ಸಬ್ಬಮ್ಮ ದೇವಿ ಸುಗ್ಗಿ ಉತ್ಸವ ರದ್ದು


ಸೋಮವಾರಪೇಟೆ (TIMES OF COORG):- ಸಮೀಪದ ತೋಳುರುಶೆಟ್ಟಳ್ಳಿ ಗ್ರಾಮದ ನೂರಾರು ವರ್ಷಗಳಿಂದ ಬಹಳ ಶ್ರದ್ಧಾ ಭಕ್ತಿಯಿಂದ ಆಚರಿಸಿಕೊಂಡು ಬಂದಿದ್ದ ಸಂಭ್ರಮದ ಶ್ರೀ ಸಬ್ಬಮ್ಮ ದೇವಿ ಉತ್ಸವವನ್ನು ಪ್ರಸಕ್ತ ವರ್ಷ ರದ್ದು ಗೊಳಿಸಲಾಗಿದೆ ಎಂದು ಉತ್ಸವ ಸಮಿತಿಯ ಅಧ್ಯಕ್ಷ ರಾಜಗೋಪಾಲ್ ತಿಳಿಸಿದ್ದಾರೆ. ಕಳೆದ ನೂರಾರು ವರ್ಷಗಳಿಂದ ಕೂತಿನಾಡು ಸೇರಿದಂತೆ ಸುತ್ತ ಮುತ್ತಲ ಗ್ರಾಮಗಳ ಸಾವಿರಾರು ಭಕ್ತಾದಿಗಳು ಸೇರಿ ವಿಜೃಂಭನೆಯಿಂದ ನಡೆಸಿಕೊಂಡು ಬರುತ್ತಿದ್ದ ಹಬ್ಬ ಈ ವರ್ಷ ಮಹಾಮಾರಿ ಕೋರೋನ ವೈರಸ್ ಸೋಂಕು ಹಿನ್ನೆಲೆ ನಡೆಸದೆ ಇರಲು ತೀರ್ಮಾನಿಸಲಾಗಿದೆ. 
ಈ ಹಿಂದೆ ತಾ-೩೦ ರಂದು ಉತ್ಸವ ನಡೆಸಲು ದಿನಾಂಕ ನಿಗದಿಪಡಿಸಲಾಗಿತ್ತು. ಇದೀಗ ಉತ್ಸವವನ್ನು ರದ್ದು ಗೊಳಿಸುವುದರಿಂದ ಅಂದು ಯಾವುದೇ ಭಕ್ತಾದಿಗಳಿಗೆ ದೇವಿಯ ದರ್ಶನ ಇರುವುದಿಲ್ಲ ಎಂದು ಗೋಪಾಲ್ ತಿಳಿಸಿದ್ದಾರೆ.ಸಬ್ಬಮ್ಮ ದೇವಿ ಸುಗ್ಗಿ ಉತ್ಸವ ರದ್ದುಸೋಮವಾರಪೇಟೆ ಸಮೀಪದ ತೋಳುರುಶೆಟ್ಟಳ್ಳಿ ಗ್ರಾಮದ ನೂರಾರು ವರ್ಷಗಳಿಂದ ಬಹಳ ಶ್ರದ್ಧಾ ಭಕ್ತಿಯಿಂದ ಆಚರಿಸಿಕೊಂಡು ಬಂದಿದ್ದ ಸಂಭ್ರಮದ ಶ್ರೀ ಸಬ್ಬಮ್ಮ ದೇವಿ ಉತ್ಸವವನ್ನು ಪ್ರಸಕ್ತ ವರ್ಷ ರದ್ದು ಗೊಳಿಸಲಾಗಿದೆ ಎಂದು ಉತ್ಸವ ಸಮಿತಿಯ ಅಧ್ಯಕ್ಷ ರಾಜಗೋಪಾಲ್ ತಿಳಿಸಿದ್ದಾರೆ. ಕಳೆದ ನೂರಾರು ವರ್ಷಗಳಿಂದ ಕೂತಿನಾಡು ಸೇರಿದಂತೆ ಸುತ್ತ ಮುತ್ತಲ ಗ್ರಾಮಗಳ ಸಾವಿರಾರು ಭಕ್ತಾದಿಗಳು ಸೇರಿ ವಿಜೃಂಭನೆಯಿಂದ ನಡೆಸಿಕೊಂಡು ಬರುತ್ತಿದ್ದ ಹಬ್ಬ ಈ ವರ್ಷ ಮಹಾಮಾರಿ ಕೋರೋನ ವೈರಸ್ ಸೋಂಕು ಹಿನ್ನೆಲೆ ನಡೆಸದೆ ಇರಲು ತೀರ್ಮಾನಿಸಲಾಗಿದೆ. 
ಈ ಹಿಂದೆ ತಾ-೩೦ ರಂದು ಉತ್ಸವ ನಡೆಸಲು ದಿನಾಂಕ ನಿಗದಿಪಡಿಸಲಾಗಿತ್ತು. ಇದೀಗ ಉತ್ಸವವನ್ನು ರದ್ದು ಗೊಳಿಸುವುದರಿಂದ ಅಂದು ಯಾವುದೇ ಭಕ್ತಾದಿಗಳಿಗೆ ದೇವಿಯ ದರ್ಶನ ಇರುವುದಿಲ್ಲ.