ಬಹುಭಾಷಾ ಕವಿಗೋಷ್ಠಿಯಲ್ಲಿ ಮನಮುಟ್ಟಿದ ಪ್ರಕೃತಿ ವಿಕೋಪ, ಸಂತ್ರಸ್ತರ ನೋವಿನ ಕವನಗಳು 

No comments

ಮಡಿಕೇರಿ ಅ.04:-ಮಡಿಕೇರಿ ದಸರಾ ಸಮಿತಿ ಹಾಗೂ ದಸರಾ ಬಹುಭಾಷಾ ಕವಿಗೋಷ್ಠಿ ಸಮಿತಿ ವತಿಯಿಂದ ಬಹುಭಾಷಾ ಕವಿಗೋಷ್ಠಿಯು ನಗರದ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಶುಕ್ರವಾರ ನಡೆಯಿತು. 
ದಸರಾ ಆಚರಣೆ ಜನತೆಯ ಜನೋತ್ಸವವಾಗಿದ್ದು. ನಾಡಹಬ್ಬ ದಸರಾ ಸಂಭ್ರಮದಲ್ಲಿ ಎಲ್ಲರೂ ಪಾಲ್ಗೊಂಡು ಸಂಭ್ರಮಿಸಬೇಕು ಎಂದು ಬಹುಭಾಷಾ ಕವಿಗೋಷ್ಠಿಯಲ್ಲಿ ‘ಕವಿ ಮನದಿಂದ ಬಹುಭಾಷಾ ಕವನ’ ಸಂಕಲನವನ್ನು ಬಿಡುಗಡೆ ಮಾಡಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾತನಾಡಿದರು.   
ನಾಡಹಬ್ಬ ದಸರಾಕ್ಕೆ ಎಲ್ಲರೂ ಸಹಕಾರ ನೀಡಬೇಕು. ಕವಿಗಳಿಗೆ ಕವಿಗೋಷ್ಠಿ ವೇದಿಕೆಯು ಉತ್ತಮ ಅವಕಾಶ ಒದಗಿಸಿ ಕೊಟ್ಟಿದೆ. ಕವಿತೆಗಳು ಕೇವಲ ಪದವಲ್ಲ ಅಭಿವ್ಯಕ್ತಿ, ಜನರ ಇಂಗಿತ ವ್ಯಕ್ತಪಡಿಸುವ ಮಾಧ್ಯಮವಾಗಿದೆ ಎಂದು ಅವರು ಹೇಳಿದರು.      

