ಕೊರೋನಾ ಮಹಾಮಾರಿಯಿಂದ ಎಲ್ಲವೂ ನಿರಾಸೆಯಾದ ಹಿನ್ನೆಲೆ ಸಂಭ್ರಮ ಸಡಗರವಿಲ್ಲದೇ ಮನೆಯಲ್ಲೇ ಸರಳವಾಗಿ ಹಬ್ಬ ಆಚರಣೆ ಮಾಡುವ ಮೂಲಕ ಸ್ವಂತ ಖರ್ಚಿನಲ್ಲಿ ಗ್ರಾಮವಿಡೀ ಸ್ಯಾನಿಟೈಸರ್ ಸಿಂಪಡಿಸಿ ಮಾನವೀಯತೆ ಮೆರೆದ ಗ್ರಾಮ ಪಂಚಾಯಿತಿ ಸದಸ್ಯ ಕೆ ಎಂ ಮುಸ್ತಫಾ ಅವರ ಸೇವಾ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕುಶಾಲನಗರ ತಾಲ್ಲೂಕಿನ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿಗೆ 6ನೇ ವಾರ್ಡ್ ನಿಂದ ಎರಡನೇ ಬಾರಿ ಆಯ್ಕೆಯಾದ ಕೆ. ಎಂ ಮುಸ್ತಫಾ ತಮ್ಮ ಸೇವಾವಧಿಯಲ್ಲಿ ಗ್ರಾಮದ ಹಲವು ಅಭಿವೃದ್ಧಿ ಕಾರ್ಯಗಳಿಗೆ ಕೈ ಜೋಡಿಸಿದ್ದಾರೆ.ನಿರಂತರ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿರುವ ಇವರು ಗ್ರಾಮಕ್ಕೆ ಮಾದರಿಯಾಗಿದ್ದಾರೆ.
ಹಬ್ಬದ ದಿನದಂದೇ ಮನೆಯಲ್ಲಿಯೇ ಕುಟುಂಬದೊಂದಿಗೆ ಪ್ರಾರ್ಥನೆ ನೆರವೇರಿಸಿದ ಮುಸ್ತಫಾ ತನ್ನ ಸಹಪಾಠಿಗಳೊಂದಿಗೆ ಗ್ರಾಮವನ್ನೆಲ್ಲ ಸ್ಯಾನಿಟೈಸರ್ ಸಿಂಪಡಣೆ ಬಗ್ಗೆ ಮಾತುಕತೆ ನಡೆಸಿದ್ದಾರೆ ಈ ಕಾರ್ಯಕ್ಕೆ ಸಾಥ್ ನೀಡಿದ ವೈ.ಬಿ.ಸಿ ಯುವಕ ಸಂಘ ಪದಾಧಿಕಾರಿಗಳು ಹಾಗೂ ವಾರ್ಡ್ ವ್ಯಾಪ್ತಿಯ ಕೊರೊನಾ ವಾರಿಯರ್ಸ್ ಪಡೆಗಳೊಂದಿಗೆ ವಾಹನದಲ್ಲಿ ಡ್ರಮ್ ಗಳ ಮೂಲಕ ಸ್ಯಾನಿಟೈಸರ್ ತುಂಬಿಸಿಕೊಂಡು 5 ಮತ್ತು 6 ನೇ ವಾರ್ಡ್ ಹಾಗೂ ಪಟ್ಟಣವನ್ನು ಸ್ಯಾನಿಟೈಸರ್ ಮಾಡಿ ಮಾದರಿಯಾಗಿದ್ದಾರೆ.
ಈ ಸಂದರ್ಭ ಜಂಶೀರ್, ಜಾಫರ್, ರಹೀಮ್, ನೌಫಲ್, ನಿಯಾಸ್, ಹ್ಯಾರಿಸ್, ಸನೀಲ್, ರತೀಶ್, ಸಮೀರ್, ರಫೀಕ್, ಸಾದಿಕ್, ಸಫೀಕ್, ಅಶ್ರಫ್, ಸಲೀಮ್, ಸಲಾಂ, ನಸೀರ್, ಸೇರಿದಂತೆ ವಾರಿಯರ್ಸ್ ಗಳು ಸಾಥ್ ನೀಡಿದರು
No comments
Post a Comment