ಸಿದ್ಧಾಪುರ (Times Of Coorg) : ಕೊಡಗು ಜಿಲ್ಲೆಯಲ್ಲಿ ದಿನೇ ದಿನೆ ಏರಿಕೆಯಾಗುತ್ತಿರುವ ಕೋರೊನಾ ಇದೀಗ ಪಾಲಿಬೆಟ್ಟದ ಕಾಫಿ ತೋಟದ ಕಾರ್ಮಿಕ ದಂಪತಿಗಳಿಬ್ಬರಿಗೂ ಕಾಣಿಸಿಕೊಂಡಿದೆ.
ಕರೋನಾ ವೈರಸ್ ಪತ್ತೆಯಾದ ದಂಪತಿಗಳಿಬ್ಬರನ್ನು ಮಡಿಕೇರಿ ಕೋವಿಡ್-19 ಆಸ್ಪತ್ರೆಗೆ ದಾಖಲು ಮಾಡಿದ್ದಾರೆ .
ಟಾಟಾ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ದಂಪತಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.__೫೫ ವರ್ಷದ ಪುರುಷ ಹಾಗೂ ೪೮ ವರ್ಷದ ಮಹಿಳೆಯಲ್ಲಿ ಸೋಂಕು ದೃಢವಾಗಿದ್ದು, ಕೆಲ ತಿಂಗಳ ಹಿಂದೆ
ಚೆನೈಗೆ ತೆರಳಿದ್ದರು. ಕಳೆದ ೧೫ ದಿನಗಳ ಹಿಂದೆ ದಂಪತಿ ಚೆನ್ನೈನಿಂದ ಪಾಲಿಬೆಟ್ಟಕ್ಕೆ ಹಿಂತಿರುಗಿದ್ದರು.ಮನೆ ಸಂಪರ್ಕ ತಡೆಯಲಿದ್ದ ಇಬ್ಬರು ಆರೋಗ್ಯದಲ್ಲಿ ಏರುಪೇರು ಕಂಡ ಹಿನ್ನೆಲೆ ಗಂಟಲು ದ್ರವ ಪರೀಕ್ಷೆ ಮಾಡಲಾಗುತ್ತಿತ್ತು ಇದೀಗ ವರದಿಯಲ್ಲಿ ಪಾಸಿಟಿವ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ
ಸೋಂಕಿತ ವಾಸವಾಗಿದ್ದ ಐವತ್ತು ಕುಟುಂಬಗಳ ಏರಿಯಾದಲ್ಲಿ ಸೀಲ್‌ಡೌನ್ ಮಾಡಲಾಗಿದೆ.
ಸ್ಥಳಕ್ಕೆ ತಾಲೂಕು ವೈದ್ಯಾಧಿಕಾರಿ ಯತಿರಾಜ್ ಸದಾ ಪ್ರಕರಣ ಅಧಿಕಾರಿ ಮೋಹನ್ ರಾಜ್ ತಹಸೀಲ್ದಾರ್ ನಂದೀಶ್ ಸೇರಿದಂತೆ ಮತ್ತಿತರರು ಭೇಟಿ ನೀಡಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ .

No comments
Post a Comment