Showing posts with label ಮೈಸೂರು. Show all posts
Showing posts with label ಮೈಸೂರು. Show all posts

ಹುಣಸೂರು ವಿಧಾನಸಭಾ ಕ್ಷೇತ್ರದ SDPI ಅಭ್ಯರ್ಥಿಯಾಗಿ ದೇವನೂರು ಪುಟ್ಟನಂಜಯ್ಯ ಘೋಷಣೆ


ಹುಣಸೂರು (TOC ನ್ಯೂಸ್) : ಕರ್ನಾಟಕ ವಿಧಾನಸಭೆಯ ಉಪಚುನಾವಣೆಯ ಹುಣಸೂರು ಕ್ಷೇತ್ರದ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಅಭ್ಯರ್ಥಿಯಾಗಿ ರಾಜ್ಯ ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ ಅವರನ್ನು ಇಂದು ಹುಣಸೂರಿನಲ್ಲಿ ನಡೆದ ಅಭ್ಯರ್ಥಿ ಘೋಷಣಾ ಸಭೆಯಲ್ಲಿ ರಾಜ್ಯಾಧ್ಯಕ್ಷ ಇಲ್ಯಾಸ್ ತುಂಬೆ ಘೋಷಿಸಿದ್ದಾರೆ. ಎಸ್ ಡಿ ಪಿ ಐ ನಾಯಕರು , ಕಾರ್ಯಕರ್ತರು ಪಾಲ್ಗೊಂಡಿದ್ದರು.
Reported By Times Of Coorg

ಸತತ 8ನೇ ಬಾರಿ ಅಂಬಾರಿ ಹೊರಲು ಸಿದ್ಧನಾದ ಅರ್ಜುನ..!


ಮೈಸೂರು (TOC ನ್ಯೂಸ್) : ದಸರಾ ಉತ್ಸವದ ಕೇಂದ್ರ ಬಿಂದು, ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಂದು ಜಂಬೂಸವಾರಿ ಹಿನ್ನೆಲೆ ಕ್ಯಾಪ್ಟನ್ ಅರ್ಜುನ ನೇತೃತ್ವದ ಗಜಪಡೆ ಸಜ್ಜಾಗಿದ್ದು ಅರ್ಜುನನಿಗೆ ಬೆಳ್ಳಂಬೆಳಿಗ್ಗೆ ಮಹಾಮಜ್ಜನ ಮಾಡಲಾಗಿದೆ. ತಣ್ಣೀರಿನ ಸ್ನಾದ ಬಳಿಕ ಕ್ಯಾಪ್ಟನ್ ಅರ್ಜುನನಿಗೆ ಬಿಸಿ ನೀರಿನ ಸ್ನಾನ ಮಾಡಿಸಲಾಗಿದೆ.

ಅರಮನೆ ಪ್ರವೇಶಿಸಿದ 42 ದಿನಗಳಿಂದ ಕ್ಯಾಪ್ಟನ್ ಅರ್ಜುನ ತಾಲೀಮು ನಡೆಸುತ್ತಿದ್ದ. ನಾಡಿಗೆ ಬಂದಾಗ ಅರ್ಜುನ 5,800 ಕೆಜಿ ತೂಕವಿದ್ದ. ನಾಡಿಗೆ ಬಂದು ಅರ್ಜುನ 200 ಕೆ.ಜಿ ತೂಕ ಹೆಚ್ಚಿಸಿಕೊಂಡಿದ್ದಾನೆ. ಸದ್ಯ ಅರ್ಜುನ ಆನೆಯ ತೂಕ  6,040ಕೆ.ಜಿಯಷ್ಟಿದೆ.

ಸತತವಾಗಿ 8ನೇ ಬಾರಿ ಕ್ಯಾಪ್ಟನ್‌ ಅರ್ಜುನ ಚಿನ್ನದ ಅಂಬಾರಿ ಹೊರಲಿದ್ದು, ಚಿನ್ನದ ಅಂಬಾರಿಯಲ್ಲಿ ನಾಡದೇವತೆ ಚಾಮುಂಡಿ ಉತ್ಸವ ಮೂರ್ತಿ ಹೊತ್ತು ಅರ್ಜುನ ರಾಜಬೀದಿಗಳಲ್ಲಿ ಸಂಚರಿಸಲಿದ್ದಾನೆ.

ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ಸುಮಾರು 5 ಕಿ.ಲೋ ಮೀಟರ್‌ವರೆಗೆ ಗಜಪಡೆ ಸಾಗಲಿದೆ. ಅರಮನೆ ಆವರಣದಿಂದ ಸಾಗಿ, ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಬಳಿಯ ದ್ವಾರ, ಕೆ.ಆರ್ ವೃತ್ತ, ಸಯ್ಯಾಜಿ ರಾವ್ ರಸ್ತೆ ಮಾರ್ಗ, ಆರ್ಯುವೇದಿಕ್ ವೃತ್ತ ಮಾರ್ಗವಾಗಿ, ಬೆಂಗಳೂರು ಮೈಸೂರು ರಸ್ತೆ ಮುಖಾಂತರ ಬನ್ನಿಮಂಟಪಕ್ಕೆ ಗಜಪಡೆ ಸೇರಲಿದೆ. ಮಾವುತ ವಿನೂ ಸೂಚನೆ ಮೇರೆಗೆ ಕ್ಯಾಪ್ಟನ್ ಅರ್ಜುನ ರಾಜಬೀದಿಗಳಲ್ಲಿ ಸಾಗಲಿದ್ದಾನೆ.

ಮೈಸೂರು ದಸರಾ : ಬಾಲಿವುಡ್ ಗಾಯಕನ ಹಾಡಿಗೆ ವಿದ್ಯಾರ್ಥಿಗಳು ಫುಲ್ ಫಿದಾ....!


ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಅಕ್ಷರಶಃ ದಿನದಿಂದ ದಿನಕ್ಕೆ ರಂಗು ಪಡೆದುಕೊಳ್ಳುತ್ತದೆ. ಇದಕ್ಕೆ ಮೂಲಕ ಕಾರಣ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಯುವ ದಸರಾ ವೇದಿಕೆ.
ಎರಡನೇ ದಿನದ ಯುವ ದಸರಾ ವೇದಿಕೆ ಸಂಗೀತ ಹಾಗೂ ನೃತ್ಯ ಪ್ರಕಾರಗಳಿಂದ ಚಿಂದಿ ಮಾಡಿತು. ಕಾರ್ಯಕ್ರಮದ ಮೊದಲಿಗೆ ಕಾಲೇಜು ವಿದ್ಯಾರ್ಥಿಗಳ ಜಾನಪದ ನೃತಗಳು ಸಂಸ್ಕೃತಿ ಹಾಗೂ ಪರಂಪರೆಯ ವೈಭವವನ್ನು ಧರೆಗಿಳಿಸಿದರು. ನಂತರ ಗಾಯಕಿ ಸಂಗೀತ ರವೀಂದ್ರನಾಥ್ ಅವರ ಗಾಯನ ಯುವ ದಸರಾ ವೇದಿಕೆಗೆ ರಂಗು ತಂದಿತು. ಇದಾದ ಬಳಿಕ ಬಾಂಬೆ ಮತ್ತು ರಷ್ಯನ್ ಟೀಂ ಮಾಡಿದ ಡ್ಯಾನ್ಸ್ ಯುವಕರನ್ನು ಬೆರಗುಗೊಳಿಸುವುದರ ಜೊತೆಗೆ ಕುಣಿದು ಕುಪ್ಪಳಿಸುವಂತೆ ಮಾಡಿತು.
ಇದಾದ ಬಳಿಕ ವೇದಿಕೆಗೆ ರಾಕ್ ಮ್ಯೂಸಿಕ್ ಹಾಗೂ ಮೆಲೋಡಿ ಸಾಂಗ್ ಮೂಲಕ ಎಂಟ್ರಿ ಕೊಟ್ಟ ಬಾಲಿವುಡ್ ಗಾಯಕ ಮೋಹಿತ್ ಚೌಹಾಣ್ ಗಾಯನಕ್ಕೆ ಎಲ್ಲರೂ ಫುಲ್ ಫಿದಾ ಆದರು. ಮೋಹಿತ್ ಚೌಹಾಣ್ ರಾಕ್ ಮ್ಯೂಸಿಕ್ ಹಾಡುತ್ತಿದ್ರೆ, ಯುವಕರು ಕುಣಿದು ಕುಪ್ಪಳಿಸಿದ್ದರು. ರೊಮ್ಯಾಂಟಿಕ್ ಸಾಂಗ್ ಹೇಳಿದಾಗ ತಲೆದೂಗಿಸಿ ಸಂಗೀತದ ಮಜಲನ್ನು ಆನಂದಿಸಿದರು.
ಎರಡನೇ ದಿನದ ಯುವ ದಸರಾ ಎಲ್ಲಾ ಪ್ರಕಾರದ ಸಂಗೀತ ಹಾಗೂ ನೃತ್ಯಗಳನ್ನು ವೇದಿಕೆ ಮೇಲೆ ಚೆಲ್ಲುವ ಮೂಲಕ ಸಾಂಸ್ಕೃತಿಕ ವೈಭವದ ಕಲೆಯನ್ನು ಚೆಲ್ಲಿತು. ಇಂದು ಯುವ ದಸರಾ ವೇದಿಕೆಯಲ್ಲಿ ಗಾಯಕಿ ಮೊನಾಲಿ ಠಾಕೂರ್‍ರ ಗಾಯನವಿದ್ದು, ಇದಕ್ಕಾಗಿ ಯುವಸ್ತೋಮ ಕಾದು ಕುಳಿತಿದೆ.

