ನಾಪೋಕ್ಲು : ಕೋವಿಡ್ 19 ಎಂಬ ಮಹಾಮಾರಿಯಿಂದ ಚೆರಿಯಪರಂಬುವಿನಲ್ಲಿ ಅತ್ಯಂತ ಸರಳವಾಗಿ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಚೆರಿಯಪರಂಬುವಿನಲ್ಲಿ ಅಂತಿಮ ವಿಶ್ರಾಂತಿ ಪಡೆಯುತ್ತಿರುವ ಮಹಾನುಭಾವರಾದ ಅಬ್ದುಲ್ ರೆಹಮಾನ್ ವಲಿಯುಲ್ಲಾಹಿ (ನಮ) ಅವರ ಸನ್ನಿಧಿಯಲ್ಲಿ ಎಂ. ಜೆ. ಎಂ ಮುಖ್ಯಧರ್ಮಗುರುಗಳಾದ ಅಶ್ರಫ್ ಸಖಾಫಿ ಉಸ್ತಾದ್ ರವರ ನೇತೃತ್ವದಲ್ಲಿ ಪ್ರಾರ್ಥನೆ ನಡೆದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ನಂತರ ಮುಹಿಯುದ್ದೀನ್ ಜುಮಾ ಮಸೀದಿ ಆಡಳಿತ ಮಂಡಳಿಯ ಗೌರ್ವಾನಿತ ಅಧ್ಯಕ್ಷರಾದ ಜನಾಬ್ ಅಬ್ದುಲ್ ರೆಹಮಾನ್ ಹಾಜಿ ರವರು ಧ್ವಜಾರೋಹಣ ನೆರವೇರಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಚೆರಿಯಪರಂಬು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಶ್ರೀ ಸುಕುಮಾರ್ ರವರು ಮಾತನಾಡಿ 75 ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಎಲ್ಲರಿಗೂ ತಿಳಿಸುತ್ತಾ ಬಾರತ ದೇಶದಲ್ಲಿ ಎಲ್ಲರೂ ಸಹ ಬಾಳ್ವೆಯಿಂದ ಬಾಳುವಂತಾಗಲಿ ಎಂದು ಶುಭ ಹಾರೈಸಿದರು.
ನಂತರ ನಡೆದ ಸಮಾರಂಭದಲ್ಲಿ 10 ನೇ ತರಗತಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ SSF ಚೆರಿಯಪರಂಬು ಕಲ್ಲುಮೊಟ್ಟೆ ಯೂನಿಟ್ ವತಿಯಿಂದ ಬಹುಮಾನ ವಿತರಿಸಿದರು, ನಂತರ ಬಾಗವಹಿಸಿದ ಎಲ್ಲರಿಗೂ ಸಿಹಿಯನ್ನು ಹಂಚಲಾಯಿತು.
ಈ ಸಂದರ್ಭದಲ್ಲಿ ಮೂಹಿಯುದ್ದೀನ್ ಜುಮಾ ಮಸೀದಿಯ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಪರವಂಡ ಸಿರಾಜ್, ಕೋಶಾಧಿಕಾರಿ ಪಿ ಹೆಚ್ ಬಶೀರ್, ಸಹ ಕಾರ್ಯದರ್ಶಿ ಕೆ ಎ ಹಾರಿಸ್, ಸದಸ್ಯರಾದ ಪಿ ಎಂ ಹನೀಫ್, ವಿ ಎ ಕಾದರ್ ಮುಸ್ಲಿಯಾರ್, ಧರ್ಮ ಗುರುಗಳಾದ ಲತೀಫ್ ಸಖಾಫಿ, ಅಬ್ದುಲ್ ರೆಹಮಾನ್, ಮತ್ತು ಗ್ರಾಮಸ್ಥರು ಹಾಜರಿದ್ದರು.ಪರವಂಡ ಸಿರಾಜ್ ಸ್ವಾತಿಸಿ ವಂದಿಸಿದ.ರು



No comments
Post a Comment