ಎಸ್ ಎಸ್ ಎಲ್ ಸಿ ವಿಧ್ಯಾರ್ಥಿಗಳಿಗೆ ಭಾರತ್ ಸ್ಕೌಟ್ಸ್ ಗೈಡ್ಸ್ ವತಿಯಿಂದ ಮುಖಗವಸು ಕೊಡುಗೆ

No comments

ವರದಿ : ಚಂದನ್ ನಂದರಬೆಟ್ಟು
@www.timesofcoorg.in

   ಮಡಿಕೇರಿ (Times Of Coorg):  ಭಾರತ್ ಸ್ಕೌಟ್ಸ್ ಗೈಡ್ಸ್‌ನ ವತಿಯಿಂದ ಇಂದು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುವ ವಿಧ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಪ್ರತಿಯೊಬ್ಬ ವಿಧ್ಯಾರ್ಥಿಗೂ ಮುಖಗವಸು ದೊರಕಬೇಕೆನ್ನುವ ಆಶಯದಿಂದ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಪಿ.ಎಸ್ ಮಚ್ಚಾಡೋ ಅವರಿಗೆ ಮಾಸ್ಕ್ ಗಳನ್ನು ಹಸ್ತಾಂತರಿಸುವ ಕಾರ್ಯಕ್ರಮ ನಡೆಸಲಾಯಿತು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಛೇರಿಯಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಕೊಡಗು ಜಿಲ್ಲಾ ಸ್ಕೌಟ್ಸ್ ಗೈಡ್ಸ್ ನ ಪ್ರಧಾನ ಆಯುಕ್ತರು ಹಾಗು ಕೊಡಗು ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾಗಿರುವ ಪಿ.ಎಸ್ ಮಚ್ಚಾಡೋ ಹಾಗು ಸ್ಕೌಟ್ಸ್ ಗೈಡ್ಸ್ ನ ಉಪಾಧ್ಯಕ್ಷರಾದ ಕೆ.ಟಿ ಬೇಬಿ ಮ್ಯಾಥ್ಯೂ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸ್ಕೌಟ್ಸ್ ಗೈಡ್ಸ್ ನ ಜಿಲ್ಲಾ ಪ್ರಧಾನ ಆಯುಕ್ತ ಹಾಗು ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ  ಶ್ರೀಯುತ ಪಿ.ಎಸ್ ಮಾಚ್ಚಾಡೋ ಅವರು, ಸಮಾಜ ಸೇವೆಯಲ್ಲಿ ಇನ್ನೊಬ್ಬರಿಗೆ ಮಾದರಿಯಾಗಿ, ಕೊರೋನಾ ಸೋಂಕಿನ ಕಾರಣದಿಂದ ಪರೀಕ್ಷೆ ಬರೆಯುವ ವಿಧ್ಯಾರ್ಥಿಗಳಲ್ಲಿ ಇರುವ ಸೋಂಕಿನ ಭಯದ ವಾತಾವರಣವನ್ನು ಹೋಗಲಾಡಿಸಲು ಹಾಗು ವಿಧ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲೆಯ ಪ್ರತಿ ವಿಧ್ಯಾರ್ಥಿಗಳಿಗೂ ಮುಖಗವಸು ತಲುಪಬೇಕೆನ್ನುವ ಸ್ಕೌಟ್ ಗೈಡ್ಸ್ ನ ಉದ್ದೇಶ ಬಹಳ ಮಹತ್ವಪೂರ್ಣವಾದುದು.
ಸ್ಕೌಟ್ಸ್ ಗೈಡ್ಸ್ ನ ವಿಧ್ಯಾರ್ಥಿಗಳ ಸಮವಸ್ತ್ರ ಹಾಗು ಶಿಸ್ತು ಗೌರವಯುತ ಭಾವನೆಯನ್ನು ಮೂಡಿಸುತ್ತದೆ. ಭಾರತ್ ಸ್ಕೌಟ್ಸ್ ಗೈಡ್ಸ್ ಕೊರೋನಾ ವಿರುದ್ಧ ಜಾಗೃತಿ ಮೂಡಿಸುತ್ತಿರುವುದಲ್ಲದೆ ಇದೀಗ ಸದಸ್ಯರುಗಳು ತಾವೇ ಸ್ವತಃ ಹಣ ಒದಗಿಸುವ ಮೂಲಕ ಮಾಸ್ಕ್ ವಿತರಿಸಿ ಸಾಮಾಜ ಸೇವೆಯನ್ನು ಕೈಗೊಂಡಿದ್ದು ಶ್ಲಾಘನೀಯವೆಂದರು.

