ರಾಷ್ಟ್ರೀಯ ಸುದ್ದಿ (Times Of Coorg) :ಪ್ರಖ್ಯಾತ ಮೊಬೈಲ್ ಪ್ಲೇಯರ್ ಗೇಮ್ ಆದ ಪಬ್ಜಿ ಗೇಮ್ ಸೇರಿದಂತೆ 118ಕ್ಕೂ ಅಧಿಕ ಅಪ್ಲೀಕೇಶನ್ ಗಳನ್ನು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಇಂದು ಬುಧವಾರ ನಿಷೇಧಿಸಿದೆ.
ಚೀನಾ-ಭಾರತ ನಡುವಿನ ಉದ್ವಿಗ್ನ ಪರಿಸ್ಥಿತಿಯ ಬೆನ್ನಲ್ಲೆ ಕೇಂದ್ರ ಸರಕಾರ ಈ ಕ್ರಮ ಕೈಗೊಂಡಿದೆ. ಮೊದಲು ಟಿಕ್ ಟಾಕ್ ಸಹಿತ 50ರಷ್ಟು ಅಪ್ಲಿಕೇಶನ್ ಗಳನ್ನು ನಿಷೇಧಿಸಿತ್ತು. ಜನಪ್ರಿಯ ಮೊಬೈಲ್ ಗೇಮ್ ಪಬ್ಜಿಯು ಒಂದು ತಿಂಗಳ ಹಿಂದಷ್ಟೇ ನಿಷೇಧದ ಬಿಸಿಯಿಂದ ತನ್ನ ಭಾರತದ ಆಟಗಾರರಿಗೆ ಸರ್ವರ್ ಬದಲಾವಣೆ ಮೂಲಕ ನಿಷೇಧದಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿತ್ತು.

No comments
Post a Comment