ಮೈನಾ ಪಕ್ಷಿಯನ್ನು ಹರ ಸಾಹಸದಿಂದ ರಕ್ಷಿಸಿ ಮಾನವೀಯತೆ ಮೆರೆದ ವಿದ್ಯಾರ್ಥಿ ಜಾಫರ್..

No comments
ಸ್ವಚ್ಛಂದವಾಗಿ ಹಾರಾಡುತ್ತಿದ್ದ ಪಕ್ಷಿಯೊಂದು  ಹೊಟ್ಟೆ ಪಾಡಿಗಾಗಿ ಭೂಮಿ ಮೇಲೆ ಇಳಿದ ಸಂದರ್ಭ ಆಕಸ್ಮಿಕವಾಗಿ ಕಾಲಿಗೆ ಗಾಳಿಪಟದ ದಾರ ಒಂದು  ಸಿಲುಕಿಕೊಂಡ ಪಕ್ಷಿಯ ಎರಡು ಕಾಲುಗಳನ್ನು ಸುತ್ತಿಕೊಂಡಿತ್ತು . ಇದರಿಂದ ಸಂಕಷ್ಟಕ್ಕೊಳಗಾದ ಪಕ್ಷಿ ಸಮೀಪದ ಸರಕಾರಿ ಅಕ್ಕಿ ಸಂಗ್ರಹಣಾ ಗೋದಾಮಿನ 25 ಅಡಿ  ಎತ್ತರದಲ್ಲಿರುವ ತನ್ನ ಗೂಡು ಸೇರಿ ನೆಮ್ಮದಿಯಾಗಿ ಇರಲು ಬಯಸಿತ್ತು. ವಿಧಿಯಾಟ ಬಲ್ಲವರ್ಯಾರು ಎನ್ನುವ ಹಾಗೆ ಮೊದಲೇ ಎರಡು ಕಾಲಿಗೆ ಸಿಲುಕಿಕೊಂಡಿದ್ದ ದಾರವನ್ನು ಬಿಡಿಸಿಕೊಳ್ಳಲು ಸಾಧ್ಯವಾಗದ ಪಕ್ಷಿ .ಗೂಡಿನ ಬಳಿ ಇದ್ದ ಮೇಲ್ಛಾವಣಿಯ ಮರದಲ್ಲಿದ್ದ ಮೊಳೆ ಹಾಗೂ ತಂತಿಗೆ ಕಾಲು ಸಿಲುಕಿಕೊಂಡು ವಿಲವಿಲನೆ ಕಿರುಚಾಡುತ್ತಿತ್ತು.
ಕಟ್ಟಡದ ಸಮೀಪದಲ್ಲಿ ನಡೆದು ಹೋಗುತ್ತಿದ್ದ ಯುವಕನೋರ್ವ ಗಮನಿಸಿ ಇತರ ಸ್ನೇಹಿತರಿಗೆ ವಿಷಯ ಮುಟ್ಟಿಸಿದ್ದಾನೆ.15 ಅಡಿ  ಎತ್ತರದ ಏಣಿಯೊಂದಿಗೆ ಸ್ಥಳಕ್ಕೆ ಬಂದ ಯುವಕರು ಗಮನಿಸಿ  ಪಕ್ಷಿ ರಕ್ಷಣೆಗೆ  ಮುಂದಾದರು.  ಅದರೆ 25 ಅಡಿ ಎತ್ತರದಲ್ಲಿರುವ ಕಾರಣದಿಂದ  ರಕ್ಷಣೆ ಮಾಡಲು ಸಾಧ್ಯವಿಲ್ಲ ಎಂದು ಕೈ ಬಿಟ್ಟಿದ್ದರು.ಸ್ಥಳದಲ್ಲಿದ್ದ  3 ನೇ ತರಗತಿಯ ಸಣ್ಣ ವಿದ್ಯಾರ್ಥಿನೊರ್ವ 10 ನೇ ತರಗತಿಯ ಎತ್ತರದ ವಿದ್ಯಾರ್ಥಿ ಜಾಫರ್ ಎಂಬಾತನ್ನು  ಕರೆತಂದ. ಪಕ್ಷಿಯ ಆಕ್ರಂದನ ಕೇಳಿ ಮರುಗಿದ ಜಾಫರ್. ಪಕ್ಷಿಯನ್ನು ಹೇಗಾದರೂ  ರಕ್ಷಣೆ ಮಾಡಬೇಕೆನ್ನುವ ಛಲದಿಂದ ಅದೇ ಎಣಿಯಿಂದಲೇ ಅತಿ ಅಪಾಯಕಾರಿ ಸ್ಥಿತಿಯನ್ನು ಲೆಕ್ಕಿಸದೆ ಸುಮಾರು ಒಂದೂವರೆ ಗಂಟೆ ಕಾಲ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡ. ಕೊನೆಗೆ  ಪಕ್ಷಿ ಸಿಲುಕಿದ ದಾರ ಹಾಗೂ ತಂತಿಯನ್ನು ತೆಗೆಯಲು ಸಾಧ್ಯವಾಗದೆ.ಕಟ್ಟರ್ ಮೂಲಕ ಮೊಳೆಯನ್ನು ತೆಗೆದ.ಮತ್ತೊಂದು ದಾರದ ಮೂಲಕ  ಪಕ್ಷಿಯ ಕಾಲಿಗೆ ಕಟ್ಟಿ ಕೆಳಗೆ ಇದ್ದ ವ್ಯಕ್ತಿಯೊಬ್ಬರಿಗೆ  ನೀಡಿದ.ಪಕ್ಷಿಯ ಕಾಲುಗಳಿಗೆ ಗಾಯವಾಗಿ ದಾರ. ತಂತಿ ಎಲ್ಲವನ್ನೂ ಸುಮಾರು ಅರ್ಧ ಗಂಟೆ ಕಾಲ ಬಿಡಿಸಿ ಹೊರತೆಗೆದರು. 
ಆರಂಭದಲ್ಲಿ ಕಿರುಚಾಡುತ್ತಿದ್ದ ಪಕ್ಷಿ ಕೊನೆಗಳಿಗೆಯಲ್ಲಿ ಮೌನವಾಗಿತ್ತು.ಜೀವನ್ಮರಣ ಸ್ಥಿತಿಯಲ್ಲಿ ಸಿಲುಕಿದ ಪಕ್ಷಿಯನ್ನು ರಕ್ಷಣೆ ಮಾಡಿ ಮತ್ತೆ ಹಾರಿಬಿಟ್ಟ  ಗುಂಡ್ಲುಪೇಟೆ  ಜೆ    ಎಸ್  ಎಸ್  ಕಾಲೆಜು   ವಿದ್ಯಾರ್ಥಿ ಜಾಫರ್ ಸಾಹಸವನ್ನು ಮೆಚ್ಚಿ ಸ್ಥಳದಲ್ಲಿದ್ದ  ವ್ಯಕ್ತಿಯೊಬ್ಬರು ಅಭಿನಂದಿಸಿದರು. 
       

No comments

Post a Comment