**
ಮಡಿಕೇರಿ (Times Of Coorg) : ಕೊಡಗು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯಾಗಿದ್ದ ಡಾ.ಸುಮನ್ ಡಿ ಪನ್ನೇಕರ್ ಅವರನ್ನು ವರ್ಗಾವಣೆ ಮಾಡಲಾಗಿದೆ. ನೂತನ ವರಿಷ್ಠಾಧಿಕಾರಿಯಾಗಿ ಕ್ಷಮಾ ಮಿಶ್ರ ನೇಮಕವಾಗಿದ್ದಾರೆ. ಡಾ.ಸುಮನ್ ಡಿ ಪನ್ನೇಕರ್ ಅವರನ್ನು CAR UNITನ ಬೆಂಗಳೂರಿನ ಹೆಡ್ ಕ್ವಾಟರ್ಸ್ ನ ಡೆಪ್ಯೂಟಿ ಕಮಿಷನರ್ ಆಫ್ ಪೋಲಿಸ್ ಆಗಿ ನೇಮಕ ಮಾಡಲಾಗಿದೆ. 2 ವರ್ಷಗಳಿಂದ ಕೊಡಗು ಜಿಲ್ಲೆಯ ವರಿಷ್ಠಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ ಜನರ ಪ್ರೀತಿ ವಿಶ್ವಾಸ ಗಳಿಸಿದ್ದರು. ಕೊಡಗು ಜಿಲ್ಲೆಯ ಹಲವು ಸಂಕಷ್ಟ ಸಂಧರ್ಭದಲ್ಲಿ ಅವರ ಕಾರ್ಯ ನಿರ್ವಹಣೆ ಶ್ಲಾಘನೀಯ. ಕೊಡಗಿನ ಜಿಲ್ಲೆಯಲ್ಲಿ ವ್ಯಾಪಿಸಿದ್ದ ಗಾಂಜಾ, ಕಳ್ಳತನ ಮುಂತಾದ ಅಕ್ರಮಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದರು.


No comments
Post a Comment