ಎಸ್ಎಸ್ಎಫ್ ಕೊಡಗು ಜಿಲ್ಲಾ ಸಮಿತಿಯ ಬ್ಲಡ್ ಸೈಬೋ ವತಿಯಿಂದ 22ರಂದು ರಕ್ತದಾನ ಶಿಬಿರ

No comments

ಮಡಿಕೇರಿ (Times Of Coorg) : ಕೊಡಗು ಜಿಲ್ಲಾ ಸುನ್ನಿ ಸ್ಟೂಡೆಂಟ್ ಫೆಡರೇಶನ್(SSF) ಇದರ ಸಹಾಯಕ ವಿಭಾಗವಾದ ಹೆಲ್ಪ್ ಡೆಸ್ಕ್‌ನ ಬ್ಲಡ್ ಸೈಬೋ ವಿಭಾಗದಿಂದ ಇದೇ ಬರುವ 22-06-2020 ಸೋಮವಾರದಂದು ಕೊಟ್ಟಮುಡಿಯ ಮರ್ಕಝುಲ್ ಹಿದಾಯದಲ್ಲಿ ಕೊಡಗು ಜಿಲ್ಲಾ ವೈದ್ಯಕೀಯ ಕಾಲೇಜಿನ ಸಹಯೋಗದೊಂದಿಗೆ ರಕ್ತದಾನ ಶಿಬಿರ ನಡೆಯಲಿದೆ.

"ಬ್ಲಡ್ ಸೈಬೋ" ಈಗಾಗಲೇ ರಾಜ್ಯದಾದ್ಯಂತ 15000 ಕ್ಕಿಂತಲೂ ಹೆಚ್ಚು ಯೂನಿಟ್ ರಕ್ತವನ್ನು ದಾನ ಮಾಡಲಾಗಿದ್ದು  ಕೊಡಗು ಜಿಲ್ಲೆಯಲ್ಲೂ ಈ ಹಿಂದೆ ಸಂಘಟನೆಯ ವತಿಯಿಂದ ಶಿಬಿರಗಳನ್ನು ಹಮ್ಮಿಕೊಂಡು ಹಲವರಿಗೆ ಜೀವದಾನ ಒದಗಿಸಿದೆ. ಮಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಪ್ರತಿನಿತ್ಯವೂ ರೋಗಿಗಳಿಗೆ ಆಸರೆ ಯಾಗುತ್ತಿದ್ದು. ಜಿಲ್ಲಾ ವೈದ್ಯಕೀಯ ಕಾಲೇಜಿನ ರಕ್ತ ನಿಧಿಗೆ ಇದೇ ಮೊದಲ ಬಾರಿಗೆ ರಕ್ತದಾನ ಮಾಡುವ ಶಿಬಿರವನ್ನು ಹಮ್ಮಿಕೊಂಡಿದೆ.

     ಅವಶ್ಯಕವಾದರೆ ಜಿಲ್ಲೆಯ ವಿವಿಧೆಡೆಗಳಲ್ಲಿ ಮುಂದಿನ ದಿನಗಳಲ್ಲಿ  ರಕ್ತದಾನ ಮಾಡಲು ಕಾರ್ಯಕರ್ತರನ್ನು ಸಜ್ಜುಗೊಳಿಸಲಾಗಿದೆ ಎಂದು ಎಸ್ ಎಸ್ ಕೊಡಗು ಜಿಲ್ಲಾಧ್ಯಕ್ಷರಾದ ಅಬ್ದುಲ್ ಅಝೀಝ್ ಸಖಾಫಿ ಕೊಡ್ಲಿಪೇಟೆಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯ ಯಾವುದೇ ಆಸ್ಪತ್ರೆಗಳಲ್ಲಿ ರಕ್ತದ ಅವಶ್ಯಕತೆ ಬಂದರೆ ತುರ್ತಾಗಿ ರಕ್ತ ಒದಗಿಸಲು ಕಾರ್ಯಕರ್ತರನ್ನು ಒಳಗೊಂಡ ಗುಂಪು ರಚನೆಯಾಗಿದ್ದು ಎಲ್ಲಾ ಸಮಯದಲ್ಲೂ ಕಾರ್ಯನಿರ್ವಹಿಸಲಿದೆ,ಹಾಗೂ ಇನ್ನಿತರ ಯಾವುದಾದೇ ತುರ್ತು ಸಹಾಯದ ಅವಶ್ಯಕತೆಗಾಗಿ ರಾಜ್ಯ ಸಮಿತಿ ವತಿಯಿಂದ ಹೆಲ್ಪಡೆಸ್ಕ್ ಕಾರ್ಯನಿರ್ವಹಿಸುತ್ತಿದ್ದು ಜಿಲ್ಲೆಯಲ್ಲೂ ಕೂಡ ಅದು ಸಕ್ರಿಯವಾಗಿದೆ. ಲಾಕ್ಡೌನ್ ಸಂದರ್ಭ ತೊಂದರೆಗೊಳಗಾದ ಹಲವರಿಗೆ ತನ್ನ ಸಹಾಯ ಹಸ್ತವನ್ನು ಚಾಚಿದ್ದು ಲಕ್ಷಾಂತರ ರೂ.ಗಳ ಸಾಮಗ್ರಿಗಳನ್ನು ವಿತರಣೆ ಮಾಡಿದೆ.

22 ರಂದು ನಡೆಯುವ ರಕ್ತದಾನ ಶಿಬಿರಕ್ಕೆ ನೊಂದಾವಣೆ ಮಾಡಿದ ರಕ್ತದಾನಿಗಳಿಗೆ ಮಾತ್ರ ಅವಕಾಶ ಮಾಡಲಾಗಿದ್ದು ನೂರಾರು ಕಾರ್ಯಕರ್ತರು ರಕ್ತದಾನಕ್ಕೆ ಸಿದ್ಧರಿದ್ದರು ಕೋರೋನ  ಹಿನ್ನೆಲೆಯಲ್ಲಿ ಪರಿಮಿತಿ ಇರುವುದರಿಂದ ವ್ಯಾಪಕವಾದ ರಕ್ತದಾನಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಸಂಚಾಲಕರಾದ ರಹಿಂ ಹೊಸತೋಟ ಹಾಗೂ ಅಶ್ಕರ್ ಸಖಾಫಿ, ತಿಳಿಸಿದ್ದಾರೆ.

No comments

Post a Comment