ಜನರಿಲ್ಲದೆ ಬಿಕೋ ಎನ್ನುತ್ತಿದ್ದ ನಾಪೋಕ್ಲು ಸಂತೆ

No comments

ವರದಿ : ಹಾರಿಸ್ ನಾಪೋಕ್ಲು
       ನಾಪೋಕ್ಲು (Times Of Coorg) : ಕೊರೋನಾ ಮಹಾಮಾರಿ ನಾಪೋಕ್ಲು ವ್ಯಾಪ್ತಿಯಲ್ಲಿ ವರದಿಯಾದ ಹಿನ್ನೆಲೆ ವಾರದ ಸಂತೆ ಯಾದ ಈ ದಿನ ನಾಪೋಕ್ಲುವಿನ ಸಂತೆ ಮಾರುಕಟ್ಟೆಯಲ್ಲಿ ಜನರಿಲ್ಲದೆ ಸ್ತಬ್ದವಾಗಿತ್ತು.

ಪ್ರತಿ ಸೋಮವಾರ ನಾಪೋಕ್ಲು ಮಾರುಕಟ್ಟೆ ಪ್ರದೇಶದಲ್ಲಿ ಸ್ಥಳೀಯ ವರ್ತಕರು ಹೊರಗಿನಿಂದ ಹೆಚ್ಚಾಗಿ ಬರುವ ವರ್ತಕರು ಮತ್ತು ನಾಪೋಕ್ಲು ವ್ಯಾಪ್ತಿಯ ಸುಮಾರು 30 ಗ್ರಾಮಗಳ ಗ್ರಾಹಕರು ಸೇರಿದಂತೆ ಜನಜಂಗುಳಿಯೇ ಇರುತ್ತಿತ್ತು.ಆದರೆ 4 ವಾರಗಳ ನಿಷೇಧದ ನಂತರ ಪ್ರಾರಂಭವಾದ ಈ ದಿನದ ನಾಪೋಕ್ಲು ಸಂತೆಗೆ ಜನರು ಬಹಳ ವಿರಳವಾಗಿ ಕಂಡುಬಂತು ವರ್ತಕರು ಸಹ ಪ್ರತಿ ವಾರದಷ್ಟು ಕಾಣಿಸಲಿಲ್ಲ.

ಮತ್ತೊಂದು ಕಡೆಯಲ್ಲಿ ಪಂಚಾಯಿತಿ ವತಿಯಿಂದ ಧ್ವನಿವರ್ಧಕದ ಮೂಲಕ ಪಟ್ಟಣದಾದ್ಯಂತ ಜನರ ಗುಂಪು ಸೇರದಂತೆ ಸರಕಾರದ ನಿಯಮ ಪಾಲಿಸುವಂತೆ ಎಚ್ಚರಿಕೆ ಕೂಡ ನೀಡುತ್ತಿತ್ತು ,ಹಾಗೂ  ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಮಾರ್ಗದರ್ಶನದಲ್ಲಿ ಕೊರೋನಾ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರು ಸಂತೆಗೆ ಬರುವ ಸಾರ್ವಜನಿಕರಲ್ಲಿ ಸಾಮಾಜಿಕ ಅಂತರ ಕಾಪಾಡುವಂತೆ  ಕಡ್ಡಾಯ ಮಾಸ್ಕ್ ಧರಿಸುವಂತೆಯು ನೋಡಿಕೊಂಡು ಕಟ್ಟುನಿಟ್ಟಿನ ಕ್ರಮ ಕೈಗೊಂಡರು.

ಏನೇ ಆದರೂ ಕೋರೋನಾ ಮಾರಿಯ ಭಯದಿಂದಲೋ ಮುನ್ನೆಚ್ಚರಿಕೆಯಿಂದಲೋ ಜನಜಂಗುಳಿ ಸೇರದಿರುವುದು
ಉತ್ತಮ ಬೆಳವಣಿಗೆ.



No comments

Post a Comment