ಮಡಿಕೇರಿಯಿಂದ ಮಂಗಳೂರಿಗೆ ತುರ್ತು ಅಂಬ್ಯುಲೆನ್ಸ್ : ಝಿರೋ ಟ್ರಾಫಿಕ್ ಮಾಡಿ ಸಹಕರಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಜನತೆ

No comments

ಮಡಿಕೇರಿ (Times Of Coorg) : ಮಡಿಕೇರಿಯಲ್ಲಿ ಕಳೆದ 3ದಿನಗಳಿಂದ ಅನಾರೋಗ್ಯದಿಂದ  ಬಳಲುತಿದ್ದ,ಅಬುಬಕ್ಕರ್ ಕಡಂಗ  ರವರನ್ನು KYC ಯ ನೇತೃತ್ವ ದಲ್ಲಿ ಝಯಿನುಲ್ ಆಭಿದ್ ಮತ್ತು ಮೈಸಿ ಹಾಗೂ ಮಡಿಕೇರಿ ಘಟಕದ ಸದಸ್ಯರಾದ ಮುನೀರ್ ಮತ್ತು ಮುನ್ನ ರವರು ಎಲ್ಲಾ ಸಹಕಾರ ಕೊಟ್ಟಿದ್ದು,  ಶುಕ್ರವಾರ ಅಂದರೆ ಇವತ್ತು (14-08-2020) ವೈದ್ಯರ ಸಲಹೆಯಂತೆ ತಂದೆಯನ್ನು  ತುರ್ತಾಗಿ ಕೆಲ ಗಂಟೆಗಳ ಒಳಗಾಗಿ ಮಂಗಳೂರುಗೆ  ಆದಷ್ಟು ಬೇಗನೆ ತಲುಪಿಸಲು ಹೇಳಿದ ಕಾರಣ,  KYC ನೇತೃತ್ವದಲ್ಲಿ,ಝಯಿನುಲ್  ಅಬಿದ್ ಹಾಗು  ಮೈಸಿರವರು  ದಕ್ಷಿಣ  ಕನ್ನಡ  ಜಿಲ್ಲೆಯ ಹಲವರಿಗೆ  ಕರೆ ಮಾಡಿ ತಿಳಿಸಿದ್ದಾರೆ.

ಕೊಡಗು ಮಡಿಕೇರಿ ಮೂಲದ  ರೋಗಿಯೊಬ್ಬರನ್ನು ತುರ್ತಾಗಿ ದೇರಳಕಟ್ಟೆಯ ಆಸ್ಪತ್ರೆಗೆ ಸಾಗಿಸಬೇಕು ದ,ಕ,ಜಿಲ್ಲೆಯಲ್ಲಿ ಸ್ವಲ್ಪ ಸಹಾಯ ಮಾಡಿ ಎಂಬಂತೆ ಸುಳ್ಯದ ನಗರ ಪಂಚಾಯತ್ ಸದಸ್ಯ ಷರೀಫ್ ಕಂಠಿಯವರಿಗೆ  ಹೇಳಿದಾಗ‌ ಅನುಸರಿಸಿ ಸುಳ್ಯ ಮೂಲಕ ತುರ್ತು ವಾಹನ ಹಾದುಹೋಗಲು ಪಣತೊಡುತ್ತಾರೆ.

ಷರೀಫ್ ರವರು ತಕ್ಷಣ ಸ್ನೇಹಿತ ತಾಜುದ್ದೀನ್ ಟರ್ಲಿಯವರಿಗೆ ತಿಳಿಸಿ ತಯಾರಿ ಮಾಡಿಕೊಂಡಿದ್ದು KYC ಕಾರ್ಯಕರ್ತರು ಪುತ್ತೂರಿನಲ್ಲಿ  ಹಮೀದ್ ಮತ್ತು ಬಾವುಚಾ ರವರಿಗೆ  ಮಾಹಿತಿ ನೀಡಿ ಎಲ್ಲಾ ಕಡೆಯಿಂದ ತುರ್ತಾಗಿ ಒಂದು ವಾಟ್ಸಾಪ್ ಗುಂಪು ರಚಿಸಿ ಜಿಲ್ಲೆಯ ಎಲ್ಲಾ  ಸಾಮಾಜಿಕ ಕಾರ್ಯಕರ್ತರು ಸೇರಿಕ್ಕೊಳ್ಳುವ ಹಾಗೆ ಮಾಡಿ ತುರ್ತು ಸ್ಪಂದನೆ ನೀಡುತ್ತಾರೆ.

