ನೆಲ್ಲಿಹುದಿಕೇರಿ ಪಿಡಿಒ ಭ್ರಷ್ಟಾಚಾರ ಆರೋಪ : ಅಮಾನತ್ತಿನಲ್ಲಿಟ್ಟು ತನಿಖೆಗೆ ಸಿಪಿಐಎಂ ಒತ್ತಾಯ

No comments

ಮಡಿಕೇರಿ (Times Of Coorg) : ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ನೆಲ್ಯಹುದಿಕೇರಿ ಪಿಡಿಒ ಅನಿಲ್‍ಕುಮಾರ್ ಅವರನ್ನು ಅಮಾನತ್ತಿನಲ್ಲಿಟ್ಟು ತನಿಖೆ ಮಾಡ ಬೇಕೆಂದು ಸಿಪಿಐಎಂ ಪಕ್ಷದ ನೆಲ್ಯಹುದಿಕೇರಿ ಶಾಖೆಯ ಪ್ರಮುಖ ಪಿ.ಆರ್ ಭಾರತ್  ಒತ್ತಾಯಿಸಿದ್ದಾರೆ.
ನೆಲ್ಲಿಹುದಿಕೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ತನ್ನ ಅಕ್ರಮಗಳನ್ನು  ಮರೆ ಮಾಚುವ ಸಲುವಾಗಿ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಚೆಕ್ ಕಾಣೆಯಾಗಿರುವುದಾಗಿ ಪಿಡಿಒ ಅನಿಲ್ ಕುಮಾರ್, ಗ್ರಾಪಂ ಸಿಬ್ಬಂದಿ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಗ್ರಾಪಂ ಖಾತೆಯಿಂದ 50ಸಾವಿರ ರೂ.ಗಳ ಚೆಕ್ ಒಂದನ್ನು ಸೆಲ್ಫ್ ಡ್ರಾ ಮಾಡಿರುವ ಪಿಡಿಒ ತನಗೆ ಇಷ್ಟ ಬಂದಂತೆ ಹಣ ದುರುಪಯೋಗ ಮಾಡುತ್ತಿದ್ದಾರೆ. ಇವರಿಗೆ ಕೆಲವು ಮಾಜಿ ಸದಸ್ಯರ ಬೆಂಬಲ ಕೂಡಾ ಇದೆ. ಹಾಗಾಗಿ ಅವರ ವಿರುದ್ಧವೂ ಸಮರ್ಪಕ ತನಿಖೆ ಆಗ ಬೇಕೆಂದು ಒತ್ತಾಯಿಸಿದರು. ಗ್ರಾಪಂ ಕಚೇರಿ ಒಳಗೆ ಕಾಂಗ್ರೆಸ್, ಎಸ್‍ಡಿಪಿಐ ಮತ್ತು ಬಿಜೆಪಿ ಸದಸ್ಯರು ಅತ್ಯಂತ ಸೌಹಾರ್ಧ ರೀತಿಯಲ್ಲಿದ್ದು, ತಮ್ಮ ಪಕ್ಷದ ಸಿದ್ಧಾಂತ  ಮರೆತು ಅಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಆರೋಪಿಸಿದರು.  ಅಧ್ಯಕ್ಷರ ಅಧಿಕಾರ ಅವಧಿ ಮುಗಿದಿದ್ದರೂ ಅವರನ್ನು ಕಚೇರಿಗೆ ಕರೆಸಿ 3.5ಲಕ್ಷ ರೂ. ಗಳ ಚೆಕ್‍ಗಳಿಗೆ ಸಹಿ ಮಾಡಿಸಿ ಕೊಂಡಿದ್ದಾರೆ. ಮಡಿಕೇರಿ ಕ್ಷೇತ್ರದ ಶಾಸಕರ ಬೆಂಬಲ ಇದೆ ಎಂದು ಹೇಳಿ ಕೊಂಡು ಅಧಿಕಾರ ಚಲಾಯಿಸುತ್ತಿರುವ ಪಿಡಿಒ ನೆಲ್ಯಹುದಿಕೇರಿಯ ಯುವಕ ಸಂಘದೊಂದಿಗೆ ಸೇರಿ ನರೇಗಾ ಯೋಜನೆಯಡಿ ಕೆರೆ ಹೂಳೆತ್ತುವ ವಿಚಾರದಲ್ಲಿಯೂ ಅಕ್ರಮ ಎಸಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಗ್ರಾಪಂಗೆ ಸಿಬ್ಬಂದಿ ನೇಮಕ ಮಾಡ ಬೇಕಾದರೆ ಅನುಸರಿಸ ಬೇಕಾದ ನಿಯಮಗಳನ್ನು ಗಾಳಿಗೆ ತೂರಿ ತನ್ನ ತಾಳಕ್ಕೆ ತಕ್ಕಂತೆ ಕುಣಿಯುವ ಒಬ್ಬರನ್ನು ಇಲ್ಲದ ಹುದ್ದೆ ಸೃಷ್ಠಿ ಮಾಡಿ ಹತ್ತು ಸಾವಿರ ರೂ. ವೇತನ ನೀಡುತ್ತಿದ್ದಾರೆ. ತಾನು ಮಾಡುತ್ತಿರುವ ಅಕ್ರಮಗಳನ್ನು ಸಾರ್ವಜನಿಕರಿಗೆ ತಿಳಿಯ ಬಾರದೆಂಬ ಉದ್ದೇಶದಿಂದ ಕೆಲವು ಸದಸ್ಯರನ್ನು ತನ್ನ ಪರವಾಗಿ ವಕಾಲತ್ತು ವಹಿಸುವಂತೆ ಇಟ್ಟು ಕೊಂಡಿದ್ದಾರೆಂದು ಆರೋಪಿಸಿದರು. ಬರಡಿ ಅತ್ತಿಮಂಗಲ ರಸ್ತೆ ವಿಚಾರವಾಗಿ ನ್ಯಾಯಾಲಯಕ್ಕೆ ಯಾವುದೇ ದಾಖಲೆ ಒದಗಿಸದೆ ರಸ್ತೆ ಖಾಸಗಿ ವ್ಯಕ್ತಿ ಪಾಲಾಗಿದೆ. ಈ ಪ್ರಕರಣದಲ್ಲಿ ಖಾಸಗಿ ವ್ಯಕ್ತಿಯೊಂದಿಗೆ ಪಿಡಿಒ ಶಾಮೀಲಾಗಿರುವ ಶಂಕೆ ಇದ್ದು, ಅದನ್ನೂ ತನಿಖೆಗೆ ಒಳಪಡಿಸ ಬೇಕೆಂದು ಒತ್ತಾಯಿಸಿದರು. ಈ ಎಲ್ಲಾ ಅಕ್ರಮಗಳನ್ನು ಗ್ರಾಮಸ್ಥರಿಗೆ ತಿಳಿಸುವ ಸಲುವಾಗಿ ಮನೆಮನೆಗೆ ತಮಟೆ ಭಾರಿಸುವ ಮೂಲಕ ತೆರಳಿ ಪಕ್ಷ ವಿನೂತನ ಅಭಿಯಾನ ಹಮ್ಮಿ ಕೊಳ್ಳುವುದಾಗಿ ತಿಳಿಸಿದರು. ಗೋಷ್ಠಿಯಲ್ಲಿ ಪಕ್ಷದ ಮುಖಂಡ ಜೋಸ್ ಇದ್ದರು.

ಚಿತ್ರ ಇದೆ

No comments

Post a Comment