ಕೊಡಗು ಜಿಲ್ಲೆಯಲ್ಲಿ ಶುಕ್ರವಾರ 62 ಮಂದಿಗೆ ಕೊರೋನಾ ಪಾಸಿಟಿವ್

No comments

       ಮಡಿಕೇರಿ (Times Of Coorg):-ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 8 ಗಂಟೆ ವೇಳೆಗೆ 37 ಮತ್ತು ಮಧ್ಯಾಹ್ನ 2 ಗಂಟೆ ವೇಳೆಗೆ 25 ಸೇರಿದಂತೆ 62 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

       ವಿರಾಜಪೇಟೆ ಪಾಲಂಗಳ ಗ್ರಾಮದ 29 ವರ್ಷದ ಮಹಿಳೆ ಮತ್ತು 30 ವರ್ಷದ ಪುರುಷ. ಸೋಮವಾರಪೇಟೆ ಅಭ್ಯತ್ ಮಂಗಲ ಗ್ರಾಮದ 42 ವರ್ಷದ ಪುರುಷ ಮತ್ತು 31 ವರ್ಷದ ಮಹಿಳೆ. ಗೋಣಿಕೊಪ್ಪ ಅಚ್ಚಪ್ಪ ಲೇಔಟ್ ನ 3ನೇ ಬ್ಲಾಕ್ ನ 38 ವರ್ಷದ ಮಹಿಳೆ ಮತ್ತು 43 ವರ್ಷದ ಪುರುಷ. ಕುಶಾಲನಗರ ಮುಳ್ಳುಸೋಗೆ ಕುವೆಂಪು ಬಡಾವಣೆಯ 73 ವರ್ಷದ ಮಹಿಳೆ. ಕುಶಾಲನಗರ ಸರ್ಕಾರಿ ಆಸ್ಪತ್ರೆ ಎದುರಿನ ಸೋಮೇಶ್ವರ ದೇವಾಲಯ ಸಮೀಪದ 75 ವರ್ಷದ ಪುರುಷ ಮತ್ತು 58 ವರ್ಷದ ಮಹಿಳೆ.      ಸೋಮವಾರಪೇಟೆ ಗೌಡಳ್ಳಿ ನಂದಿ ಗುಂಡಿಯ 62 ವರ್ಷದ ಪುರುಷ. ಸುಂಟಿಕೊಪ್ಪ ಬಿ.ಎಂ ರಸ್ತೆಯ ಕೆ.ಇ.ಬಿ ಸಮೀಪದ 44 ವರ್ಷದ ಪುರುಷ. ಮಡಿಕೇರಿ ತಾಳತ್ತಮನೆಯ ಕೂರ್ಗ್ ಐಸ್ ರೆಸಾರ್ಟ್ ಎದುರಿನ 55 ವರ್ಷದ ಪುರುಷ. ಮಡಿಕೇರಿ ಚೆಯ್ಯಂಡಾಣೆಯ ಚೆಕ್ಕಾವರ ಗ್ರಾಮದ 26 ವರ್ಷದ ಪುರುಷ. ಮಡಿಕೇರಿ ಚೇರಂಬಾಣೆ ಚೆಟ್ಟಿಮಾನಿ ದೇವಾಲಯ ಸಮೀಪದ 41 ವರ್ಷದ ಪುರುಷ. ಕುಶಾಲನಗರ ಬಿ.ಎಂ ರಸ್ತೆಯ ವೆಂಕಟೇಶ್ವರ ಸಿನಿಮಾ ಮಂದಿರ ಎದುರಿನ 83 ವರ್ಷದ ಮಹಿಳೆ. ಮಡಿಕೇರಿ ನಾಪೆÇೀಕ್ಲುವಿನ ಬೇತು ಮಕ್ಕಿ ದೇವಾಲಯ ಸಮೀಪದ 65 ವರ್ಷದ ಪುರುಷ. ಮಡಿಕೇರಿ ಸುಬ್ರಮಣ್ಯ ನಗರದ 58 ವರ್ಷದ ಪುರುಷ. ವಿರಾಜಪೇಟೆ ಶಿವಕೇರಿ ಕೊಡವ ಸಮಾಜ ಸಮೀಪದ 65 ವರ್ಷದ ಪುರುಷ. ವಿರಾಜಪೇಟೆ ಕಡಂಗ ಮರೂರು ಗ್ರಾಮ ಮತ್ತು ಅಂಚೆಯ 76 ವರ್ಷದ ಪುರುಷ. ವಿರಾಜಪೇಟೆ ಮೀನುಪೇಟೆಯ ಪೋಲೀಸ್ ವಸತಿಗೃಹದ 55 ವರ್ಷದ ಪುರುಷ. ಪಾಲಿಬೆಟ್ಟ ಶಾಸ್ತ್ರಿ ಹಳ್ಳಿಯ ಸರ್ಕಾರಿ ಆಸ್ಪತ್ರೆ ಸಮೀಪದ 58 ವರ್ಷದ ಮಹಿಳೆ.