ಕವಿಗೋಷ್ಠಿಯ ಮೂಲಕ ಕವಿಗಳ ಮನಸ್ಸಿನಲ್ಲಾದ ಅನುಭವವನ್ನು ಹಾಗೂ ಸಮಾಜದಲ್ಲಿ ಆಗುವ ಬದಲಾಣೆಯ ಕುರಿತು ಕವಿತೆಗಳ ಮೂಲಕ ವ್ಯಕ್ತ ಪಡಿಸುವಂತದಾಗಿದೆ. ಹಾಗೆಯೇ ದಸರಾ ಜನೋತ್ಸವ  ಕಾರ್ಯಕ್ರಮಗಳಿಗೆ ಜನರು ಹೆಚ್ಚಾಗಿ ಪಾಲ್ಗೊಂಡು ಸಂಭ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ನುಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ.ಅವರು ಮಾತನಾಡಿ ಸಾಹಿತ್ಯದ ಅನಾವರಣವು ಕವಿಗೋಷ್ಠಿಯ ಮೂಲಕ ಇಂದಿನ ವೇದಿಕೆಯಲ್ಲಿ ಅನಾವರಣಗೊಳ್ಳುತ್ತಿದ್ದು, ಯುವ ಪ್ರತಿಭೆಗಳಿಗೆ ಉತ್ತಮ ವೇದಿಕೆ ಒದಗಿಸಿಕೊಟ್ಟಿದೆ ಎಂದರು.  
 ಕವಿ ಮನದಿಂದ ಬಹುಭಾಷಾ ಕವನ ಸಂಕಲನ ಪುಸ್ತಕವು ಬಹುಭಾಷಾ ಕವಿತೆಗಳನ್ನು ಒಳಗೊಂಡ ಉತ್ತಮ ಕವನ ಸಂಕಲನವಾಗಿ ರೂಪುಗೊಂಡಿದೆ ಎಂದು ತಿಳಿಸಿದರು. ಎಸ್.ಕೆ.ಯುವತೇಜ ಅವರು ರಚಿಸಿದ ವಿದ್ಯೆ ಎಂಬ ನಂದನ ವನ ಕವಿತೆಯನ್ನು ವಾಚಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸ ಅವರು ತಮ್ಮ ಸ್ವರಚಿತ ಕವನ ‘ನಾ ಕಂಡ ಕೊಡಗಿನ ಸಿರಿ’ ವಾಚಿಸಿ ಮಾತನಾಡಿದ ಅವರು ಕೊಡಗು ಬೆಟ್ಟಸಾಲುಗಳ ನಡುವಿನ ಭೂಸ್ವರ್ಗ. ಇಲ್ಲಿನ ಜನರ ಜೀವನ ಶೈಲಿ, ಸಂಸ್ಕøತಿ, ವಿಭಿನ್ನತೆಯಿಂದ ಕೂಡಿದೆ ಎಂದು ಕೊಡಗಿನ ಪ್ರಕೃತಿ ಸೌಂದರ್ಯ ವರ್ಣಿಸಿದರು. 
ಮನುಷ್ಯರು ನಾನು ಎಂಬ ಅಹಂನಿಂದ ಹೊರಬರಬೇಕು. ಆಗ ಮಾತ್ರ ಜೀವನದಲ್ಲಿ ಸುಖ, ಶಾಂತಿ ದೊರೆಯುತ್ತದೆ. ಜೀವನದ ನೆಮ್ಮದಿಯು ಮನಸ್ಸಿನ ನೆಮ್ಮದಿಯ ಮೇಲೆ ಅವಲಂಬಿತವಾಗಿದೆ ಎಂದು ಕುರುಕ್ಷೇತ್ರ ಯುದ್ಧದ ಸಾರಾಂಶವನ್ನು ಪ್ರಸ್ತಾಪಿಸುತ್ತಾ ಪ್ರತಿಯೊಬ್ಬರೂ ಕೂಡ ಮನಸ್ಸಿನ ನೆಮ್ಮದಿಗೆ ಆದ್ಯತೆ ನೀಡಬೇಕೆಂದು ತಿಳಿಸಿದರು.
ಬಹುಭಾಷಾ ಕವಿಗೋಷ್ಠಿ ಸಮಿತಿಯ ಅಧ್ಯಕ್ಷರಾದ ಚಿ.ನಾ.ಸೋಮೇಶ್ ಅವರು ಮಾತನಾಡಿ ‘ರವಿ ಕಾಣದನ್ನು ಕವಿಕಂಡ’ ಎನ್ನುವ ಕವನ ವಾಚನವು ಕವಿಯ ಹೃದಯದಲ್ಲಿ ಆದ ಭಾವನೆಯನ್ನು ಕವನಗಳ ಮೂಲಕ ಹೊರಹೊಮ್ಮಿಸುವುದೆ ಕವಿಗೋಷಿ.್ಠ ಸಮಾಜದಲ್ಲಿನ ಅಂಕುಡೊಂಕುಗಳನ್ನು ಮನಗಂಡ ಕವಿಯು ತನ್ನ ಅನುಭವದ ವಿಚಾರಧಾರೆಗಳನ್ನು ಕವಿತೆಗಳ ಮೂಲಕ ತೋರ್ಪಡಿಸುತ್ತಾನೆ ಎಂದರು. 
