ಕಾಲ್ಚೆಂಡು ಪಂದ್ಯಾಟ:ಅಮಿಟಿ ಯುನೈಟೆಟ್ ಗದ್ದೆಹಳ್ಳ ವಿನ್ನರ್, ಗೋಲ್ಡನ್ ಬಾಯ್ಸ್ ಪೊನ್ನತ್ಮೊಟ್ಟೆ ರನ್ನರ್ಸ್

No comments
ಚೆಟ್ಟಳ್ಳಿ (TOC ನ್ಯೂಸ್) :ಸಮೀಪದ ಪೊನ್ನತ್ಮೊಟ್ಟೆಯ ಗೋಲ್ಡನ್ ಬಾಯ್ಸ್ ವತಿಯಿಂದ ಪೊನ್ನತ್ಮೊಟ್ಟೆಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಏಕದಿನದ ಸೂಪರ್ ಫೈವ್ಸ್ ಕಾಲ್ಚೆಂಡು ಪಂದ್ಯಾಟದಲ್ಲಿ ಅಮಿಟಿ ಯುನೈಟೆಡ್‌ ಗದ್ದೆಹಳ್ಳ ತಂಡವು ಫೈನಲ್ ಪಂದ್ಯದಲ್ಲಿ ಆತಿಥೇಯ ಗೋಲ್ಡನ್ ಬಾಯ್ಸ್ ತಂಡವನ್ನು 1-0 ಗೋಲುಗಳ ಅಂತರದಿಂದ ಸೋಲಿಸಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು. ಆತಿಥೇಯ ಗೋಲ್ಡನ್ ಬಾಯ್ಸ್ ತಂಡವು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಇದಕ್ಕೂ ಮುನ್ನ ನಡೆದ ಮೊದಲನೇ ಸೆಮಿಫೈನಲ್ ಪಂದ್ಯವು ಕೆ.ಎನ್. ಸಿ ಕಂಡಕರೆ ಹಾಗೂ ಅಮಿಟಿ ಯುನೈಟೆಡ್ ತಂಡಗಳ ನಡುವೆ ನಡೆಯಿತು.
ಅಮಿಟಿ ಯುನೈಟೆಡ್ ತಂಡವು ಪೆನಾಲ್ಟಿ ಶೂಟೌಟ್ ನಲ್ಲಿ 2-1 ಗೋಲುಗಳ ಅಂತರದಿಂದ ಕೆ.ಎನ್.ಸಿ‌ ತಂಡವನ್ನು ಮಣಿಸಿ‌ ಫೈನಲ್ಗೆ ಲಗ್ಗೆಯಿಟ್ಟಿತ್ತು. ಎರಡನೇ ಸೆಮಿಫೈನಲ್ ಪಂದ್ಯವು ಆತಿಥೇಯ ಗೋಲ್ಡನ್ ಬಾಯ್ಸ್ ಪೊನ್ನತ್ಮೊಟ್ಟೆ ಹಾಗೂ ಸಿ.ಸಿ.ಎಫ್.ಸಿ ಕಾಫಿಬೋರ್ಡ್ ತಂಡಗಳ ನಡುವೆ ನಡೆಯಿತು. ಗೋಲ್ಡನ್ ಬಾಯ್ಸ್ ತಂಡವು 1-0 ಗೋಲುಗಳ ಅಂತರದಿಂದ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು. ಪಂದ್ಯಾವಳಿಯಲ್ಲಿ ಒಟ್ಟು16 ತಂಡಗಳು ಭಾಗವಹಿಸಿದ್ದು, ಪಂದ್ಯಾಟದ ಅತೀ ಹೆಚ್ಚು ಗೋಲ್ ಬಾರಿಸಿದ ಆಟಗಾರ ಪ್ರಶಸ್ತಿಯನ್ನು ಅಮಿಟಿ ಯುನೈಟೆಡ್ ತಂಡದ ಸ್ವಾದಿಕ್ ಪಡೆದುಕೊಂಡರು. ಜಂಶಾದ್, ಆಲಿ, ವಿರೂಪಾಕ್ಷ ಪಂದ್ಯಾಟದ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಟ್ರೋಫಿ‌ ದಾನಿಗಳಾದ ಹಮೀದ್ , ಆಯೋಜಕರಾದ ನೌಶಾದ್, ಮಜೀದ್ , ಉನೈಸ್, ಸಿಯಾಬ್,‌ಮಶೂದ್, ನವೀನ್ ,‌ರಶೀದ್ ಇದ್ದರು.

No comments

Post a Comment