       ವಿರಾಜಪೇಟೆ ಕಾಕೋಟುಪರಂಬು ಗ್ರಾಮ ಬಿಎಸ್‍ಎನ್‍ಎಲ್ ಟವರ್ ಸಮೀಪದ 42 ವರ್ಷದ ಪುರುಷ ಮತ್ತು 65 ವರ್ಷದ ಮಹಿಳೆ. ಸಿದ್ದಾಪುರ ಆರೆಂಜ್ ಕೌಂಟಿಯ 33 ವರ್ಷದ ಪುರುಷ. ಸೋಮವಾರಪೇಟೆ ನೆಲ್ಲಿಹುದಿಕೇರಿ ನಲವತ್ತೆಕ್ರೆಯ 30 ವರ್ಷದ ಮಹಿಳೆ. ವಿರಾಜಪೇಟೆ ಟಿ.ಶೆಟ್ಟೆಗೇರಿ ಹರಿಹರ ಗ್ರಾಮ ಮತ್ತು ಅಂಚೆಯ 35 ವರ್ಷದ ಪುರುಷ. ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಸೋಮವಾರಪೇಟೆ ಗೌಡಳ್ಳಿ ಯಡವನಪುರದ 31 ವರ್ಷದ ಮಹಿಳೆ. ನಾಪೆÇೀಕ್ಲು ಕೊಳಕೇರಿ ಗ್ರಾಮ ಮತ್ತು ಅಂಚೆಯ 10 ಹಾಗೂ 1 ವರ್ಷದ ಬಾಲಕಿಯರು. ಮಡಿಕೇರಿ ನಾಪೋಕ್ಲುವಿನ ಇಂದಿರಾನಗರದ 70 ವರ್ಷದ ಮಹಿಳೆ. ಸೋಮವಾರಪೇಟೆ ಅಭ್ಯತ್ ಮಂಗಲದ 03 ವರ್ಷದ ಬಾಲಕ. ಮಡಿಕೇರಿ ಜೂನಿಯರ್ ಕಾಲೇಜು ಮ್ಯಾನ್ಸ್ ಕಾಂಪೌಂಡ್ ಸಮೀಪದ 45 ವರ್ಷದ ಪುರುಷ. ಸೋಮವಾರಪೇಟೆ ಚೆಟ್ಟಳ್ಳಿಯ ಕೋಟೆಗೇರಿ ಎಸ್ಟೇಟ್ ನ 67 ವರ್ಷದ ಪುರುಷ. ಕುಶಾಲನಗರ ಕುವೆಂಪು ಬಡಾವಣೆಯ 17 ವರ್ಷದ ಬಾಲಕ. ಮೂರ್ನಾಡು ಗಾಂಧೀನಗರದ 60 ವರ್ಷದ ಪುರುಷ ಮತ್ತು 55 ವರ್ಷದ ಮಹಿಳೆ. ಕುಶಾಲನಗರ ಬಸವನಹಳ್ಳಿಯ 67 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.

       ಸುಂಟಿಕೊಪ್ಪ ಪಂಪ್ ಹೌಸ್ ಸಮೀಪದ 22 ವರ್ಷದ ಪುರುಷ. ಸೋಮವಾರಪೇಟೆ ಮಾಲಂಬಿ ಅಂಚೆಯ ಹೊಸಗುತ್ತಿ ಗ್ರಾಮದ 62 ವರ್ಷದ ಪುರುಷ. ಸೋಮವಾರಪೇಟೆ ಚೌಡ್ಲುವಿನ ಟೈರ್ ವರ್ಕ್ ಶಾಪ್ ಸಮೀಪದ 40 ವರ್ಷದ ಮಹಿಳೆ. ಸೋಮವಾರಪೇಟೆ ಅಡಿನದೂರುವಿನ 35 ವರ್ಷದ ಪುರುಷ. ಸೋಮವಾರಪೇಟೆ ತಣ್ಣೀರುಹಳ್ಳ ಸರ್ಕಾರಿ ಶಾಲೆ ಎದುರಿನ 53 ವರ್ಷದ ಮಹಿಳೆ.ಸೋಮವಾರಪೇಟೆ ಮಹದೇಶ್ವರ ಬ್ಲಾಕ್ ನ 53 ವರ್ಷದ ಮಹಿಳೆ.

