ಕೊಟ್ಟಮುಡಿ ಮರ್ಕಝುಲ್ ಹಿದಾಯದಲ್ಲಿ ಸಂಭ್ರಮದ ಸ್ವಾತಂತ್ರೋತ್ಸವ

No comments

 


 ನಾಪೋಕ್ಲು (web@timesofcoorg) : ಕೊಟ್ಟಮುಡಿ ಮರ್ಕಝುಲ್ ಹಿದಾಯ ದಲ್ಲಿ ಭಾರತದ 75ನೇ ಸ್ವಾತಂತ್ರೋತ್ಸವವನ್ನು ಸಂಭ್ರಮ ದೊಂದಿಗೆ ಆಚರಿಸಲಾಯಿತು,ಮುಖ್ಯ ಅತಿಥಿಗಳಾಗಿ ಆಗಮಿಸಿದ ಮರ್ಕಝ್ UAE ನ್ಯಾಷನಲ್ ಸಮಿತಿ ಅಧ್ಯಕ್ಷರಾದ ಜಲೀಲ್ ನಿಝಾಮಿ  ಎಮ್ಮೆಮಾಡು ಧ್ವಜಾರೋಹಣ ನೆರವೇರಿಸಿದರು. ಮರ್ಕಝುಲ್ ಹಿದಾಯ ಪ್ರಧಾನ ವ್ಯವಸ್ಥಾಪಕರಾದ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ ಸಂದೇಶ ಭಾಷಣ ನಡೆಸಿದರು. ಸಂಸ್ಥೆಯ ಪ್ರಾಚಾರ್ಯರಾದ ಶಿಯಾಬುದ್ದೀನ್ ನೂರಾನಿ ಉಸ್ತಾದರು ಪ್ರಾರ್ಥನೆ ಸಲ್ಲಿಸಿದರು. 

ಕರ್ನಾಟಕ ಮುಸ್ಲಿಂ ಜಮಾಹತ್ ಕೊಡಗು ಜಿಲ್ಲಾ ಪ್ರ.ಕಾರ್ಯದರ್ಶಿಯೂ, ಮರ್ಕಝ್ ಪಬ್ಲಿಕ್ ಸ್ಕೂಲ್ ಮತ್ತು ಮಹಿಳಾ ಪಿ.ಯು ಕಾಲೇಜಿನ ಪ್ರ.ಕಾರ್ಯದರ್ಶಿಯೂ ಆದ  ಮುಹಮ್ಮದ್ ಹಾಜಿ ಕುಂಜಿಲ ಪ್ರಾಸ್ತಾವಿಕವಾಗಿ ಮಾತನಾಡಿನಾದರು. ಕಾರ್ಯಕ್ರಮದಲ್ಲಿ ಮರ್ಕಝ್ ಮದರಸ ಸದರ್ ಮುಅಲ್ಲಿಂ ಅಶ್ರಫ್ ಸಖಾಫಿ ಎಮ್ಮೆಮಾಡು,ಮರ್ಕಝ್ ಆಫೀಸ್ ಕಾರ್ಯದರ್ಶಿಗಳಾದ ಅಸ್ಕರ್ ಸಖಾಫಿ ಕೊಟ್ಟಮುಡಿ,ಅಬ್ದುಲ್ಲ ಕೊಳಕೇರಿ,ಮರ್ಕಝ್ ದಅವಾ ಕಾಲೇಜು ಪ್ರಾಧ್ಯಾಪಕರುಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




No comments

Post a Comment