ದಸರಾ ಗಜಪಯಣಕ್ಕೆ ವಿದ್ಯುಕ್ತ ಚಾಲನೆ


ಮೈಸೂರು, ಆ.22-ಈ ಬಾರಿಯ ದಸರಾ ಮಹೋತ್ಸವದ ಮೊದಲ ಕಾರ್ಯಕ್ರಮ ಇಂದು ಪ್ರಾರಂಭವಾಗಿದ್ದು ಜಂಬುಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲಿರುವ ಮೊದಲ ಹಂತದ ಆನೆಗಳನ್ನು ಮೈಸೂರಿಗೆ ಕರೆತರುವ ಗಜಪಯಣ ಕಾರ್ಯಕ್ರಮಕ್ಕೆ ಇಂದು ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ನಾಗರಹೊಳೆ ಅರಣ್ಯ ಪ್ರದೇಶದಲ್ಲಿರುವ ವೀರನ ಹೊಸಹಳ್ಳಿ ಗ್ರಾಮದಲ್ಲಿ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.    ದಸರಾ ಮೆರವಣಿಗೆಯಲ್ಲಿ ಭಾಗವಹಿಸಲಿರುವ ಮೊದಲ ಹಂತದ ಭಾವನೆಗಳಿಗೆ ಪೂರ್ಣಕುಂಭ, ಮಂಗಳವಾದ್ಯ, ದೊಳು ವಾದ್ಯ, ಕಂಸಾಳೆ ನೃತ್ಯ ಮುಂತಾದ ಕಲಾತಂಡಗಳ ಕಾರ್ಯಕ್ರಮಗಳನ್ನು ವೀರನಹೊಸಳ್ಳಿ ಗ್ರಾಮದಿಂದ ಮೈಸೂರಿನತ್ತ ಪ್ರಯಾಣ ಬೆಳೆಸಲು ಬೀಳ್ಕೊಡಲಾಯಿತು.     ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್, ಶಾಸಕ ರಾಮದಾಸ್,  ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಪುಷ್ಪಲತಾ ಜಗನ್ನಾಥ್, ವಲಯ ಅರಣ್ಯಾಧಿಕಾರಿ ಅಲೆಕ್ಸಾಂಡರ್, ಜಿಲ್ಲಾ ಎಸ್.ಪಿ., ಸೇರಿದಂತೆ ಹಲವಾರು ಅಧಿಕಾರಿಗಳು ಅರಣ್ಯ ಇಲಾಖೆ ಸಿಬ್ಬಂದಿಗಳು,  ಪೊಲೀಸ್ ಸಿಬ್ಬಂದಿಗಳು ಸಾರ್ವಜನಿಕರು ಭಾಗವಹಿಸಿದ್ದು, ಮೊದಲನೇ ಹಂತದ ಗಜಪಡೆಗೆ  ಪುಷ್ಪಾರ್ಚನೆ  ಮಾಡುವ ಮೂಲಕ  ಗಜಪಯಣಕ್ಕೆ ಚಾಲನೆ ನೀಡಿದರು.     ಮೊದಲನೇ ಹಂತದ ಪಡೆಗೆ ಸಾಂಪ್ರದಾಯಿಕವಾಗಿ ಪೂಜೆಗಳನ್ನು ಸಲ್ಲಿಸಿ, ಆನೆಗಳಿಗೆ  ಕಬ್ಬು ,ಬೆಲ್ಲ, ಬಾಳೆಹಣ್ಣು, ಕೊಬ್ಬರಿ, ಇತ್ಯಾದಿ ಪದಾರ್ಥಗಳನ್ನು ತಿನ್ನಲು ನೀಡಲಾಯಿತು.     ಮೊದಲನೇ ಹಂತದ ಪಡೆಯಲ್ಲಿ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊರುವ ಅರ್ಜುನ 59, ವಿಜಯ 62, ಅಭಿಮನ್ಯು ವರಲಕ್ಷ್ಮಿ 63, ಧನಂಜಯ 36, ಈಶ್ವರ 49, ಎಂಬ ಆನೆಗಳು ಇಂದಿನ ಗಜ ಪಯಣದಲ್ಲಿ ಪಾಲ್ಗೊಂಡಿದ್ದವು.    ಗಜಪಯಣ ಚಾಲನೆ ಸಿಕ್ಕಿದ ನಂತರ ಆರು ಆನೆಗಳನ್ನು ಸುಮಾರು ದೂರದವರೆಗೆ ನಡೆಸಿಕೊಂಡು ಬಂದ ನಂತರ ಲಾರಿಗಳಲ್ಲಿ ಹತ್ತಿಸಿ ಮೈಸೂರಿಗೆ ಕಳುಹಿಸಿಕೊಡಲಾಯಿತು.    ಗಜಪಯಣದ ವೇಳೆ ಮಂಗಳವಾದ್ಯ ಮೊಳಗಿದವು, ಇವರೊಂದಿಗೆ ಡೊಳ್ಳು ಕುಣಿತ, ಕಂಸಾಳೆ ಕುಣಿತ, ವೀರಗಾಸೆ ಮುಂತಾದ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.      

