ನಾಪೋಕ್ಲು 2 ವಾರಗಳ ವಾರದ ಸಂತೆ ರದ್ದು

No comments

ವರದಿ :  ಹಾರಿಸ್ ನಾಪೋಕ್ಲು
ನಾಪೋಕ್ಲು (Times Of Coorg) : ಸ್ಥಳೀಯ ನಾಪೋಕ್ಲು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಪಂಚಾಯಿತಿ ಆಡಳಿತ ಅಧಿಕಾರಿ ಬಿಂದುಶ್ರೀ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ    ಕೋರೋನಾಮ ಹಾಮಾರಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎರಡು ವಾರಗಳ ಕಾಲ ಸಂತೆ ರದ್ದುಪಡಿಸಿ ಹಾಗೂ ಭಾನುವಾರ ಸಂಪೂರ್ಣ ಲಾಕ್ಡೌನ್ ಮತ್ತು ಸೋಮವಾರ ದಿನ ಬೆಳಿಗ್ಗೆ 6:00 ರಿಂದ ಸಂಜೆ 4 ಗಂಟೆವರೆಗೆ ಮತ್ತು ಉಳಿದ ದಿನಗಳಲ್ಲಿ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ಅಂಗಡಿ  ಮುಂಗಟ್ಟುಗಳು ತೆರೆಯಲು  ಜನಪ್ರತಿನಿಧಿಗಳು ಚೇಂಬರ್ ಆಫ್ ಕಾಮರ್ಸ್ ಸ್ಥಳೀಯ ವರ್ತಕರು ಒಮ್ಮತದಿಂದ ತೀರ್ಮಾನಿಸಲಾಯಿತು.

ಸಭೆಯಲ್ಲಿ ಅಭಿವೃದ್ಧಿ ಅಧಿಕಾರಿ ಚೊಂದಕ್ಕಿ, ಮನ್ಸೂರ್ ಅಲಿ, ಚೇಂಬರ್ ಆಫ್  ಕಾಮರ್ಸ್ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ, ಕುಸು ಕುಶಾಲಪ್ಪ,ಜಿಲ್ಲಾ ಪಂಚಾಯತ್ ಸದಸ್ಯ ಮುರಳಿ ಕರುಂಬಯ್ಯ, ಮಾಜಿ ಅಧ್ಯಕ್ಷ ಕೆ  ಎ ಇಸ್ಮಾಯಿಲ್, ಮಾಜಿ ಉಪಾಧ್ಯಕ್ಷ ಸಾಬಾ ತಿಮ್ಮಯ್ಯ,
ಮತ್ತಿತರರು ಇದ್ದರು.

No comments

Post a Comment