ಬಹುಕೋಟಿ ಕೊರೊನಾ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ ಹಾಗೂ ಸುಗ್ರೀವಾಜ್ಞೆ ಮೂಲಕ ಖಾಸಗಿ ಆಸ್ಪತ್ರೆಗಳನ್ನು ರಾಜ್ಯ ಸರ್ಕಾರದ ಅಧೀನಕ್ಕೆ ತೆಗೆದು ಕೊಳ್ಳುವಂತೆ AIYF ವತಿಯಿಂದ ತಹಶೀಲ್ದಾರ್ ಗೆ ಮನವಿ

No comments

ವರದಿ : ಕರಡಿಗೋಡು ಎಂ.ಎ.ಕೃಷ್ಣ
ಸಿದ್ಧಾಪುರ (Times Of Coorg) : ಮಹಾಮಾರಿ ಕೊರೊನಾವು ತನ್ನ ಪೈಶಾಚಿಕ ಬಾಹುಗಳನ್ನು ರಾಜ್ಯದಲ್ಲಿ ಚಾಚಿದ್ದು ಇದರ ಮಧ್ಯೆಯೇ ರಾಜ್ಯ ಸರ್ಕಾರದ ಮೇಲೆ ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಹುಕೋಟಿ ಹಗರಣದ ಆರೋಪ ಮಾಡಿದ್ದಾರೆ. ಇದರ ಸತ್ಯಾಂಶ ಬೆಳಕಿಗೆ ಬರಬೇಕು ಎಂದು ಒತ್ತಾಯಿಸಿ  ಅಖಿಲ ಭಾರತೀಯ ಯುವಜನ ಫೆಡರೇಷನ್(AIYF)  ರಾಜ್ಯ ವ್ಯಾಪಿ ಹಮ್ಮಿಕೊಂಡಿದ  ಮನವಿ ನೀಡುವ ಕಾರ್ಯಕ್ರಮದ ಭಾಗವಾಗಿ ವಿರಾಜಪೇಟೆಯಲ್ಲಿ ತಾಶೀಲ್ದಾರ್ ರವರಿಗೆ ಮನವಿಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ AIYF ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ರಫೀಕ್ ಮಾತನಾಡಿ ಕೊರೊನಾದಿಂದ ಜನ ಸಾಯುತ್ತಿದ್ದರು ಜನರ ಸಮಸ್ಯೆಗೆ ಸ್ಪಂದಿಸದ ರಾಜ್ಯ ಹಾಗೂ ಕೇಂದ್ರ ಸರಕಾರ ಜನರ ಹಿತವನ್ನು ಕಾಯಲು ಮುಂದಾಗ ಬೇಕು. ಎಂದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಸುನೀಲ್ ರವರು ಮಾತನಾಡಿ.
ರಾಜ್ಯದಲ್ಲಿ ದಿನದಿಂದ -ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ ಸರಕಾರ ಖಾಸಗಿ ಆಸ್ಪತ್ರೆಯಲ್ಲಿ ಕೊರೋನಾ ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ವೆಚ್ಚ ದುಬಾರಿ ಯಾಗಿದ್ದು  ಬಡ ಕಾರ್ಮಿಕ ವರ್ಗ ಹಾಗೂ ಮಧ್ಯಮ ವರ್ಗದವರೀ  ಇದು ಬರಿಸಲು ಸಾಧ್ಯ ವಾಗುತ್ತಿಲ್ಲ.

ಖಾಸಗಿ ಆಸ್ಪತ್ರೆಯಲ್ಲಿ ಒಬ್ಬ ರೋಗಿಗೆ ಚಿಕಿತ್ಸೆ ಕೊಡಿಸಲು 1 ವರೆಯಿಂದ 2 ಲಕ್ಷ ದವರೇಗೆ ಬರಿಸಬೇಕಾಗುತ್ತದೆ. ಒಂದು ಕುಟುಂಬದ2-3ಜನಕ್ಕೆ ಸೋಂಕು ತಗುಲಿದರೆ ಜೀವ ಉಳಿಸಲು ಸಾಧ್ಯವಾಗದಿರಬಹುದು ಆದುದರಿಂದ ಸೋಂಕು ಹತೋಟಿಗೆ ಬರುವವರೆಗೆ ಎಲ್ಲಾ ಖಾಸಗಿಆಸ್ಪತ್ರೆಗಳನ್ನು ಸುಗ್ರೀವಾಜ್ಞೆ ಮುಖಾಂತರ ಸರಕಾರದ ಹತೋಟಿಗ ತೆಗೆದುಕೊಂಡು ಕೊರೋನಾ ಚಿಕಿತ್ಸೆ ವೆಚ್ಚವನ್ನು  ಸರಕಾರವೇ ಬರಿಸಬೇಕು ವೆಂಬ ಇತ್ಯಾದಿ ಬೇಡಿಕೆಯನ್ನೋಳಗೊಂಡ ಮನವಿಯನ್ನು ಉಪ ತಾಶೀಲ್ದಾರ್ ಪೊನ್ನುರವರೀಗೆ ನೀಡಲಾಯಿತು .
ಈ ಸಂದರ್ಭದಲ್ಲಿ  ರಜನಿಕಾಂತ್ ,ಗಿರೀಶ್,ಇಂಮ್ರಾನ್ ಉಪಸ್ಥಿತರಿದ್ದರು.

No comments

Post a Comment