ಪರವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದರ ಮುಂದುವರೆದ ಭಾಗವಾಗಿ ಕೊಡಗಿನ ಐದು ತಾಲ್ಲೂಕಿನ ಸುಮಾರು 30 ಗ್ರಾಮಗಳಿಗೆ ಸುಮಾರು 7 ಲಕ್ಷ ಮೌಲ್ಯದ ಒಂದು ಸಾಧಾರಣ ಕುಟುಂಬಕ್ಕೆ ಒಂದು ತಿಂಗಳಿಗೆ ಬೇಕಾಗುವ ಅವಶ್ಯಕ ಸಾಮಗ್ರಿಗಳನ್ನು ಇಂದು ತಲುಪಿಸಿದ್ದಾರೆ ಜೊತೆಗೆ ಈ ಆ ಕುಟುಂಬಗಳ ವಿವರಗಳನ್ನು ಸಂಗ್ರಹಿಸಿ ಮುಂದಿನ ದಿನಗಳಲ್ಲಿ ಅವರನ್ನು ಆರ್ಥಿಕವಾಗಿ ಸದೃಢ ಗೊಳಿಸಲು ಮತ್ತು ಆ ಕುಟುಂಬದ ವಿದ್ಯಾವಂತ ಯುವಕರನ್ನು ಸ್ವಾವಲಂಬಿಯಾಗಿ ದುಡಿಯುವ ನಿಟ್ಟಿನಲ್ಲಿ ಮಾರ್ಪಡಿಸುವ ಪ್ರಯತ್ನ ಮಾಡಬೇಕೆಂಬ ಪಣ ತೊಟ್ಟಿದ್ದಾರೆ. ಹಾಗೂ ಮುಂದಿನ ದಿನಗಳಲ್ಲಿ ಮಲ್ನಾಡ್ ಸಂಸ್ಥೆಯ ಸಹಾಯ ಹಸ್ತವನ್ನು ರಾಜ್ಯಾದ್ಯಂತ ವಿಸ್ತರಿಸಲು ಯೋಜನೆ ಹಾಕಿಕೊಳ್ಳಲಾಗಿದೆ.
ಇಂದಿನ ಕಾರ್ಯಕ್ರಮದಲ್ಲಿ ಕೊಡಗಿನ ಐದು ತಾಲ್ಲೂಕುಗಳ ಸುಮಾರು 30 ಗ್ರಾಮಗಳ ಮುಖಂಡರುಗಳು Covid -19 ಸೋಂಕು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಭಾಗಿಯಾಗಿದ್ದರು. ಜೊತೆಗೆ ಆಯಾ ಊರಿನ ಮುಖಂಡರುಗಳಿಗೆ ಮಲ್ನಾಡ್ ಸಂಸ್ಥೆಯ ವತಿಯಿಂದ Covid -19 ಎದುರಿಸಲು ಬೇಕಾದ ಮುಂಜಾಗ್ರತಾ ಕ್ರಮಗಳು ಮತ್ತು ದೇಶದ ಭವಿಷ್ಯಕ್ಕಾಗಿ ನಾವುಗಳು ಸರಕಾರದೊಂದಿಗೆ ಕೈ ಜೋಡಿಸಿ ಅನುಸರಿಸಬೇಕಾದ ವಿವರಗಳ ಜಾಗೃತಿ ಮೂಡಿಸಲಾಯಿತು.
No comments
Post a Comment