      ಸೋಮವಾರಪೇಟೆ ನಂದಿಗುಂದದ 43 ವರ್ಷದ ಪುರುಷ. ವಿರಾಜಪೇಟೆ ಶಿವಕೇರಿಯ ಕೊಡವ ಸಮಾಜ ಸಮೀಪದ 59 ವರ್ಷದ ಮಹಿಳೆ. ವಿರಾಜಪೇಟೆ ಬಿಟ್ಟಂಗಾಲ ಅಂಬಟ್ಟಿ ಗ್ರಾಮದ ಡಿಎಂಪಿ ಶಾಲೆ ಬಳಿಯ 62 ವರ್ಷದ ಪುರುಷ. ವಿರಾಜಪೇಟೆ ಮೀನುಪೇಟೆಯ ಪೆÇಲೀಸ್ ವಸತಿಗೃಹದ 46 ವರ್ಷದ ಮಹಿಳೆ. ಸಿದ್ದಾಪುರ ವಾಲ್ನೂರು ಗ್ರಾಮದ ತ್ಯಾಗತ್ತೂರು ಕಾಲೋನಿಯ 21 ವರ್ಷದ ಮಹಿಳೆ. ಮೈಸೂರು ಪಿರಿಯಾಪಟ್ಟಣದ  26 ವರ್ಷದ ಪುರುಷ. ಪೆÇನ್ನಂಪೇಟೆ ಹಳ್ಳಿಗಟ್ಟು ಗಣಪತಿ ನಗರದ 28 ವರ್ಷದ ಮಹಿಳೆ.

       ಮಡಿಕೇರಿ ಮೆಡಿಕಲ್ ಕಾಲೇಜು ಭೋಧಕೇತರ ಸಿಬ್ಬಂದಿ ವಸತಿಗೃಹದ 24 ವರ್ಷದ ಪುರುಷ. ಮಡಿಕೇರಿ ಮೇಕೇರಿಯ 1ನೇ ಮೈಲಿನ 41 ವರ್ಷದ ಪುರುಷ. ಮಡಿಕೇರಿ ಹೊಟೇಲ್ ತಾಜ್ ನ 22 ವರ್ಷದ ಪುರುಷ. ಸೋಮವಾರಪೇಟೆ ಜಂಬೂರು ಮಾದಾಪುರದ 41 ವರ್ಷದ ಮಹಿಳೆ.

      ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಸೋಮವಾರಪೇಟೆ ರೇಂಜರ್ ಬ್ಲಾಕ್ ನ 26 ವರ್ಷದ ಮಹಿಳೆ. ಸೋಮವಾರಪೇಟೆ ಸುಂಟಿಕೊಪ್ಪ ನಾಕೂರು ಗ್ರಾಮದ 78 ವರ್ಷದ ಮಹಿಳೆ. ಸೋಮವಾರಪೇಟೆ ಚೆಟ್ಟಳ್ಳಿ ಗ್ರಾಮದ 44 ವರ್ಷದ ಪುರುಷ. ಸೋಮವಾರಪೇಟೆ ಮಾದಾಪುರ ಜಂಬೂರು ಗ್ರಾಮದ 63 ವರ್ಷದ ಪುರುಷ. ಮಡಿಕೇರಿ ಹೆಬ್ಬೆಟ್ಟಗೇರಿಯ ಕೆ.ನಿಡುಗಣೆಯ 40 ವರ್ಷದ ಮಹಿಳೆ. ಮಡಿಕೇರಿ ತಾಳತ್ತಮನೆಯ ಮಂಜುಶ್ರೀ ಹೋಂಸ್ಟೇ ಸಮೀಪದ 42 ವರ್ಷದ ಪುರುಷ. ಮಡಿಕೇರಿ ಸುದರ್ಶನ ಅತಿಥಿ ಗೃಹ ಎದುರಿನ 56 ವರ್ಷದ ಪುರುಷ. ಕೊಳಕೇರಿ ಗ್ರಾಮದ ಉಮಾಮಹೇಶ್ವರಿ ದೇವಾಲಯ ಸಮೀಪದ 25 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

      ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 2496 ಆಗಿದ್ದು, 2017 ಮಂದಿ ಗುಣಮುಖರಾಗಿದ್ದಾರೆ. 447 ಸಕ್ರಿಯ ಪ್ರಕರಣಗಳಿದ್ದು, 32 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 376 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

No comments

Post a Comment