ರಸ್ತೆ ಗುಂಡಿಯ ಮುಚ್ಚಿದ ಕೊಳಕೇರಿ ಯುವಕರು
ವರದಿ : ಹಾರಿಸ್ ನಾಪೋಕ್ಲು
ನಾಪೋಕ್ಲು (Times Of Coorg) : ನಾಪೋಕ್ಲುವಿನಿಂದ ಕೊಳಕೇರಿ ಮಾರ್ಗವಾಗಿ ವಿರಾಜಪೇಟೆಗೆ ಹೋಗುವ ಕೋಟೇರಿ ಎಂಬಲ್ಲಿ ಮುಖ್ಯ ರಸ್ತೆ ಹಲವು ತಿಂಗಳುಗಳಿಂದ ತೀರಾ ಹದಗೆಟ್ಟು ವಾಹನ ಸಂಚಾರ ತುಂಬಾ ಕಷ್ಟ ವಾಗಿತ್ತು.
ಇವತ್ತು ಭಾನುವಾರ ಲಾಕ್ ಡೌನ್ ಇದ್ದಕಾರಣ ಕೊಳಕೇರಿಯ ಬ್ಲೂ ಬಾಯ್ಸ್ ತಂಡದ ಸಂಶುದ್ದೀನ್ ಮುಂದಾಳತ್ವದಲ್ಲಿ ಸದಸ್ಯರು ಗಳಾದ ಅಶ್ರಫ್ ಕೆ. ವೈ ಝುಬೈರ್, ಸಿರಾಜ್, ಸೈಫುದ್ದೀನ್, ಅಬ್ದುಲ್ ರಹೀಮ್, ಸಾದಿಕ್, ಫಾರೂಕ್, ಸೇರಿ ರಸ್ತೆಯ ಗುಂಡಿಗಳನ್ನು ಮುಚ್ಚಿ ವಾಹನಗಳಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು.

No comments
Post a Comment