ಸಂತ್ರಸ್ತರಿಗೆ ಶಾಶ್ವತ ಸೂರು ಒದಗಿಸಲು ಒತ್ತಾಯ :ಎಚ್ ಎಂಸೋಮಪ್ಪ . ಕರಡಿಗೋಡು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ

No comments

ವರದಿ : ಎಂ.ಆರ್ ಸಲೀಂ ಸಿದ್ದಾಪುರ 
ಸಿದ್ದಾಪುರ (Times Of Coorg) : ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಕಾವೇರಿ ನದಿ ಪ್ರವಾಹದಿಂದ ಮನೆ ಆಸ್ತಿಪಾಸ್ತಿ ಕಳೆದುಕೊಂಡು ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಶಾಶ್ವತ ಸೂರು ಕಲ್ಪಿಸಲು ಎಐಟಿಯುಸಿ ಜಿಲ್ಲಾ ಅಧ್ಯಕ್ಷ  ಎಚ್. ಎಂ ಸೋಮಪ್ಪ ಒತ್ತಾಯಿಸಿದ್ದಾರೆ.

 ಸಿಪಿಐ ಹಾಗೂ ಎಐಟಿಯುಸಿ ಸಂಘಟನೆಯ ಪದಾಧಿಕಾರಿಗಳೊಂದಿಗೆ ಕರಡಿಗೋಡು ಪ್ರವಾಹ ಪೀಡಿತ ಕರಡಿಗೋಡು ಸಂತ್ರಸ್ತರ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದ ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಸೋಮಪ್ಪ
ಕೊಡಗು ಜಿಲ್ಲೆಯಲ್ಲಿ ಬಹುತೇಕ ಕಾರ್ಮಿಕ ಕುಟುಂಬಗಳೇ ಅಧಿಕವಾಗಿದ್ದು ಸಂಕಷ್ಟದ ಜೀವನ ನಡೆಸುತ್ತಿದ್ದಾರೆ.
ಕಳೆದ ವರ್ಷದ ಮಳೆ ಸಂದರ್ಭದಲ್ಲೂ ನದಿನೀರಿನ ಪ್ರವಾಹದಿಂದ ಸಾವಿರಾರು ಮನೆಗಳು ಹಾನಿಯಾಗಿ ಇಂದಿಗೂ ಯಾವುದೇ ಪರಿಹಾರಗಳು ಸಿಗದೆ ಸಂಕಷ್ಟದ ಜೀವನ  ನಡೆಸುತ್ತಿದ್ದು.  ಇದೀಗ ಮತ್ತೆ ಮಳೆಯ ಪ್ರವಾಹದಿಂದ ನೂರಾರು ಮನೆಗಳು ಹಾನಿಯಾಗಿದೆ.

ಕಾಟಾಚಾರಕ್ಕೆ ಪರಿಹಾರ ಕೇಂದ್ರವನ್ನು ತೆರೆಯುವ ಜಿಲ್ಲಾಡಳಿತ ಶಾಶ್ವತ ಸೂರು ಒದಗಿಸುವಲ್ಲಿ ಅಧಿಕಾರಿ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
  ಕಳೆದ ಪ್ರವಾಹ ಸಂದರ್ಭದಲ್ಲಿ ಮನೆ ಕಳೆದುಕೊಂಡವರಿಗೆ ಪರಿಹಾರ ನೀಡುವ ಭರವಸೆ ನೀಡಿದ ಸರಕಾರ ನುಡಿದಂತೆ ನಡೆದುಕೊಳ್ಳದೇ ಸಂತ್ರಸ್ತರನ್ನು ಕಡೆಗಣಿಸಿದ್ದಾರೆ .


ಕರೋನಾ ಮಹಾಮಾರಿ ವೈರಸ್ ನಿಂದ ಲಾಕ್  ಡೌನ್, ಸೀಲ್ ಡೌನ್ ಸಂದರ್ಭದಲ್ಲೂ ಕೂಲಿ ಕೆಲಸವೂ ಇಲ್ಲದೆ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸರ್ಕಾರ ಯಾವುದೇ ಯೋಜನೆಗಳನ್ನು ಘೋಷಿಸದೆ ಕಾರ್ಮಿಕ ವರ್ಗವನ್ನು ಕಡೆಗಣಿಸಿದ್ದು.ನದಿ ದಡ ಸಂತ್ರಸ್ತರಿಗೆ ಶಾಶ್ವತ ಸೂರು ಒದಗಿಸದಿದ್ದಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
 ಸಿಪಿಐ ಪಕ್ಷದ ಸದಸ್ಯ ಕರಡಿಗೋಡು ಕೃಷ್ಣ ಮಾತನಾಡಿ ಕಳೆದ ಹಲವು ವರ್ಷಗಳಿಂದಲೂ ನದಿ ದಡದಲ್ಲಿ ವಾಸವಾಗಿರುವ ಕುಟುಂಬಗಳಿಗೆ ಇಂದಿಗೂ ಶಾಶ್ವತ ಸೂರು ಕಲ್ಪಿಸಲು ಅಧಿಕಾರಿ ಹಾಗೂ ಜನಪ್ರತಿನಿಧಿಗಳು ಮುಂದಾಗುತ್ತಿಲ್ಲ .
ಈ ಭಾಗದಲ್ಲಿ ಗೆದ್ದ ಜನಪ್ರತಿನಿಧಿಗಳು ಸಂತ್ರಸ್ತರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. 
ಪ್ರವಾಸ ಸಂದರ್ಭದಲ್ಲಿ ಹಲವಾರು ಮನೆಗಳು ನೆಲಸಮವಾಗಿದ್ದು.
ಬಹುತೇಕ ಮನೆಗಳು ಹಾನಿಯಾಗಿದೆ.ಕೆಲವು ಮಂದಿ 
 ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಪರಿಹಾರ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದರು .
ಈ ಸಂದರ್ಭ ಸಂಘಟನೆ  ಪ್ರಮುಖರಾದ ಹರಿಶ್ಚಂದ್ರ, ರಮಣಿ, ಸೆಲ್ವಿ, ಅರುಣ ಸೇರಿದಂತೆ  ಮತ್ತಿತರರು ಇದ್ದರು.


No comments

Post a Comment