ಹುಣಸೂರಿನಲ್ಲಿ ಭಾರಿ ಮಳೆ : ತುಂಬಿ ಹರಿಯುತ್ತಿರುವ ಲಕ್ಷ್ಮಣತೀರ್ಥ ನದಿ : ಕೆಲವೆಡೆ ಜಲಾವೃತ


ವರದಿ : ಮಾಷಿಂ ಶರೀಫ್. ಹುಣಸೂರು.
ಹುಣಸೂರು : ರಾಜ್ಯದಲ್ಲಿ 4 -5 ದಿನಗಳಿಂದ ಎಡಬಿಡದೇ ಸುರಿಯುತ್ತಿರುವ ಭಾರಿ ಮಳೆಗೆ ರಾಜ್ಯದ ಜನರು ತತ್ತರಿಸಿ ಹೋಗಿದ್ದಾರೆ ಕೊಡಗಿನಲ್ಲಿ ಮಳೆಯ ಆರ್ಭಟ ಜಾಸ್ತಿ ಯಾಗಿದ್ದು ಗುಡ್ಡ ಕುಸಿತದಿಂದ ರಸ್ತೆಗಳು ಬಂದ್ ಆಗಿವೆ. ಕೊಡಗಿನ ಅಂಚಿನಲ್ಲರುವ ಹುಣಸೂರು ಕೂಡ ಅತಿ ಮಳೆಯಿಂದ ಕೂಡಿದ್ದು ಲಕ್ಷ್ಮಣ ತೀರ್ಥ ನಧಿ ತನ್ನ ಒಡಲನ್ನು ತುಂಬಿ ಕೊಂಡು ಹರಿಯುತ್ತಿದೇ ಹನುಗೂಡು ಭಾಗದಲ್ಲಿ ಲಕ್ಷ್ಮಣ ತೀರ್ಥ ನಧಿ ತುಂಬಿ ಹರಿಯುತ್ತಿದ್ದು ಸೇತುವೆಗಳು ಭಾಗಸಾ ಮುಳುಗಿ ಹೋಗಿದ್ದರಿಂದ ಸಂಚಾರ ಅಸ್ತ ವ್ಯಸ್ತ ಗೊಂಡಿದೆ. ಹುಣಸೂರು ಪಟ್ಟಣದ ಹಳೆಯ ಸೇತುವೆಯಲ್ಲಿ ಸಂಚಾರವನ್ನು ಸ್ಥಗಿತ ಗೊಳಿಸಲಾಗಿದೆ. ಲಕ್ಷ್ಮಣ ತೀರ್ಥ ನಧಿಯಲ್ಲಿ ಭಾರಿ ನೀರು ಹರಿಯುತ್ತಿರುವುದರಿಂದ 

