ವರದಿ : ಅಜರುದ್ದೀನ್ ವಯಕೋಲ್
ನಾಪೋಕ್ಲು (ಕುಂಜಿಲ web@timesofcoorg) : ಕುಂಜಿಲ ವಯಕೋಲ್ ಮಸ್ಜಿದುಲ್ ರಹ್ಮಾನ್ ಮತ್ತು ರೌಳತುಲ್ ಉಲೂಂ ಆಶ್ರಯದಲ್ಲಿ 75ನೇ ವರ್ಷದ ಸಂಭ್ರಮದ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು.ಧ್ವಜಾರೋಹಣದೊಂದೀಗೆ ಸರಳವಾಗಿ ಆರಂಭಿಸಿದ ಕಾರ್ಯಕ್ರಮದ ಪ್ರಾರ್ಥನೆಯನ್ನು ಇಸ್ಮಾಯಿಲ್ ಲತೀಫೀ ನರ್ವಹಿಸಿದರು.
ವಯಕೋಲ್ ಆಡಳಿತ ಮಂಡಳಿ ಅಧ್ಯಕ್ಷರಾದ ಉಸ್ಮಾನ್, ಕುಂಜಿಲ ಪೈನರಿ ಮುಸ್ಲಿಂ ಜಮಾಅತ್ತಿನ ಸಲಹಾ ಸಮಿತಿ ಅಬು, ಕಾರ್ಯದರ್ಶಿ ಸಿರಾ ಹಾಗೂ ಶಂಸುದ್ದೀನ್ ಮತ್ತು ಅಂದ್ರು, ಮುಸ್ತಾಫಾ, ಮೊಯ್ದು, ಮಮ್ಮುಣಿ, ಔಕರ್ ಸಖಾಫಿ, ನಿಸು, ಹಾರಿಸ್, ರಫೀಕ್, ಕಲಿ, ಜಕರಿಯಾ ಹಾಗೂ ಊರಿನ ಹಿರಿಯರು ಮತ್ತು ಮದ್ರಸ ವಿದ್ಯಾರ್ಥಿಗಳು ಹಾಜರಿದ್ದರು.
ನೆತ್ತರು ಹರಿಸಿ ತಮ್ಮ ಪ್ರಾಣ ತ್ಯಾಗ ಮಾಡಿದ ಸ್ವತಂತ್ರ ಹೋರಾಟಗಾರರ ನೆನಪನ್ನು ಮೆಲುಕು ಹಾಕಿ ಸಂಭ್ರಮದಿಂದ ಜರುಗಿದ ಕಾರ್ಯಕ್ರಮದ ಕೂನೆಯಲ್ಲಿ ವಿದ್ಯಾರ್ಥಿಗಳೀಗೆ ಸಿಹಿ ಹಂಚಲಾಯಿತು.

No comments
Post a Comment