ಕೊಡ್ಲಿಪೇಟೆ : ಸಾರ್ವಜನಿಕ ಬಾವಿಗೆ ಜಿಗಿದು ಪ್ರಥಮ ಪಿಯು ವಿದ್ಯಾರ್ಥಿ ಆತ್ಮಹತ್ಯೆ

No comments

 ಕೊಡ್ಲಿಪೇಟೆ : ಸಮೀಪದ ಬ್ಯಾಡಗೊಟ್ಟ ಗ್ರಾಮದಲ್ಲಿ ಬಾವಿಗೆ ಜಿಗಿದು ಪ್ರಥಮ ಪಿಯು ವಿದ್ಯಾರ್ಥಿಯೊರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸಾರ್ವಜನಿಕ ಬಾವಿಯಲ್ಲಿ ಯುವಕನ ಶವ ಪತ್ತೆಯಾಗಿದ್ದು, ಗ್ರಾಮದ ಎಚ್.ಪಿ ಲೋಕೇಶ್ ರವರ ಪುತ್ರ ಮೋನಿಕ್ (18) ಎಂದು ಗುರುತಿಸಲಾಗಿದೆ.

ಕೊಡ್ಲಿಪೇಟೆಯ ಜೂನಿಯರ್ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿ ಮೋನಿಕ್ 2 ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಬಿಟ್ಟು ಹೋಗುತ್ತಿದವನನ್ನು ಹುಡುಕಿ ಕರೆತರಲಾಗುತ್ತಿತ್ತು. ಮಗ ಜೀವನದಲ್ಲಾ ಜಿಗುಪ್ಸೆಗೊಡಿದ್ದ. ಸೋಮವಾರ ಬೆಳಗ್ಗಿ ದನಗಳಿಗೆ ಮೇವು ತರಲು ಗದ್ದೆ ಹತ್ತಿರ ಹೋಗಿದ್ದವನು ಬಹಳ ಸಮಯವಾದರೂ ಮನೆಗೆ ಹಿಂದಿರುಗಿರಲಿಲ್ಲ , ಹುಡುಕಿ ಹೋದಾಗ ಸಾರ್ವಜನಿಕ ಬಾವಿಯ ಬಳಿ ಹಗ್ಗ ಮತ್ತು ಕುಡುಗೋಲು ಕಾಣಿಸಿತು, ಬಗ್ಗಿ ನೋಡಿದಾಗ ಮಗನ ಮೃತದೇಹ ಗೋಚರಿಸಿತು ಎಂದು ಮೋನಿಕ್ ತಂದೆ ಲೋಕೆಶ್ ತಿಳಿಸಿದ್ದಾರೆ.

ಶನಿವಾರಸಂತೆ ಪೋಲಿಸ್ ಠಾಣೆ ಇನ್ಸ್ಪೆಕ್ಟರ್ ಎನ್ ಪರಶಿವಮೂರ್ತಿ ಹಾಗೂ ಸಿಬ್ಬಂದಿ ಸ್ಥಳ ಭೇಟಿ ನೀಡಿ ಪರಿಶೀಲನೆ ನಡೆಸಿದರು.



No comments

Post a Comment