ಭಾರಿ ಗಾಳಿ-ಮಳೆಗೆ ನೆಲ ಕಚ್ಚಿದ ಅಮ್ಮತ್ತಿ ಗುಡ್‌ಶೆಫರ್ಡ್ ಶಾಲೆಯ ತಡೆಗೋಡೆ

No comments

ಅಮ್ಮತ್ತಿ (Times Of Coorg) :- ಕಳೆದೆರಡು ದಿನಗಳಿಂದ ಅಬ್ಬರಿಸುತ್ತಿರುವ ಭಾರಿ ಗಾಳಿ-ಮಳೆಯಿಂದಾಗಿ ಅಮ್ಮತ್ತಿಯ ಪ್ರತಿಷ್ಠಿತ ವಿದ್ಯಾಸಂಸ್ಥೆ ಗುಡ್‌ಶೆಫೆರ್ಡ್ ಪದವಿ ಪೂರ್ವ ಕಾಲೇಜಿನ ತಡೆಗೋಡೆ ಕುಸಿದು ನೆಲಕಚ್ಚಿದ ಘಟನೆ ನಿನ್ನೆ ರಾತ್ರಿ ಜರುಗಿದೆ. ದಿನ ಹತ್ತಾರು ಜನ ಓಡಾಡುವ
ಕಾರ್ಮಾಡು ಗ್ರಾಮದ ರಸ್ತೆ ಬದಿಯಲ್ಲಿರುವ ಈ ತಡೆಗೋಡೆಯು ರಾತ್ರಿ ಸಮಯದಲ್ಲಿ ಕುಸಿದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.



> ಭಾರಿ ಗಾಳಿ-ಮಳೆಗೆ ರಸ್ತೆಗುರುಳಿದ ಮರ - ಕೆಲ ಕಾಲ ಸಂಚಾರ ಸ್ಥಗಿತ

 ಅಮ್ಮತ್ತಿ ಸಿದ್ದಾಪುರ ರಸ್ತೆಯಲ್ಲಿ ಆ‌ನಂದಪುರದ ಸಮೀಪ ರಸ್ತೆ ಬದಿಯಲ್ಲಿದ್ದ ಮರವೊಂದು ರಸ್ತೆಗುರುಳಿದರಿಂದ ಕೆಲಕಾಲ ಸಂಚಾರ ಸ್ಥಗಿತಗೊಂಡಿತು.
ಶೀಘ್ರವಾಗಿ ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಲಾಯಿತು.

No comments

Post a Comment