.
ಕಳೆದ ಕೆಲ ದಿನಗಳಿಂದ ಎಂ ಜಿ ರಸ್ತೆ ,ಕರಡಿಗೊಡು ರಸ್ತೆ ,ಹಳೆ ಸಿದ್ದಾಪುರ ವ್ಯಾಪ್ತಿಯಲ್ಲಿ ಪಾಸಿಟಿವ್ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸೀಲ್ ಡೌನ್ ಮಾಡಲಾಗಿದ್ದು ಕಳೆದ ಹಲವು ದಿನಗಳಿಂದ ಕೂಲಿ ಕೆಲಸವೂ ಇಲ್ಲದೇ ಸಂಕಷ್ಟದಲ್ಲಿದ್ದ ನೂರಾರು ಕುಟುಂಬಗಳಿಗೆ ಎಸ್ ಡಿ ಪಿ ಐ ಕಾರ್ಯಕರ್ತರು ಕಿಟ್ ವಿತರಿಸಿದರು.
. ಎಸ್ ಡಿಪಿಐ ಪಕ್ಷಕ್ಕೆ ಧನ್ಯವಾದ ಹೇಳಿದ ಜನರುಹಲವು ದಿನಗಳಿಂದ ಸಂಕಷ್ಟದಲ್ಲಿದ್ದ ನೂರಾರು ಕುಟುಂಬಗಳಿಗೆ ಕಿಟ್ ವಿತರಿಸಿ ಮಾನವೀಯತೆ ಮೆರೆದ ಎಸ್ ಡಿಪಿಐ ಪಕ್ಷಕ್ಕೆ ನಿವಾಸಿಗಳಾದ ಫಯಾಜ್,ಅನಂದ, ಸುರೇಶ್,ರಮೇಶ್,ಸಲೀಂ, ಸೇರಿದಂತೆ ನಿವಾಸಿಗಳು ಧನ್ಯವಾದ ಹೇಳಿದರು.
ಎಸ್ ಡಿ ಪಿ ಐ ಮಾಜಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಎಂ ಎಂ ಸೌಕತ್ ಅಲಿ ಮಾತನಾಡಿ ಕಳೆದ ಹಲವು ದಿನಗಳಿಂದ ಸೀಲ್ ಡೌನ್ ವ್ಯಾಪ್ತಿಯ ಜನರು ಕೂಲಿ ಕೆಲಸಕ್ಕೊ ಹೋಗಲು ಸಾದ್ಯವಾಗದೆ ಸಂಕಷ್ಟದಲ್ಲಿರುವುದನ್ನು ಮನಗಂಡು ಕಂಟೈನ್ಮೆಂಟ್ ವಲಯದ ನೂರಾರು ಕುಟುಂಬಗಳಿಗೆ ದಾನಿಗಳ ಸಹಕಾರದಿಂದ ಪಕ್ಷದ ಕಾರ್ಯಕರ್ತರು ಕಿಟ್ ವಿತರಿಸಿದ್ದಾರೆ ಎಂದರು.
ಸಿದ್ದಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ಮಾತನಾಡಿ ಸಿದ್ದಾಪುರದ ಮೂರು ಸೀಲ್ ಡೌನ್ ವ್ಯಾಪ್ತಿಯ ಕುಟುಂಬಗಳಿಗೆ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಸೌಕತ್ ಅಲಿ ಅವರ ನೇತೃತ್ವದಲ್ಲಿ ನೂರಾರು ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿ ಮಾನವೀಯತೆ ಮೆರೆದಿದ್ದಾರೆ ಎಂದು ಹೇಳಿದ ಅವರು ದಾನಿಗಳು ಇಂಥ ಸಂದರ್ಭದಲ್ಲಿ ಮುಂದೆ ಬರಬೇಕೆಂದರು ಈ ಸಂದರ್ಭ ಎಸ್ ಡಿ ಪಿ ಐ ಪಕ್ಷದ ಪ್ರಮುಖರಾದ ಅಶ್ರಫ್ ,ಸಂಶೀರ್, ಯಾಸಿರ್, ಆಶಿಕ್, ಜಂಶೀರ್,ಇಸ್ಮಾಯಿಲ್, ಬಿಲಾಲ್ ,ರಣಿಶ್ ಸೇರಿದಂತೆ ಮತ್ತಿತರರು ಇದ್ದರು..
No comments
Post a Comment