ಮಡಿಕೇರಿ: ಇತ್ತೀಚೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಅಯ್ಯಂಗೇರಿ ಗ್ರಾಮದ ನಿವಾಸಿ ಎಂ.ಎಸ್.ಮೊಹಮ್ಮದ್ ಹಾಗೂ ಅಲೀಮಾ ದಂಪತಿಗಳ ಪ್ರಥಮ ಪುತ್ರಿ ಎಂ.ಎo.ಅಮೀರಾ (21) ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿ ಈಕೆಯ ಕುಟುಂಬ ವರ್ಗ ಮಡಿಕೇರಿ ಡಿವೈಎಸ್‌ಪಿ ಗಜೇಂದ್ರ ಪ್ರಸಾದ್ ಅವರಿಗೆ ಮನವಿ ಪತ್ರ ಸಲ್ಲಿಸಿದೆ.
ವರದಕ್ಷಿಣೆ ಕಿರುಕುಳ ಮಹಿಳೆಯ ಸಾವಿಗೆ ಕಾರಣವೆಂದು ಪೋಷಕರು ಆರೋಪಿಸಿದ್ದು, ಪತಿ, ಮಾವ ಮತ್ತು ಅತ್ತೆ ನಾಪತ್ತೆಯಾಗಿದ್ದಾರೆ. ಇವರುಗಳನ್ನು ಬಂಧಿಸಬೇಕೆದು ಒತ್ತಾಯಿಸಿ ಅಮೀರಾಳ ತಾಯಿ ಅಲೀಮಾ ಡಿವೈಎಸ್‌ಪಿಗೆ ದೂರು ನೀಡಿದ್ದಾರೆ.
ಕಕ್ಕಬ್ಬೆ ಕುಂಜಿಲ ಗ್ರಾಮದ ನಿವಾಸಿ ಕುಂಡಂಡ ಅಬ್ದುಲ್ಲಾ ಹಾಗೂ ಜಮೀಲಾ ದಂಪತಿಗಳ ಪುತ್ರ ರುವೈಜ್ ಕೆ.ಎ ಮತ್ತು ಅಯ್ಯಂಗೇರಿಯ ಅಮೀರ ನಾಪೋಕ್ಲು ಕಾಲೇಜಿನ ವಿದ್ಯಾರ್ಥಿಗಳಾಗಿದ್ದ ಅವಧಿಯಿಂದಲೇ ಪರಸ್ಪರ ಪ್ರೀತಿಸುತ್ತಿದ್ದರು. ಇವರ ವಿವಾಹ ಕಳೆದ 2020ರ ನವೆಂಬರ್ 1 ರಂದು ಅಯ್ಯಂಗೇರಿ ಮದ್ರಸದಲ್ಲಿ ನಡೆದಿತ್ತು.
ವಿವಾಹದ ಬಳಿಕ ಪತಿ ಮನೆಯವರು ವರದಕ್ಷಿಣೆಗಾಗಿ ಅಮೀರಳಿಗೆ ಕಿರುಕುಳ ನೀಡುತ್ತಿದ್ದರು, ಇದರಿಂದ ಮನನೊಂದ ಆಕೆ ತವರು ಮನೆಗೆ ಬಂದು ನೇಣಿಗೆ ಶರಣಾಗಿದ್ದಾಳೆ ಎಂದು ಕುಟುಂಬದ ಸದಸ್ಯರು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
ಪತಿ ಹಾಗೂ ಮಾವ ನಾಪತ್ತೆಯಾಗಿದ್ದು, ಭಾಗಮಂಡಲ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
No comments
Post a Comment