ಸಿದ್ದಾಪುರ (Times Of Coorg) : ನೆಲ್ಯಹುದಿಕೇರಿಯ ಶ್ರೀ ಮುತ್ತಪ್ಪ ಯುವಕಲಾ ಸಂಘದ ವತಿಯಿಂದ ಕಾರ್ಗಿಲ್ ವಿಜಯೋತ್ಸವವನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ಆಚರಿಸಲಾಯಿತು.ಶ್ರೀ ಮುತ್ತಪ್ಪ ದೇವಸ್ಥಾನ ಆವರಣದಲ್ಲಿ ನಡೆದಕಾರ್ಯಕ್ರಮದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಮಡಿದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.ಅಲ್ಲದೆ ಸಾಮೂಹಿಕವಾಗಿ ರಾಷ್ಟ್ರಗೀತೆ ಹಾಡಿ ಸಿಹಿ ಅಂಚಿ,ಅರ್ಥಪೂರ್ಣವಾಗಿ ವಿಜಯೋತ್ಸವ ಆಚರಿಸಿದರು.ಅಲ್ಲದೆ ಕಾರ್ಗಿಲ್ ವಿಜಯೋತ್ಸವದ ಪ್ರಯುಕ್ತ ಬಸ್ ತಂಗುದಾಣದ ಸುತ್ತಲಿನ ಕಾಡು ಬಳ್ಳಿಗಳನ್ನು ಕಡಿದು ಸ್ವಚ್ಚಗೊಳಿಸಿದರು.ಈ ಸಂಧರ್ಭದಲ್ಲಿ ಸಂಘದ ಸಂಘದ ಪ್ರಮುಖರಾದ ಅಭಿಲಾಷ್, ಪದ್ಮನಾಭ,ಸಚಿನ್, ಪ್ರಮೋದ್,ಶಶಿ, ಸುಂದರ್,ಮದುಸೂದನ್, ಮಂಜು ಇನ್ನಿತರರು ಹಾಜರಿದ್ದರು.

No comments
Post a Comment