ಸಿದ್ದಾಪುರ (TOC ನ್ಯೂಸ್) : ಆಟೋ ,ಬೈಕ್, ಹಾಗೂ ವಾಹನ ಸವಾರರು ಕಾನೂನು ಪಾಲನೆ ಮಾಡದಿದ್ದಲ್ಲಿ ಕ್ರಮ ಕೈಗೊಳ್ಳುವುದಾಗಿ ಸಿದ್ದಾಪುರ ಠಾಣಾಧಿಕಾರಿ ದಯಾನಂದ್ ಖಡಕ್ ಎಚ್ಚರಿಕೆ ನೀಡಿದ್ದಾರೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಟೊ ಹಾಗೂ ವಾಹನ ಚಾಲಕರಿಗೆ ಕಾನೂನು ಅರಿವು ಹಾಗೂ ನಿಯಮ ಪಾಲನೆಯ ಬಗ್ಗೆ ಮಾಹಿತಿ ನೀಡಿ ಮಾತನಾಡಿದ ಅವರು ಪ್ರತಿಯೊಬ್ಬರು ನಿಯಮಗಳನ್ನು ಪಾಲನೆ ಮಾಡಿ ಸುರಕ್ಷಿತ ಚಾಲನೆ ಹಾಗೂ ಮುಂಜಾಗ್ರತಾ ಕ್ರಮ ವಹಿಸಬೇಕೆಂದು ಹೇಳಿದ ಅವರು ವಾಹನ ಸವಾರರು ಡ್ರೈವಿಂಗ್ ಲೈಸನ್ಸ್, ಇನ್ಸೂರೆನ್ಸ್ ,ಹೆಲ್ಮೆಟ್,ಸೀಟ್ ಬೆಲ್ಟ್ ಸೇರಿದಂತೆ ಅಗತ್ಯ ದಾಖಲಾತಿಗಳನ್ನು ಇಟ್ಟುಕೊಂಡು ಸುರಕ್ಷಿತ ಚಾಲನೆಯೊಂದಿಗೆ ನಿಯಮ ಪಾಲನೆ ಮಾಡಬೇಕೆಂದು ಹೇಳಿದರು ಸಭೆಯಲ್ಲಿ ಜೀಪು, ಆಟೋ ಹಾಗೂ ವಾಹನ ಸವಾರರು ಹಾಜರಿದ್ದರು.
ಸಿದ್ದಾಪುರ ಪಟ್ಟಣದಲ್ಲಿ ಠಾಣಾಧಿಕಾರಿ ದಯಾನಂದ್ ಹಾಗೂ ಪೊಲೀಸರು ಕೆಲ ಗಂಟೆಗಳ ಕಾಲ ಸಾವಿರಾರು ವಾಹನಗಳನ್ನು ತಪಾಸಣೆ ಮಾಡಿ ನಿಯಮ ಉಲ್ಲಂಘಿಸಿದ ಸವಾರರಿಂದ ದಂಡ ವಸೂಲಿ ಮಾಡಿದರು ದಿಢೀರ್ ಕಾರ್ಯಾಚರಣೆಗಿಳಿದ ಪೊಲೀಸರ ಕ್ರಮದಿಂದ ಹಲವರು ತಪ್ಪಿಸಿಕೊಳ್ಳಲು ಯತ್ನಿಸಿದರೆ. ಸಿಕ್ಕಿ ಹಾಕಿಕೊಂಡ ಕೆಲವರು ಜನಪ್ರತಿನಿಧಿಗಳಿಗೆ ಫೋನ್ ಕರೆ ಮಾಡುತ್ತಿದ್ದರು ಇದ್ಯಾವುದನ್ನು ಲೆಕ್ಕಿಸದೆ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸಿ ಖಡಕ್ ಎಚ್ಚರಿಕೆ ನೀಡಿದರು


No comments
Post a Comment