ವರದಿ :ಝಕರಿಯ ನಾಪೋಕ್ಲು
ನಾಪೋಕ್ಲು :ಇಲ್ಲಿಗೆ ಸಮೀಪದ ಹೊದವಾಡ ಗ್ರಾಮದ ರಾಫೆಲ್ಸ್ ಇಂಟರ್ ನ್ಯಾಷನಲ್ ಪದವಿಪೂರ್ವ ಕಾಲೇಜಿನ 2021-2022ನೇ ಸಾಲಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಮೊಹಮ್ಮದ್ ಇರ್ಫಾನ್ ಆಯ್ಕೆಯಾದರು , ಕಾರ್ಯದರ್ಶಿಯಾಗಿ ಎಂ. ಎಚ್. ಫಿಜಾ ಫಾತಿಮಾ, ಸಹ ಕಾರ್ಯದರ್ಶಿಯಾಗಿ ಬಿ. ಬಿ.ದೇಚಮ್ಮ, ಕ್ರೀಡಾ ಕಾರ್ಯದರ್ಶಿಯಾಗಿ ಎಂ. ಎಂ. ಸುಜಯ್, ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಅಫ್ರೀನ ಪಿ.ಎಚ್, ಸಾಂಸ್ಕೃತಿಕ ಸಹ ಕಾರ್ಯದರ್ಶಿಯಾಗಿ ಪಿ. ಎಂ.ನುಸೈಬಾ ಬೀಬಿ,ಅವರು ಅತ್ಯಂತ ಹೆಚ್ಚು ಮತ ಪಡೆಯುವ ಮೂಲಕ ಆಯ್ಕೆಯಾಗಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ತನ್ವೀರ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮತದಾನ ಪ್ರಕ್ರಿಯೆಯು ಕಾಲೇಜಿನ ಉಪನ್ಯಾಸಕಿಯರಾದ ರೇಖಾ, ಅಕ್ಷತಾ, ಕಾವ್ಯ, ಕೆ. ಯು ರೇಖಾ, ಪೂಜಶ್ರೀ ಹಾಗೂ ಸಮೀರಾ, ರವರ ಮೇಲ್ವಿಚಾರಣೆಯಲ್ಲಿ ನಡೆಸಲಾಗಿತು.
No comments
Post a Comment