ಹಾಗು ಈ ಕಾರ್ಯಕ್ಕೆ ಪದವಿ ಹಂತದ ಪ್ರಥಮ ದರ್ಜೆ ಕಾಲೇಜುಗಳು ಸಹಕರಿಸಿದ್ದು ಕೂಡ ಹೆಮ್ಮೆಯ ವಿಚಾರವಾಗಿದೆ,
ಈಗಾಗಲೆ ಕೊಡಗಿನಲ್ಲಿ ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಿಸಬೇಕಾಗಿರುವುದರಿಂದ ಹೆಚ್ಚುವರಿ ಮಾಸ್ಕ್ ಗಳನ್ನು ಸಂಗ್ರಹಿಸಲಾಗುತ್ತಿದೆ ಎಂದರಲ್ಲದೆ,
ಎಲ್ಲಾ ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಿಸುವುದು ನಮ್ಮ ಗುರಿ, ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಕೌಟ್ಸ್ ಗೈಡ್ಸ್ ನ ಅಭಿವೃದ್ಧಿ ಹಾಗು ಬೆಳವಣಿಗೆಗೆ ನಮ್ಮ ಸಂಪೂರ್ಣ ಬೆಂಬಲವಿದೆ, ಸ್ಕೌಟ್ಸ್ ಗೈಡ್ಸ್ ನ ಸೇವಾ ಪ್ರತಿಫಲ ಕೊಡಗಿನ ಎಲ್ಲಾ ವಿಧ್ಯಾರ್ಥಿಗಳಿಗೆ ಸಿಗಲೆಂದು ಆಶಿಸಿದರು.

ಸ್ಕೌಟ್ಸ್ ನ ಜಿಲ್ಲಾ ಆಯುಕ್ತರಾದ ಶ್ರೀ ಜಿಮ್ಮಿ ಸಿಕ್ವೇರಾ ಮಾತನಾಡಿ ಕೊರೋನಾ ಪಿಡುಗಿನಿಂದ ನಮ್ಮ ಎಲ್ಲಾ ಕೆಲಸ ಕಾರ್ಯಗಳು ಸ್ಥಗಿತಗೊಂಡಿವೆ. ಇದರಿಂದ ಮಾನವ ಜೀವನವೇ ಪರಿತಪಿಸುವಂತಾಗಿದೆ. ಆದ್ದರಿಂದ ಈ ಸಂದರ್ಭದಲ್ಲಿ ಭಾರತ್ ಸ್ಕೌಟ್ಸ್ ಗೈಡ್ಸ್ ರಾಜ್ಯ ಪ್ರಧಾನ ಆಯುಕ್ತರಾದ ಪಿ.ಜಿ.ಆರ್ ಸಿಂಧ್ಯಾ ಅವರ ಕನಸಂತೆ, ಎಸ್ ಎಸ್ ಎಲ್ ಸಿ ಮಕ್ಕಳಿಗೆ ಪರೀಕ್ಷೆಯ ಸಂದರ್ಭದಲ್ಲಿ ಮಾಸ್ಕ್ ಗಳನ್ನು ವಿತರಿಸುವ ಕಾರ್ಯವನ್ನು ಕೈಗೊಂಡಿದ್ದೇವೆ. ವಿದ್ಯಾರ್ಥಿಗಳಲ್ಲಿ ಧನಿಕ,ಮಧ್ಯಮ, ಬಡ ವಿದ್ಯಾರ್ಥಿಗಳು ಇರುವುದರಿಂದ, ಎಲ್ಲರೂ ಮುಖಗವಸು ಧರಿಸುವಂತಾಗಬೇಕೆನ್ನುವುದು ನಮ್ಮ ಸಂಸ್ಥೆಯ ಉದ್ದೇಶವೆಂದರು.  ಶಿಕ್ಷಣ ಇಲಾಖೆಯ ಸಹಯೋಗ,ಮಾರ್ಗದರ್ಶನ ಮತ್ತು ಬೆಂಬಲದೊಂದಿಗೆ ಈ ಸೇವಾ ಕಾರ್ಯವನ್ನು ನಡೆಸುತ್ತಿರುವುದಾಗಿ ಸಭೆಯಲ್ಲಿ ತಿಳಿಸಿದರು.