ಕೆಲವೇ ಕ್ಷಣಗಳಲ್ಲಿ ವಾಟ್ಸಾಪ್ ಗುಂಪು ಬರ್ತಿಯಾಗಿ ಅಲ್ಲಲ್ಲಿ ಸ್ವಯಂ ಸೇವಕರು ರಸ್ತೆ ಕ್ಲೀಯರ್ ಮಾಡುತ್ತಲೇ ತುರ್ತು ವಾಹನ ಸಂಪಾಜೆ ಗಡಿ ಮೂಲಕ ದ.ಕ. ಪ್ರವೇಶಿಸಿಸುತ್ತದೆ,ನಂತರ ಸಂಪಾಜೆಯಿಂದ ದೇರಳಕಟ್ಟೆಗೆ ಒಂದು ಗಂಟೆ ಹದಿನೈದು ನಿಮಿಷಕ್ಕೆ ತುರ್ತು ವಾಹನ ಆಸ್ಪತ್ರೆ ತಲುಪುತ್ತದೆ.

ಜಿಲ್ಲೆಯಾದ್ಯಂತ ಮಾನವೀಯ ನೆಲೆಯಲ್ಲಿ ಆ ತುರ್ತು ವಾಹನ ಸಂಚಾರಕ್ಕೆ ಜಾತಿ, ಬೇದ, ಮರೆತು ಸಹಕರಿಸಿದ ಎಲ್ಲಾ  ಸ್ವಯಂ ಸೇವಕರಿಗೂ,ಜಿಲ್ಲೆಯ ಪೊಲೀಸ್ ಇಲಾಖೆಯ ಎಲ್ಲಾ  ಅಧಿಕಾರಿಗಳಿಗೂ,ಚಾಲಕ ಮಿತ್ರರಿಗೂ,ಬೆಂಗಾವಲು ವ್ಯವಸ್ಥೆ ಮಾಡಿದ ಹಲವು ಆಂಬುಲೆನ್ಸ್  ಚಾಲಕರಿಗೂ,ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಎಲ್ಲಾ  ಸಾರ್ವಜನಿಕರಿಗೂ,ವಿಶೇಷವಾಗಿ,ಕೊಡಗು  ಯೂತ್ ಕಮಿಟಿ ತಂಡಕ್ಕೆ ಕೃತಜ್ಞತೆ ಸಲ್ಲಿಸುತ್ತ
ಹಾಗು ಮುಖ್ಯವಾಗಿ  ಮಡಿಕೇರಿಯಿಂದ  ಮಂಗಳೂರಿಗೆ  ತಲುಪಿಸಿದ  ಆಂಬುಲೆನ್ಸ್ ಚಾಲಕ
ಅಯ್ಯುಬ್  ಅಲಿ ಅವರಿಗೂ  ಅನಂತ ಅನಂತ ಧನ್ಯವಾದಗಳು.

 ಇದಕ್ಕೆ ಸ್ಪಂದನೆ ನೀಡಿದ ಕಾರ್ಯಕರ್ತರಿಗೂ  ಎಲ್ಲರಿಗೂ  ಅಭಿನಂದನೆಗಳನ್ನು, ಕ್ರತಜ್ನತೆಯನ್ನು. ಸಲ್ಲಿಸುತ್ತಾ ಆದಷ್ಟು ಬೇಗ ನನ್ನ ತಂದೆ
ಗುಣಮುಖರಾಗಿ ಬರಲೀ ಎಂದು ಪ್ರಾರ್ಥಿಸೋಣ ಎಂದು ಅಬೂಬಕರ್ ಕಡಂಗರವರ ಮಗ ರಜೀಕ್ ಕಡಂಗರವರ ಮಾತು.

- ಅಯ್ಯೂಬ್ ಅಲಿ ( ಅಂಬ್ಯುಲೆನ್ಸ್ ಚಾಲಕ)

No comments

Post a Comment