      ಮಡಿಕೇರಿ ದಸರಾ ಸಮಿತಿಯ ಅಧ್ಯಕ್ಷರಾದ ರಾಬಿನ್ ದೇವಯ್ಯ ಅವರು ಮಾತನಾಡಿ ಸಂಕಷ್ಟಗಳು ಬಂದಾಗ ಎದೆಗುಂದಬಾರದು. ಸಂಕಷ್ಟಗಳನ್ನು ಎದುರಿಸಿ ಮೆಟ್ಟಿ ನಿಲ್ಲಬೇಕು ಎಂದು ತಿಳಿಸಿದರು. ಅತಿವೃಷ್ಟಿಯಿಂದ ತೊಂದರೆಗೊಳಗಾದ ತೋರದಂತಹ ಕುಗ್ರಾಮದ ಸಾಹಿತಿಯೊಬ್ಬರೂ ಬರೆದಿರುವ ಕವನದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಸಾಹಿತಿ ಜೆ.ಪಿ.ರಾಜರತ್ನಂ ಅವರ ಕವಿ ವೈಶಿಷ್ಯತೆಯ ಬಗ್ಗೆ ತಿಳಿಸಿದರು.
      ಕವಿಗೋಷ್ಠಿಗೆ ನಗರಸಭೆ ಸ್ವಚ್ಛತಾ ಸಿಬ್ಬಂದಿ ಓಬಳಿ ಮತ್ತು ತಂಡದವರಿಂದ ಚಾಲನೆ ದೊರೆಯಿತು. ಪತ್ರಕರ್ತರಾದ ಕೆ.ಎ.ಆದಿತ್ಯ ಅವರು ಸರ್ವರನ್ನು ಸ್ವಾಗತಿಸಿದರು. 
      ಜಿಲ್ಲೆಯಲ್ಲಿ 84 ಕವಿಗಳು ಗೋಷ್ಠಿಯಲ್ಲಿ ಪಾಲ್ಗೊಂಡು ಕನ್ನಡ, ಕೊಡವ, ಅರೆಭಾಷೆ, ತುಳು, ತೆಲುಗು, ಮರಾಠಿ, ಬ್ಯಾರಿ, ಹಿಂದಿ, ಹವ್ಯಕ, ಇಂಗ್ಲಿಷ್ ಭಾಷೆಗಳಲ್ಲಿ ಕವನ ವಾಚಿಸಿದರು. 
      ಕವನಗಳು ಕೊಡಗಿನ ಪ್ರಕೃತಿ ವಿಕೋಪ, ಸಂತ್ರಸ್ತರ ನೋವು ಸೇರಿದಂತೆ ಈ ನಾಡಿನ ಪರಂಪರೆ, ದೇಶದ ಸಂಸ್ಕøತಿ ಆಚಾರ-ವಿಚಾರಗಳನ್ನು ಪ್ರತಿಬಿಂಭಿಸಿದವು. ದಸರಾ ವೈಭವದ ಬಗ್ಗೆಯೂ ಹಲವರು ತಮ್ಮ ಕವನಗಳಲ್ಲಿ ಉಲ್ಲೇಖ ಮಾಡಿರುವುದು ವಿಶೇಷವಾಗಿತ್ತು.   
      ಕಾರ್ಯಕ್ರಮದಲ್ಲಿ ಹಿರಿಯ ತ್ರಿಭಾಷಾ ಸಾಹಿತಿ ಶೋಭಾ ಸುಬ್ಬಯ್ಯ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸವಿತಾ ರೈ, ಬಹುಭಾಷಾ ಕವಿಗೋಷ್ಠಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಕುಡೆಕಲ್ ಸಂತೋಷ್, ಜಿಲ್ಲಾ ಜಾನಪದ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಅನಂತಶಯನ, ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷರಾದ ಲೋಕೇಶ್ ಸಾಗರ್ ಇತರರು ಇದ್ದರು.

No comments

Post a Comment