ಮಡಿಕೇರಿ (web@timesofcoorg) :ಭಯಭೀತರಾಗದೆ,ಕೋವಿಡ್ ಮೂರನೇ ಅಲೆಯನ್ನು ಎದುರಿಸಿ ಎಂದು ವಿರಾಜಪೇಟೆ ನರ್ಸಿಂಗ್ ಹೋಮ್ ವೈದ್ಯರಾದ ಡಾಕ್ಟರ್ ಕಾರ್ಯಪ್ಪ ಕರೆ ನೀಡಿದರು.
ಹಾಲುಗುಂದ ಗ್ರಾಮ ಪಂಚಾಯತಿ ವತಿಯಿಂದ ನಡೆದ 75 ನೇ ಸ್ವಾತಂತ್ರ್ಯ ದಿನದ ಪ್ರಯುಕ್ತ ಗ್ರಾಮ ಪಂಚಾಯತಿ ವ್ಯಾಪ್ತಿಯ, ಆಶಾಕಾರ್ಯಕರ್ತೆಯರು,ಅಂಗನವಾಡಿ ,ಆರೋಗ್ಯ ಇಲಾಖೆ ಸಿಬ್ಬಂದಿ,ಮತ್ತು ಪಂಚಾಯತಿ ಸಿಬ್ಬಂದಿಗಳಿಗೆ ಏರ್ಪಡಿಸಲಾಗಿದ್ದ ಸನ್ಮಾನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು.
ಕೋವಿಡ್ ಎರಡನೇ ಅಲೆಯನ್ನು ನಾವು ಎದುರಿಸಿದ್ದೇವೆ.ಕೋವಿಡ್ ಬಗ್ಗೆ ಯಾವುದೇ ನಿರ್ಲಕ್ಷ್ಯ ಬೇಡ.ಧೈರ್ಯದಿಂದ ಮುಂದಿನ ದಿನಗಳಲ್ಲಿ ಬರಲಿರುವ ,ಕೋವಿಡ್ ಮೂರನೇ ಅಲೆಯನ್ನು ನಾವು ಎದುರಿಸಬೇಕಾಗಿದೆ.ಎಲ್ಲರೂ ಕೂಡ ಕೋವಿಡ್ ಕುರಿತು ಜಾಗೃತಿ ಮೂಡಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳಲು ವೈದ್ಯರಾದ ಕಾರ್ಯಪ್ಪ ಕರೆ ನೀಡಿದರು.
ಲೋಪಮುದ್ರ ಆಸ್ಪತ್ರೆಯ ವೈದ್ಯರಾದ,ಅಮೃತ್ ನಾಣಯ್ಯ ಮಾತನಾಡಿ, ಕೋವಿಡ್ ಮೂರನೇ ಅಲೆಯ ಬಗ್ಗೆ ಯಾವುದೇ ಭಯಬೇಡ.ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸಿ,ಧೈರ್ಯದಿಂದ ನಾವೆಲ್ಲರೂ ಕೋವಿಡ್ ಮೂರನೇ ಅಲೆಯನ್ನು ಗೆಲ್ಲಬೇಕಾಗಿದೆ ಎಂದರು.ಕಣ್ಣಂಗಾಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾದ,ಹೇಮಾವತಿ ಮಾತನಾಡಿ,ಕೋವಿಡ್ ಸಮಯದಲ್ಲಿ ಯಾವುದೇ ಭಯವಿಲ್ಲದೇ,ತಮ್ಮ ಆರೋಗ್ಯವನ್ನು ಕೂಡ ಲೆಕ್ಕಿಸದೇ,ಆಶಾಕಾರ್ಯಕರ್ತೆಯರು,ಅಂಗನವಾಡಿ, ಆರೋಗ್ಯ ಇಲಾಖೆ ಸಿಬ್ಬಂದಿಗಳ ಕೆಲಸವನ್ನು ನಾವು ಮರೆಯುವಂತಿಲ್ಲ.ಸದಾ ಅವರ ಕೆಲಸವನ್ನು ಗುರುತಿಸಿ ಪ್ರೋತ್ಸಾಹಿಸಬೇಕಾಗಿದೆ ಎಂದರು.
ಹಾಲುಗುಂದ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೋವಿಡ್ ರೋಗಿಗಳನ್ನು ವಾಹನದಲ್ಲಿ ಆಸ್ಪತ್ರೆಗೆ ಸಾಗಿಸುತ್ತಿದ್ದ ಚಾಲಕ ಜಾಫರ್, ಆಶಾಕಾರ್ಯಕರ್ತೆಯರು,ಅಂಗನವಾಡಿ, ಆರೋಗ್ಯ ಇಲಾಖೆ ಸಿಬ್ಬಂದಿಗಳು,,ಕೊರೊನ ರೋಗಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಉಚಿತವಾಗಿ ವಾಹನ ನೀಡಿದ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಪಂದಿಕಂಡ ದಿನೇಶ್(ಕುಶ) ರವರನ್ನು ಗ್ರಾಮ ಪಂಚಾಯತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕಾಂಚನ ಎ.ಜಿ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸೀತಮ್ಮ ವೈ.ಬಿ, ಹಾಲುಗುಂದ ಗ್ರಾಮದ ಅಧ್ಯಕ್ಷರಾದ ಎಂ.ನಾಣಯ್ಯ,ಕೊಂಡಂಗೇರಿ ಜಮಾಹತ್ ಅಧ್ಯಕ್ಷ ಯೂಸುಫ್,ಬೈರಂಬಾಡ ದೇವಸ್ಥಾನ ಸಮಿತಿ ಅಧ್ಯಕ್ಷ ಎಂ.ಬೆಳ್ಳಿಯ್ಯಪ್ಪ,ಹಾಲುಗುಂದ ಶಾಲಾ ಮುಖ್ಯೋಪಾಧ್ಯಾಯರಾದ ಭವಾನಿ, ಗ್ರಾಮ ಪಂಚಾಯತಿ ಸದಸ್ಯರಾದ ಅಬ್ದುರಹಮಾನ್,ಎಂ.ಎ ಪೂವಯ್ಯ ಹಾಗೂ ಗ್ರಾಮ ಪಂಚಾಯತಿ ಎಲ್ಲಾ ಸದಸ್ಯರು ಹಾಜರಿದ್ದರು.
No comments
Post a Comment