ಸಿದ್ದಾಪುರ ಕೊಡಗು ಜಿಲ್ಲೆಯಲ್ಲಿ ಸುರಿದ ಭಾರಿ ಮಳೆ ಹಿನ್ನೆಲೆ ಕಾವೇರಿ ನದಿ ಪ್ರವಾಹ ಉಕ್ಕಿ ಹರಿದು ಕರಡಿಗೋಡು ಸೇರಿದಂತೆ ಇತರ ನದಿ ದಡ ಗ್ರಾಮಗಳು ಮನೆಗಳು ಸಂಪೂರ್ಣ ಹಾನಿಯಾಗಿದ್ದು ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಶಾಶ್ವತ ಸೂರು ಕಲ್ಪಿಸಬೇಕೆಂದು ಸಿಪಿಐ, ವೆಲ್ಫೇರ್ ಪಾರ್ಟಿ ಆಫ್ ಪಾರ್ಟಿ ಸೇರಿದಂತೆ ಇತರ ಕಾರ್ಮಿಕ ಸಂಘಟನೆಗಳು ಸರಕಾರವನ್ನು ಒತ್ತಾಯಿಸಿದ್ದಾರೆ.
ಕರಡಿಗೋಡು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಿಪಿಐನ ಜಿಲ್ಲಾ ಕಾರ್ಯದರ್ಶಿ ಕೆ.ವಿ ಸುನಿಲ್. ಕಳೆದ ಹಲವು ವರ್ಷಗಳಿಂದಲೂ ನದಿ ದಡದಲ್ಲಿ ವಾಸವಾಗಿರುವ ಕುಟುಂಬಗಳ ಮನೆಗಳು ಹಾನಿಯಾಗಿದ್ದು ನದಿ ನೀರಿನ ಪ್ರವಾಹ ಆಗಸ್ಟ್ 6ರ ಪ್ರವಾಹ ಪ್ರದೇಶಕ್ಕೆ ಭಾರತ ಕಮ್ಯುನಿಸ್ಟ್ ಪಕ್ಷ ,ವೆಲ್ಫರ್ ಪಾರ್ಟಿಹಾಗೂ ಎಐಟಿಯುಸಿ,ಎ ಐ ವೈ ಎಫ್ ಸಂಘಟನೆಯ ಸದಸ್ಯರು ಭೇಟಿನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು . ಈ ಪ್ರದೇಶದ ನಿರಾಶ್ರಿತರ ಸಮಸ್ಯೆಯನ್ನು ಹಾಲಿಸಿದ ಪಕ್ಷದ ಪ್ರಮುಖರು ಅವರಿಗೆ ಧೈರ್ಯತುಂಬಿ ಕೂಡಲೇ ಹೋರಾಟಕ್ಕೆ ಸಜ್ಜಾಗುವಂತೆ ಕರೆನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಐನ ಜಿಲ್ಲಾ ಕಾರ್ಯದರ್ಶಿ ಕೆ.ವಿ ಸುನಿಲ್ಪ್ರವಾಹ ಸಂಭವಿಸಿ ಒಂದು ಕಳೆದರು ಶಾಸಕರಾಗಲಿ ,ಸಂಸದರಾಗಲಿ,ತಾಲೋಕು ಪಂಚಾಯಿತಿ, ಜಿಲ್ಲಾ ಪಂಚಾಯತ್ ಸದಸ್ಯರಾಗಲಿ,ಜಿಲ್ಲಾಧಿಕಾರಿ ಯಾಗಲಿ ಭೇಟಿ ನೀಡದೆ ಕಡೆಗಣಿಸಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು .ವೆಲ್ಫರ್ ಪಾರ್ಟಿ ಜಿಲ್ಲಾಧ್ಯಕ್ಷ ಕೆ.ಟಿ ಬಶೀರ್ ಮಾತನಾಡಿ ಬಹುತೇಕ ಬಡ ಕೂಲಿ ಕಾರ್ಮಿಕರೆ ವಾಸವಾಗಿರುವ ಈ ಭಾಗದಲ್ಲಿ ಅವರ ನೋವಿಗೆ ಸ್ಪಂದಿಸದೆ ಅಧಿಕಾರಿಗಳು-ಜನಪ್ರತಿನಿಧಿಗಳು ಕಡೆಗಣಿಸಿರುವುದು ಕಂಡನೀಯ ಎಂದರು.ಸಂತ್ರಸ್ತರುಗ ಕಳೆದ ವರ್ಷದ ಪ್ರವಾಹದಲ್ಲಿ ಮನೆ ಕಳೆದುಕೊಂಡಿದ್ದು ಬಾಡಿಗೆ ಹಣನೀಡದೆ ವಂಚನೆ ಮಾಡಿರುವುದಾಗಿ ಈ ಸಂದರ್ಭದಲ್ಲಿ ತಮ್ಮ ನೋವನ್ನು ಹೇಳಿಕೊಂಡರುಎಐಟಿಯುಸಿ ಜಿಲ್ಲಾಧ್ಯಕ್ಷರಾದ ಹೆಚ್.ಎಂ ಸೋಮಪ್ಪನವರು ಈ ಸಂದರ್ಭದಲ್ಲಿ ಕೂಡಲೆ ಸಂತ್ರಸ್ಥರ ಬಾಡಿಗೆ ಹಣ ಹಾಗೂ ಪರಿಹಾರ ನೀಡಬೇಕು ಒತ್ತಾಯಿಸಿದರು. ಎಐವೈಎಫ್ ರಾಜ್ಯ ಸಮೀತಿ ಸದಸ್ಯರಾದ ರಫೀಕ್ ದಲಿತ ಸಂಘರ್ಷ ಸಮಿತಿಯ ರಜನಿಕಾಂತ್. ಸಿಪಿಐ ಕರಡಿಗೊಡು ಬ್ರಾಂಚ್ ಕಾರ್ಯದರ್ಶಿ ಕೃಷ್ಣ. ಸಿಪಿಐ ಸುಂಟಿಕೊಪ್ಪ ಕಾರ್ಯದರ್ಶಿ ರಮಣಿ ಹಾಗೂ ಪಕ್ಷದ ಸದಸ್ಯರಾದ ಅರುಣ ,ಮುರುಗನ್, ಆರೋಗ್ಯಮ್ಮ, ಧನಲಕ್ಷ್ಮಿ ಹಾಜರಿದ್ದರು.
No comments
Post a Comment