ಎಸ್ ಕೆ ಎಸ್ ಎಸ್ ಎಫ್ ಎಡಪಾಲ ವತಿಯಿಂದ ದ್ವಿತೀಯ ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಸನ್ಮಾನ

No comments

ವರದಿ : ಹಾರಿಸ್ ನಾಪೋಕ್ಲು
ನಾಪೋಕ್ಲು (Times Of Coorg) : ಶಿಕ್ಷಣ ಪಡೆಯುವ  ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಎಸ್ ಕೆ ಎಸ್ ಎಸ್ ಎಫ್ ಟ್ರೆಂಡ್ ಘಟಕದಡಿಯಲ್ಲಿ ಮರ್ಹೂಂ ಖಾಝಿ ಶೈಖುನಾ ಪೂಕಳಂ ಉಸ್ತಾದ್ ಜ್ಝಾಪಕಾರ್ಥವಾಗಿ ಎಕ್ಸೆಲೆನ್ಸ್ ಅವಾರ್ಡ್ ನೀಡಲಾಗಿದೆ.

ಕೊಡಗು ನಾಯಿಬ್ ಖಾಝಿ ಶೈಖುನಾ ಅಬ್ದುಲ್ಲಾ ಫೈಝಿ ಮುಖ್ಯ ಅತಿಥಿಗಳಾಗಿದ್ದ ವೇದಿಕೆಯ ಅಧ್ಯಕ್ಷ ಸ್ಥಾನವನ್ನು ಮಾಮು ಏರೆಟೆಂಡ ವಹಿಸಿ ವಿದ್ಯಾರ್ಥಿಗಳಿಗೆ ಆಶಂಶೆಯನ್ನು ಕೋರಿ ಅವರ ಭವಿಶ್ಯಕ್ಕೆ ಉಜ್ವಲವಾಗಲಿ ಎಂದು ಕೋರಿದರು. ಈ ಒಂದು ಕಾರ್ಯಕ್ರಮವನ್ನು ಉದ್ಘಾಟಿಸಿದ ಸಿ ಆರ್ ಪಿ ಉಮ್ಮರ್ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದನ್ನು ಹೇಳಿ ಪ್ರಶಂಸಿದರು.


ಊರಿನ ಹಲವಾರು ಗಣ್ಯ ವ್ಯಕ್ತಿಗಳಿದ್ದ ಈ ವೇದಿಕೆಯಲ್ಲಿ ಹನ್ನೊಂದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮೆಮೆಂಟೋ ಹಾಗೂ ಪ್ರೋತ್ಸಾಹಕ ಧನ ನೀಡಿದರು. ನಂತರದ ಭಾಷಣದಲ್ಲಿ ಎಸ್ ಕೆ ಎಸ್ ಎಸ್ ಎಫ್ ಎಡಪಾಲ ಈ ಹಿಂದೆ ಮಾಡಿದ ಊರಿನ ರಸ್ತೆ ಬದಿ ಸ್ವಚ್ಚಗೊಳಿಸುವಿಕೆ, ರಮದಾನ್ ಕಿಟ್ ವಿತರಣೆ ಹಾಗೂ ಕೋವಿಡ್-19 ಮುನ್ನೆಚ್ಚೆರಿಕೆಯಾಗಿ PPE ಕಿಟ್ ಕಾಯ್ದಿರಿಸುವಿಕೆ ಬಗ್ಗೆ ಮೆಚ್ಚುಗೆಯನ್ನು ತಿಳಿಸಿದರು.

ಎಸ್ ಕೆ ಎಸ್ ಎಸ್ ಎಫ್ ಎಡಪಾಲ ಊರಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡಿದ್ದು ಇನ್ನೂ ಹೆಚ್ಚಿನ ಕಾರ್ಯಕ್ರಮ ಕೈಹೊಡ್ಡಿ ಸಹಾಯ ಹಾಗು ಉತ್ಸುಕತೆ ತುಂಬುತ್ತೇವೆ ಎಂದು ಕಾರ್ಯಕ್ರಮದಲ್ಲಿ ಸೇರಿದ ಎಸ್ ಕೆ ಎಸ್ ಎಸ್ ಎಫ್ ಎಡಪಾಲ ಅಧ್ಯಕ್ಷ ಶಹೀದ್ ಫೈಝಿ , ಉಪಾಧ್ಯಕ್ಷ ಹಾರಿಸ್ ಭಾಖವಿ ,ಸೆಕ್ರೆಟರಿ ಹನೀಫ್ ಫೈಝಿ ,ವರ್ಕಿಂಗ್ ಸೆಕ್ರೆಟರಿ ಸಿನಾನ್ ಎಸ್ ಎಸ್ ಹಾಗೂ ಟ್ರೆಂಡ್ ಸೆಕ್ರೆಟರಿ ರಾಫಿ ಕೆ ಎಂ ತಿಳಿಸಿದ್ದಾರೆ.

No comments

Post a Comment