ಅಧಿಕಾರಿ ಜನಪ್ರತಿನಿಧಿಗಳ ಗೊಂದಲದ ಹೇಳಿಕೆ ಲಾಕ್ ಡೌನ್ ನಡುವೆ ಸಂಕಷ್ಟಕ್ಕೊಳಗಾದ ಜನತೆ :ಸರಿತಾ ಪೂಣಚ್ಚ

No comments
ಅಧಿಕಾರಿ ಜನಪ್ರತಿನಿಧಿಗಳ ಗೊಂದಲದ ಹೇಳಿಕೆ.
 
ಸಂಕಷ್ಟಕ್ಕೊಳಗಾದ ಜನತೆ

ಏಕರೂಪ ನಿಯಮ ಜಾರಿಗೊಳಿಸಲು ಸರಿತಾ ಪೂಣಚ್ಚ ಒತ್ತಾಯ

ಮಡಿಕೇರಿ :ಕೊರೊನ ಮಹಾಮಾರಿ ವೈರಸ್ ರಾಜ್ಯಾದ್ಯಂತ ವ್ಯಾಪಕವಾಗಿ ಹರಡುತ್ತಿದ್ದು ಮುಂಜಾಗ್ರತಾ ಕ್ರಮ ಕೈಗೊಂಡಿರುವ ಸರ್ಕಾರದ ನಿಲುವಿಗೆ ಅಧಿಕಾರಿ ಜನಪ್ರತಿನಿಧಿಗಳು ಗೊಂದಲಗಳ ಹೇಳಿಕೆ ನೀಡಿ ಜನ ಸಾಮಾನ್ಯರನ್ನು ಸಂಕಷ್ಟಕ್ಕೀಡು ಮಾಡುತ್ತಿರುವ ಘಟನೆ ಜಿಲ್ಲೆಯಾದ್ಯಂತ ನಡೆದಿದೆ .
ಕೋವಿಡ್  ನಿಯಮಗಳನ್ನ  ಜನಸಾಮಾನ್ಯರಿಗೆ ತೊಂದರೆಯಾಗದ ರೀತಿಯಲ್ಲಿ ಏಕರೂಪ ನಿಯಮವನ್ನು ಜಾರಿಗೊಳಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ವಕ್ತಾರೆ ಸರಿತಾ ಪೂಣಚ್ಚ ಒತ್ತಾಯಿಸಿದ್ದಾರೆ.
ಸರಿತಾ ಪೂಣಚ್ಚ ಪತ್ರಿಕೆಯೊಂದಿಗೆ ಮಾತನಾಡಿ ಕೋವಿಡ್   ಸಂದರ್ಭದಲ್ಲಿ ಸಾಮಾನ್ಯ ಜನರು ಸಂಕಷ್ಟದ ಜೀವನ ನಡೆಸುತ್ತಾರೆ. ಕೂಲಿ ಕೆಲಸ ಮಾಡಿ ಜೀವನ ನಡೆಸುವ ಬಹುತೇಕ ಕುಟುಂಬಗಳು ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಬಸ್ಸು ವಾಹನಗಳ ವ್ಯವಸ್ಥೆ ಇಲ್ಲದೆ ಅದೆಷ್ಟೋ ಮಂದಿ ಪಟ್ಟಣಕ್ಕೆ ಬಂದು ಅಗತ್ಯ ವಸ್ತುಗಳನ್ನ ಕೊಂಡುಕೊಳ್ಳಬೇಕಾಗಿದೆ.
ಸರ್ಕಾರದ ಮಾರ್ಗಸೂಚಿಗಳನ್ನು ರಾಜ್ಯಾದ್ಯಂತ ವಿಸ್ತರಿಸಲಾಗಿದ್ದರೂ
ಕೊಡಗು ಜಿಲ್ಲೆಯಲ್ಲಿ 2ದಿನ ಮಾತ್ರ ಅವಕಾಶ ನೀಡಲಾಗಿದೆ.ಇದರಿಂದ ಬಹುತೇಕ ಕಡೆ ಜನರು ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಮುಗಿ ಬೀಳುವುದು ಸಾಮಾನ್ಯವಾಗಿದೆ.
