*
ಮಡಿಕೇರಿ (Times Of Coorg) : ಕೊಡಗು ಜಿಲ್ಲೆಯಲ್ಲಿ ಇಂದು 10 ಕೋವಿಡ್ ಪ್ರಕರಣಗಳು ಧೃಡಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 141ಕ್ಕೆ ಏರಿಕೆಯಾಗಿದೆ. 122 ಸಕ್ರಿಯ ಪ್ರಕರಣಗಳು, ಒಂದು ಮೃತಪಟ್ಟ ಪ್ರಕರಣವಾಗಿದೆ. 18 ಪ್ರಕರಣಗಳು ಗುಣಮುಖರಾಗಿದ್ದಾರೆ.
ವಿರಾಜಪೇಟೆಯ ಶಾಂತಿ ನಗರದಲ್ಲಿ ಹಿಂದೆ ಸೋಂಕು ದೃಢಪಟ್ಟಿದ್ದ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 67 ವರ್ಷದ ಪುರುಷ, 57 ವರ್ಷದ ಮಹಿಳೆ, 28 ವರ್ಷದ ಮಹಿಳೆ, 10 ವರ್ಷದ ಹುಡುಗಿ, 07 ವರ್ಷದ ಹುಡುಗಿಗೆ ಸೋಂಕು ದೃಢಪಟ್ಟಿದೆ. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವಿರಾಜಪೇಟೆ ತಾಲ್ಲೂಕಿನ ಗೋಣಿಕೊಪ್ಪದ ಅಚ್ಚಪ್ಪ ಬಡಾವಣೆಯ 86 ವರ್ಷದ ಮಹಿಳೆಯೊಬ್ಬರಿಗೆ ಸೋಂಕು ದೃಢಪಟ್ಟಿದೆ. ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆಯಲ್ಲಿ ಈ ಹಿಂದೆ ಸೋಂಕು ದೃಢಪಟ್ಟಿದ್ದ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 31 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ. ಮಡಿಕೇರಿಯ ಆಸ್ಪತ್ರೆ ವಸತಿ ಗೃಹದ ಈ ಹಿಂದೆ ಸೋಂಕು ದೃಢಪಟ್ಟಿದ್ದ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 21 ವರ್ಷದ ಪುರುಷರೊಬ್ಬರಿಗೆ ಸೋಂಕು ಧೃಢಪಟ್ಟಿದೆ. ಸೋಮವಾರಪೇಟೆ ತಾಲ್ಲೂಕಿನ ನೇರಳೆ ಗ್ರಾಮದ ಜ್ವರ ಲಕ್ಷಣಗಳಿದ್ದ ಮತ್ತು ಬೆಂಗಳೂರಿನ ಪ್ರಯಾಣದ ಇತಿಹಾಸವಿರುವ 26 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ. ವಿರಾಜಪೇಟೆ ತಾಲ್ಲೂಕಿನ ಗೋಣಿಕೊಪ್ಪದ ಎಂ.ಎಂ. ಲೇ ಔಟ್ ನ ಜ್ವರ ಲಕ್ಷಣಗಳಿದ್ದ 38 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾಾರಿ ತಿಳಿಸಿದ್ದಾರೆ.
*ಜಿಲ್ಲೆಯಲ್ಲಿ ಹೊಸದಾಗಿ 03 ನಿಯಂತ್ರಿತ ಪ್ರದೇಶಗಳನ್ನು ತೆರೆಯಲಾಗಿದೆ. ವಿವರ ಕೆಳಕಂಡಂತಿದೆ.*
• ಅಚ್ಚಪ್ಪ ಲೇ ಔಟ್, ಗೋಣಿಕೊಪ್ಪ, ವಿರಾಜಪೇಟೆ
. ನೇರಳೆ ಗ್ರಾಮ, ಸೋಮವಾರಪೇಟೆ
. ಎಂ.ಎಂ. ಲೇ ಔಟ್, ವಿರಾಜಪೇಟೆ
. ನೇರಳೆ ಗ್ರಾಮ, ಸೋಮವಾರಪೇಟೆ
. ಎಂ.ಎಂ. ಲೇ ಔಟ್, ವಿರಾಜಪೇಟೆ
*ಸರ್ಕಾರದ ನಿಯಮಾನುಸಾರ ಅವಧಿ ಮುಗಿದ ಈ ಕೆಳಗಿನ 02 ನಿಯಂತ್ರಿತ ಪ್ರದೇಶಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ*
. ಹುಲುಸೆ, ಸೋಮವಾರಪೇಟೆ ತಾಲ್ಲೂಕು
. ಕೊಳಗದಾಳು, ಮಡಿಕೇರಿ ತಾಲ್ಲೂಕು
. ಕೊಳಗದಾಳು, ಮಡಿಕೇರಿ ತಾಲ್ಲೂಕು
ಜಿಲ್ಲೆಯಲ್ಲಿ ವರದಿಯಾದ ಸೋಂಕಿತ ಪ್ರಕರಣಗಳು : 141
ಆಸ್ಪತ್ರೆಯಿಂದ ಬಿಡುಗಡೆಗೊಂಡ ಪ್ರಕರಣಗಳು: 18
ಸಕ್ರಿಯ ಪ್ರಕರಣಗಳು: 122
ಮೃತ ಪಟ್ಟ ಪ್ರಕರಣಗಳು: 01
ಒಟ್ಟು ನಿಯಂತ್ರಿತ ಪ್ರದೇಶಗಳು: 54
ಆಸ್ಪತ್ರೆಯಿಂದ ಬಿಡುಗಡೆಗೊಂಡ ಪ್ರಕರಣಗಳು: 18
ಸಕ್ರಿಯ ಪ್ರಕರಣಗಳು: 122
ಮೃತ ಪಟ್ಟ ಪ್ರಕರಣಗಳು: 01
ಒಟ್ಟು ನಿಯಂತ್ರಿತ ಪ್ರದೇಶಗಳು: 54

No comments
Post a Comment