ಪಂಪ್ ಹೌಸ್ ಹಾಗೂ ಭ್ರಾಹ್ಮಣರ ಬೀದಿ ನೀರಿನಿಂದ ಜಲಾವೃತಗೊಂಡಿದೆ. ಸಿಂಗರಮಾರನ ಹಳ್ಳಿ ಗ್ರಾಮ ದಲ್ಲಿ ಮಾಜಿ ಶಾಶಕ ದಿವಂಗತ ಎಸ್ ಚಿಕ್ಕಮಾಧು ರವರ ಅಣ್ಣ ಜವರ ನಾಯಕ ರವರ ಮನೆ ಹಾಗೂ ತಂಬಾಕು ಹದ ಮಾಡುವ ಬ್ಯಾರನ್ ಬಿದ್ದು ಹೋಗಿದೆ. ಮತ್ತೆ ಅದೇ ಗ್ರಾಮದ ಕೆಂಪನಾಯಕ ಬಸವರಾಜು ರವರ ಮನೆಯು ಬಿದ್ದು ಹೋಗಿದೆ. ಹುಣಸೂರಿನ ತಾಲೂಕು ರೈತರು ಮಳೆಯಿಂದ ಬೆಳೆಗಳೆಲ್ಲ ನಾಶವಾಗಿದೆ. ಜಾನುವಾರುಗಳು ಮೇವಿಲ್ಲದೆ ಸೊರಗುತ್ತಿವೆ ಒಟ್ಟಾರೆ ಮಳೆಯ ಆರ್ಭಟ ಕ್ಕೆ ಜನರು ತತ್ತರಿಸಿ ಹೋಗಿದ್ದಾರೆ.

ನಾನು ಆಣೆ ಪ್ರಮಾಣಗಳಿಗೆ ತಯಾರಿಲ್ಲ, ಸಾ.ರಾ ಮಹೇಶ್ ಬೆಂಗಳೂರು ಅಥವಾ ಮೈಸೂರಿನ ಪ್ರೆಸ್​ಕ್ಲಬ್‌ಗೆ ಬರಲಿ : ಹೆಚ್ ವಿಶ್ವನಾಥ್


ಟೈಮ್ಸ್ ಆಫ್ ಕೂರ್ಗ್ ( ಮೈಸೂರು)
ವರದಿ : ಮಾಸಿಮ್ ಶರೀಫ್ ಹುಣಸೂರು.
ಮೈಸೂರು: ನಾನು ಆಣೆ ಪ್ರಮಾಣಗಳಿಗೆ ತಯಾರಿಲ್ಲ, ಸಾ.ರಾ ಮಹೇಶ್ ಬೆಂಗಳೂರು ಅಥವಾ ಮೈಸೂರಿನ ಪ್ರೆಸ್​ಕ್ಲಬ್‌ಗೆ ಬರಲಿ ಸಂವಿಧಾನದ ಪುಸ್ತಕ ಇಟ್ಟುಕೊಂಡು ಚರ್ಚೆ ಮಾಡೋಣ ಎಂದು ಅನರ್ಹ ಶಾಸಕ‌ ಹೆಚ್. ವಿಶ್ವನಾಥ್ ಪ್ರತಿ ಸವಾಲು ಹಾಕಿದ್ದಾರೆ. ಸಾ.ರಾ ಮಹೇಶ್​ ವಿರುದ್ಧ ಹಳ್ಳಿ ಹಕ್ಕಿ ಗುಟುರುಹುಣಸೂರಿನ ಪತ್ರಿಕಾ ಭವನದಲ್ಲಿ ಮಾತನಾಡಿದ ಹಳ್ಳಿ ಹಕ್ಕಿ, ನಾನು ಕೆಸರಿಗೆ ಕಲ್ಲು ಎಸೆಯಲು ಹೋಗುವುದಿಲ್ಲ, ಕಲ್ಲು ಎಸೆದರೆ ನನ್ನ ಬಿಳಿ‌ ಶರ್ಟ್​ಗೆ ಕಲೆಯಾಗುತ್ತದೆ ನಾನು ಶುಭ್ರವಾಗಿದ್ದೇನೆ, ಸ್ವಚ್ಛವಾಗಿದ್ದೇನೆ ಎಂದು ಸಾ ರಾ ಮೆಹೇಶ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಇನ್ನೂ ನಾನು ಶಾಸಕನಾಗಿದ್ದ ಸಮಯದಲ್ಲಿ ಕರೆಯಲಾಗಿದ್ದ ಎಲ್ಲ ಟೆಂಡರ್​ಗನ್ನು ಪೂರ್ಣಗೊಳಿಸಿದ್ದೇನೆ. ಯಾರೂ ಭಯಪಡಬೇಡಿ ರಾಜ್ಯದಲ್ಲಿ ನಡೆದ ಕ್ಷಿಪ್ರ ರಾಜಕೀಯ ಕ್ರಾಂತಿಯಲ್ಲಿ ಶಾಸಕರು ಸಾಮೂಹಿಕ ರಾಜೀನಾಮೆ ಕೊಟ್ಟಿದ್ದೇವೆ. ಹಾಗಾಗಿ ನಾನು ಕೂಡ ರಾಜೀನಾಮೆ ನೀಡಬೇಕಾಯಿತು ಇದರ ಬಗ್ಗೆ ಮತದಾರರ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