ಇತ್ತೀಚೆಗೆ ಜಿಲ್ಲಾಡಳಿತ ಹಲವು ನಿಯಮಗಳನ್ನು ಜಾರಿಗೊಳಿಸಿ ಆದೇಶ ಮಾಡಲಾಗಿತ್ತು . ಇತ್ತೀಚೆಗೆ ಜಿಲ್ಲೆಗೆ ಬಂದ ಉಸ್ತುವಾರಿ ಸಚಿವರಿಗೆ  ಕೆಲ ಜನಪ್ರತಿನಿಧಿಗಳು ನಿಯಮ ಬದಲಿಸುವಂತೆ  ಒತ್ತಡ ಹೇರಿದ ಪರಿಣಾಮ ಸಚಿವರು ಆದೇಶಕ್ಕೆ 
ಜಿಲ್ಲಾಡಳಿತ ಗೊಂದಲದ ಹೇಳಿಕೆ ನೀಡಿರುವುದರಿಂದ 
ಜನರು ಹಲವು ಸಮಸ್ಯೆಗಳನ್ನು ಎದುರಿಸಿದ್ದಾರೆ.
ಟಿವಿ ಹಾಗೂ ಮೊಬೈಲ್ ಸಂಪರ್ಕವೂ ಇಲ್ಲದೆ ಅದೆಷ್ಟೋ ಮಂದಿ ಯಾವುದೇ ಮಾಹಿತಿಗಳನ್ನು ತಿಳಿದುಕೊಳ್ಳಲು ಸಾಧ್ಯವಾಗದಂಥ ಪರಿಸ್ಥಿತಿಯಲ್ಲಿ  ಇದ್ದಾರೆ.
ಗೋಣಿಕೊಪ್ಪಲು ಸೇರಿದಂತೆ ಹಲವೆಡೆ ಗೊಂದಲದ ಹೆಳಿಕೆಯಿಂದ ಜನಸಾಮಾನ್ಯರು ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. 
ಆಟೊ ಸೇರಿದಂತೆ ಇತರ ವಾಹನಗಳಿಗೆ ಓಡಾಡಲು ನಿರ್ಬಂಧ ಹೇರಿದ ಹಿನ್ನೆಲೆಯಲ್ಲಿ ವಾಹನ ಇಲ್ಲದ ಅದೆಷ್ಟೋ ಮಂದಿ ಕಿಲೋಮೀಟರ್ ಗಟ್ಟಲೆ ನಡೆದು 
ಹಣ್ಣು ಹಾಗೂ ತರಕಾರಿ ಕೊಂಡುಕೊಳ್ಳಲು ಹರಸಾಹಸಪಟ್ಟರು
ಜಿಲ್ಲಾಧಿಕಾರಿಗಳು ಸರ್ಕಾರದ ನಿಯಮಗಳನ್ನು ಜಾರಿಗೊಳಿಸುವ ಮೂಲಕ ಜನಸಾಮಾನ್ಯರಿಗೆ ಪ್ರಯೋಜನವಾಗುವ ರೀತಿಯಲ್ಲಿ ಆಯಾ ಗ್ರಾಮ ಪಂಚಾಯಿತಿ ಮೂಲಕ ದರ ನಿಗದಿಗೆ ಅಗತ್ಯ ವಸ್ತುಗಳನ್ನ ಮನೆಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಿದ್ದಲ್ಲಿ  ಜನ ನಿಯಂತ್ರಣ ಸಾಧ್ಯವಾಗಲಿದೆ.
ಇದರಿಂದ ಸಾರ್ವಜನಿಕರಿಗೂ ಕೋವಿಡ್  ಆತಂಕವೂ ದೂರವಾಗಲಿದೆ.ಜಿಲ್ಲಾಧಿಕಾರಿಗಳು ಏಕರೂಪ ನಿಯಮಗಳನ್ನು ಜಾರಿ ಗೊಳಿಸ ಬೇಕೆಂದು ಒತ್ತಾಯಿಸಿದ್ದಾರೆ.

No comments

Post a Comment