ಕೊಡಗು ಜಿಲ್ಲಾ ಹಮಾಲಿ ಕಾರ್ಮಿಕ ಸಂಘಟನೆ ಯಿಂದ ಕಿಟ್ ವಿತರಣೆ

No comments

ಮಡಿಕೇರಿ (Times Of Coorg)  : ಕೊರೊನಾ ವೈರಸ್ ಪಾಸಿಟಿವ್ ಪ್ರಕರಣ ಪತ್ತೆಯಾದ ಮಡಿಕೇರಿ ಗದ್ದಿಗೆ ಭಾಗದ ಸೀಲ್ ಡೌನ್ ವ್ಯಾಪ್ತಿಯ ಕುಟುಂಬಗಳಿಗೆ   ಅಹಾರ ಹಾಗೂ ತರಕಾರಿ ಕಿಟ್ ವಿತರಣೆ ಮಾಡಲಾಯಿತು .ಜಿಲ್ಲಾ ಹಮಾಲಿ ಕಾರ್ಮಿಕ ಸಂಘಟನೆಯ ಅಧ್ಯಕ್ಷ ಪಿ.ಆರ್ ಭರತ್ ಮಾತನಾಡಿ ಸೀಲ್ ಡೌನ್ ವ್ಯಾಪ್ತಿಯ ಜನರು ಸಂಕಷ್ಟದಲ್ಲಿರುವುದನ್ನು ಮನಗಂಡು  ಸಂಘಟನೆ ವತಿಯಿಂದ ಆಹಾರ ಕಿಟ್ ಹಾಗೂ ಸಿದ್ದಾಪುರದ ತರಕಾರಿ ವ್ಯಾಪಾರಿ ಅಶ್ರಫ್  ನೀಡಿದ ತರಕಾರಿ ಕಿಟ್ಟುಗಳನ್ನು ವಿತರಣೆ ಮಾಡಲಾಗಿದೆ.

ಕಳೆದ ಹಲವು ತಿಂಗಳಿನಿಂದ ಲಾಕ್ ಡೌನ ಹಾಗೂ ಸೀಲ್ ಡೌನ್ ನಿಂದ ಜನರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು. ಕೂಲಿ ಕೆಲಸವೂ ಇಲ್ಲದೆ ಸಂಕಷ್ಟದಲ್ಲಿದ್ದಾರೆ.ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾದ ಸರ್ಕಾರ ವಿಫಲವಾಗಿದ್ದು .ಸಾಮಾನ್ಯ ಜನರು ಆಹಾರಕ್ಕೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ .ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆಹಾರ ಕಿಟ್ಟು ವಿತರಿಸುವಲ್ಲಿ ಸರ್ಕಾರ ವಿಫಲವಾಗಿದ್ದು ಜಿಲ್ಲೆಯ ಜನಪ್ರತಿನಿಧಿಗಳು ಅಸಹಾಯಕತೆ ತೋರಿದ್ದಾರೆ ಎಂದು ಆರೋಪಿಸಿದರು.ಕೂಡಲೇ ಜಿಲ್ಲಾಡಳಿತ ಸೀಲ್ ಡೌನ್ ವ್ಯಾಪ್ತಿಯ ಜನರಿಗೆ ಕಿಟ್ಟು ವಿತರಿಸಬೇಕೆಂದು ಒತ್ತಾಯಿಸಿದ್ದಾರೆ.

No comments

Post a Comment