ನಂತರ ಜಿಲ್ಲಾ ಸ್ಕೌಟ್ಸ್ ಆಯುಕ್ತರಾದ ಜಿಮ್ಮಿ ಸಿಕ್ವೇರಾ ಅವರು ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀಯುತ ಪಿ.ಎಸ್ ಮಚ್ಚಾಡೋ ಅವರಿಗೆ ಮಾಸ್ಕ್ ಗಳನ್ನು ಹಾಜರಿದ್ದ ಸಭಿಕರ ಆಶ್ರಯದಲ್ಲಿ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಹಾಗು ಸ್ಕೌಟ್ಸ್ ಗೈಡ್ಸ್ ನ ಆಯುಕ್ತರಾದ ಶ್ರೀಯುತ ಪಿ.ಎಸ್ ಮಚ್ಚಾಡೋ,
ಭಾರತ್ ಸ್ಕೌಟ್ಸ್ ಗೈಡ್ಸ್ ನ ಉಪಾಧ್ಯಕ್ಷರಾದ ಶ್ರೀ ಬೇಬಿ ಮ್ಯಾಥ್ಯೂ, ಸ್ಕೌಟ್ಸ್ ನ ಜಿಲ್ಲಾ ಆಯುಕ್ತರಾದ ಜಿಮ್ಮಿ ಸಿಕ್ವೇರಾ,
ಸ್ಕೌಟ್ಸ್ ಗೈಡ್ಸ್ ಜಿಲ್ಲಾ ತರಬೇತಿ ಆಯುಕ್ತರಾದ ಶ್ರೀ ಸುರೇಶ್ ಕುಮಾರ್ ಎಸ್.ಎಲ್, ರಾಜ್ಯ ಸಮಿತಿ ಸದಸ್ಯರಾದ ಶ್ರೀ ದೇವಾನಂದ ಎನ್.ಸಿ, ಸೋಮವಾರಪೇಟೆ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿಗಳಾದ  ಚಂದ್ರಶೇಖರ, ಮಡಿಕೇರಿ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ವಸಂತಿ,
ಪೊನ್ನಂಪೇಟೆ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ವಾಮನ, ಖಜಾಂಚಿ ಮುತ್ತಮ್ಮ , ಜಿಲ್ಲಾ ಸ್ಥಾನಿಕ ಆಯುಕ್ತರಾದ ಹೆಚ್ ಆರ್ ಮುತ್ತಪ್ಪ, ಪೊನ್ನಂಪೇಟೆ ಸ್ಥಳೀಯ ಸಂಸ್ಥೆಯ ಸಹಕಾರ್ಯದರ್ಶಿ ಅಲಿಮಾ, ಪುಷ್ಪ ,ಅಶೋಕ,ಸ್ಕೌಟ್ಸ್ ಮಾಸ್ಟರ್ ಪ್ರಸನ್ನ ಮೇಕೇರಿ, ರೋವರ್ ತಮ್ಮಯ್ಯ,ಎಸ್.ಜಿ.ವಿ ರಂಜಿನಿ, ಉಷಾರಾಣಿ ಹಾಗು ಭಾರತ್ ಸ್ಕೌಟ್ಸ್ ಗೈಡ್ಸ್ ಜಿಲ್ಲಾ ಸಂಘಟಕರಾದ  ದಮಯಂತಿ ಹಾಜರಿದ್ದರು.

ಸ್ಕೌಟ್ಸ್ ನ  ಜಿಲ್ಲಾ ಆಯುಕ್ತರಾದ ಜಿಮ್ಮಿ ಸಿಕ್ವೇರಾ ಅವರು  ಸರ್ವರನ್ನು ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.


No comments

Post a Comment