ಕೊಡಗು ಜಿಲ್ಲೆಯಲ್ಲಿ ಇಂದು 20 ಹೊಸ ಕೋವಿಡ್ ಪ್ರಕರಣಗಳು ಧೃಡ : ಸೋಂಕಿತರ ಸಂಖ್ಯೆ 151ಕ್ಕೆ ಏರಿಕೆ

No comments


ಮಡಿಕೇರಿ (Times of Coorg) : ಕೊಡಗು ಜಿಲ್ಲೆಯಲ್ಲಿ ಈ ದಿನ  20 ಕೋವಿಡ್ ಸೋಂಕು ಪ್ರಕರಣಗಳು ವರದಿಯಾಗಿವೆ.  ಬೆಳಿಗ್ಗೆ 10 ಪ್ರಕರಣಗಳು ವರದಿಯಾಗಿತ್ತು. ಇದರೊಂದಿಗೆ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 151ಕ್ಕೆ ಏರಿಕೆಯಾಗಿದೆ. 68 ಪ್ರಕರಣಗಳು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, 88 ಸಕ್ರಿಯ ಪ್ರಕರಣಗಳಿವೆ.01 ಮೃತ ಪಟ್ಟ ಪ್ರಕರಣಗಳು.

ಇಂದು ಸಂಜೆ ವರದಿಯಾದ ಪ್ರಕರಣಗಳು
:
• ಸೋಮವಾರಪೇಟೆ ತಾಲ್ಲೂಕು ಕುಸುಬೂರು (ಹಳ್ಳದಿಣ್ಣೆ) ಗ್ರಾಮದ 41 ವರ್ಷದ ಪುರುಷ ಬ್ಯಾಂಕ್ ಉದ್ಯೋಗಿಯೊಬ್ಬರಿಗೆ ಸೋಕು ದೃಢಪಟ್ಟಿದೆ.

. ಸೋಮವಾರಪೇಟೆ ತಾಲ್ಲೂಕು ಬೆಸ್ತೂರು ಗ್ರಾಮದ 30 ವರ್ಷದ ಪುರುಷ ಬ್ಯಾಂಕ್ ಉದ್ಯೋಗಿಯೊಬ್ಬರಿಗೆ ಸೋಕು ದೃಢಪಟ್ಟಿದೆ.

. ಸೋಮವಾರಪೇಟೆ ತಾಲ್ಲೂಕಿನ ಬಳಗುಂದ ಗ್ರಾಮದಲ್ಲಿ ಈ ಹಿಂದೆ ಸೋಂಕು ದೃಢಪಟ್ಟ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 41 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ.

. ಸೋಮವಾರಪೇಟೆ ತಾಲ್ಲೂಕು ಶನಿವಾರಸಂತೆಯ ಗುಡುಗಳಲೆ ಗ್ರಾಮದಲ್ಲಿ ಈ ಹಿಂದೆ ಸೋಂಕು ದೃಢಪಟ್ಟಿದ್ದ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 32 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ

. ವಿರಾಜಪೇಟೆ ತಾಲ್ಲೂಕಿನ ಗೋಣಿಕೊಪ್ಪದ ಎಂ.ಎಂ.ಲೇ ಔಟ್ ನಲ್ಲಿ ಈ ಹಿಂದೆ ಸೋಂಕು ದೃಢಪಟ್ಟ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 34 ವರ್ಷದ ಮಹಿಳೆಯೊಬ್ಬರಿಗೆ ಸೋಂಕು ದೃಢಪಟ್ಟಿದೆ.

. ವಿರಾಜಪೇಟೆ ತಾಲ್ಲೂಕು ಕೆದಮುಳ್ಳೂರು ಗ್ರಾಮದ ಜ್ವರ ಲಕ್ಷಣಗಳಿದ್ದ 50 ವರ್ಷದ ಮಹಿಳೆಯೊಬ್ಬರಿಗೆ ಸೋಂಕು ದೃಢಪಟ್ಟಿದೆ.

. ವಿರಾಜಪೇಟೆ ತಾಲ್ಲೂಕಿನ ಗೋಣಿಕೊಪ್ಪದ ನೇತಾಜಿ ಲೇ ಔಟ್ ನಲ್ಲಿ ಈ ಹಿಂದೆ ಸೋಂಕು ದೃಢಪಟ್ಟಿದ ವ್ಯಕ್ತಿಯ ಪ್ರಾಥಮಿಕ ಸಂಪರ್ಕಗಳಾದ 21  ಮತ್ತು 48 ವರ್ಷದ ಮಹಿಳೆಯರಿಗೆ ಸೋಂಕು ದೃಢಪಟ್ಟಿದೆ.

. ಮಡಿಕೇರಿ ಪಟ್ಟಣದ ಭಗವತಿ ನಗರದ ನಿವಾಸಿ, ಖಾಸಗಿ ರೆಸಾರ್ಟ್ ನಲ್ಲಿ ಉದ್ಯೋಗಿಯಾಗಿರುವ 31 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ.

. ಮಡಿಕೇರಿಯ ಪೊಲೀಸ್ ವಸತಿ ಗೃಹದ 38 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ.

*ಜಿಲ್ಲೆಯಲ್ಲಿ ಹೊಸದಾಗಿ 07 ನಿಯಂತ್ರಿತ ಪ್ರದೇಶಗಳನ್ನು ತೆರೆಯಲಾಗಿದೆ.  ವಿವರ ಕೆಳಕಂಡಂತಿದೆ.*
• ಕುಸಬೂರು (ಹಳ್ಳದಿಣ್ಣೆ), ಸೋಮವಾರಪೇಟೆ ತಾಲ್ಲೂಕು
. ಬೆಸ್ತೂರು, ಕೊಡ್ಲಿಪೇಟೆ, ಸೋಮವಾರಪೇಟೆ ತಾಲ್ಲೂಕು
. ಬಳಗುಂದ, ಸೋಮವಾರಪೇಟೆ ತಾಲ್ಲೂಕು
. ಗುಡುಗಳಲೆ, ಶನಿವಾರಸಂತೆ ಸೋಮವಾರಪೇಟೆ ತಾಲ್ಲೂಕು
. ಭಗವತಿ ನಗರ, ಮಡಿಕೇರಿ
. ಪೊಲೀಸ್ ವಸತಿ ಗೃಹ, ಮಡಿಕೇರಿ
. ಕೆದಮುಳ್ಳೂರು ಗ್ರಾಮ, ವಿರಾಜಪೇಟೆ ತಾಲ್ಲೂಕು

*ಘೋಷ್ವಾರೆ*
ಜಿಲ್ಲೆಯಲ್ಲಿ ವರದಿಯಾದ ಸೋಂಕಿತ ಪ್ರಕರಣಗಳು : 151
ಆಸ್ಪತ್ರೆಯಿಂದ ಬಿಡುಗಡೆಗೊಂಡ ಪ್ರಕರಣಗಳು: 62
ಸಕ್ರಿಯ ಪ್ರಕರಣಗಳು: 88
ಮೃತ ಪಟ್ಟ ಪ್ರಕರಣಗಳು: 01
ಒಟ್ಟು ನಿಯಂತ್ರಿತ ಪ್ರದೇಶಗಳು: 61

No comments

Post a Comment